ಪುಟ:Vimoochane.pdf/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಏನಾಗಿದೆ ಶೇಖರ್ ? ಏನಾಗಿದೆ ಬಾಷಾ ? ಮೈ ಚೆನಾ ಗಿಲ್ವಾ__ಏನಾಗಿದೆ?"

ಅದೊಂದು ಕಾಹಿಲೆ; ಏನಾಗಿದೆ ಎಂದು ಬೇರೆಯವರಿಗೆ ವಿವರಿಸ ಲಾಗದಂತಹ ಕಾಹಿಲೆ.

ಪ್ರಾಯಶಃ ಚಲಂ ಮೇಲಿನ ವ್ಯವಹರಣೆಯಲ್ಲದೆ ಹೋಗಿದ್ದರೆ ನನಗೆ ಏನಾಗುತಿತ್ತೋ ಹೇಳಲಾರೆ. ಆದರೆ ಸದ್ಯಃ ನನ್ನ ಹಿರಿಯ ಸೋದರನಂತಿದ್ದ ಒಬ್ಬನ ರಕ್ಷಣೆಯ ಕೆಲಸದ ನಡುವೆ ನಾನು ಬದುಕಿ ಉಳಿದೆ. ಸಾವಿತ್ರಿಯ ಆಭರಣಗಳು ಸರಾ‍ಘಕಟ್ಟೆ ಸೇರಿದುವು. ವಕೀ ಲರ ಕರಿಯ ಕೋಟನ ಚೀಲಗಳು ತುಂಬಿದುವು. ವಿಚಾರಣೆ ನಡೆ ಯಿತು.

ನ್ಯಾಯಾಸ್ಥಾನಗಳ ಈ ವಿಚಾರಣೆಯ ಬಗ್ಗೆ ನಾನು ಬರೆಯ ಬಾರದು. ಆಲ್ಲಿ ವಿಚಾರಣೆ ಎಂಬುದು ಒಂದು ದೊಡ್ಡ ತಮಾಷೆ. ಕರಿಯ ಕೋಟು ಧರಿಸಿದವರು, ತಮ್ಮದು ಬಿಳಿಯ ಕೋಟೆಂದು ಅಲ್ಲಿ ಸಾಧಿಸುತಿದ್ದರು. ಬಿಳಿಯ ರುಮಾಲು ಹೊತ್ತಿದ್ದವರು, ತಮ್ಮ ರುಮಾಲು ಕರಿಯದೆಂದು ಹಟತೊಡುತಿದ್ದರು. ಮಟಮಟ ಮಧ್ಯಾಹ್ನವನ್ನು ನಡುರಾತ್ರೆಯೆಂದು ಪ್ರಮಾಣ ಬದ್ಧವಾಗಿ ಪ್ರತಿಪಾದಿಸುವ ಅವರ ವೈಖರಿ! "ದೇವರಾಣೆಯಾಗಿ ಸತ್ಯ ಹೇಳ್ತೀನಿ" ಸಾಕ್ಷಿಗಳು ಬೇರೆ!.. ....ನಾನು, ಚಲಂ ವಿಚಾರಣೆ ಯಾಗುತ್ತಿದ್ದಾಗ ನ್ಯಾಯಾಸ್ಥಾನಕ್ಕೆ ಹೋಗುತ್ತಿರಲಿಲ್ಲ. ಆದರೆ ಆ ಆಸ್ಥಾನದೊಳಗಿನ ನಾಟಕವೆಲ್ಲ ಇಂಥದೇ ಎಂದು ನನಗೆ ತಿಳಿದಿತ್ತು.

ಆ ಅವಧಿಯಲ್ಲಿ ಚಲಂ ಬಳಗ ಮೆಲ್ಲಮೆಲ್ಲನೆ ಕರಗಿ ಹೋದು ದನ್ನು ನಾನು ಕಂಡೆ.

ಮೂರು ತಿಂಗಳಲ್ಲೆ ತೀರ್ಪು ಹೊರಬಿತ್ತು. ಏಳು ವರ್ಷ ಮತ್ತು ಐದು ವರ್ಷ__ಒಟ್ಟು ಹನ್ನೆರಡು ವರ್ಷಗಳ ಸಶ್ರಮ ಸಜೆಯನ್ನು ಚಲಂಗೆ ವಿಧಿಸಿದ್ದರು

ನಾನ್ನು ವಕೀಲ ಮಾಧವರಾಯರನ್ನು ಕಾಣಲು ಮತ್ತೆ ಹೋಗ ಲಿಲ್ಲ. ಸತ್ಯದ ನ್ಯಾಯದ ಹೆಸರಿನಲ್ಲಿ ಭರ್ಜರಿಯಾಗಿ ದಕ್ಷಿಣೆ ಪಡೆದು