ಪುಟ:Vimoochane.pdf/೨೪೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ತಮ್ಮ ಕೆಲಸವನ್ನು ಅವರು ಮಾಡಿದ್ದರು.

.......ಚಲಂನನ್ನು ನಂಬಿಕೊಂಡು ನಮ್ಮೂರಿಗೆ ಬಂದಿದ್ದ ಆ ಸಾವಿತ್ರಿಯ ಕೊನೆಯ ಭೇಟಿ....... ಗಂಟು ಮೂಟೆ ಕಟ್ಟಿಕೊಂಡು ಮಗನನ್ನೆತ್ತಿಕೊಂಡು ಕಣ್ಣೀರಿನ ಎರಡು ಕಾಲಿವೆಗಳನ್ನು ಹರಿಯ ಬಿಡುತ್ತಾ ಅವಳು ನಿಂತಿದ್ದಳು....

"ಬರ್ತೀನಪ್ಪಾ..... ಆತ ದೇವರ ಹಾಗಿದ್ದ ....... ಆತನನ್ನೇ ನಂಬಿದ್ದೆ..... ಇದು ಅವನು ಕೊಟ್ಟುಹೋದ ಸಂತಾನ..... ಇನ್ನು ಯಾರು ಗತಿ ನನಗೆ? ಯಾರು ಗತಿ?"

"ಅಮ್ಮಾ ಈ ಊರು ಇಷ್ಟವಾದರೆ ಇಲ್ಲೇ ಇರು. ಚಲಂ ಬರು ವರೆಗೂ ನಿನಗೆ ಯಾವ ತೊಂದರೆಯೂ ಆಗದ ಹಾಗೆ ನೋಡ್ಕೋ ತೀನಿ."

ಅದು ಔಪಚಾರಿಕವಾಗಿ ನಾನು ಹೇಳಿದ ಮಾತು......... ಆದರೆ ಹೃದಯ ಬೇರೆಯೇ ಹೇಳುತಿತ್ತು:

"ನಿನಗೆ ಇದೊಂದೂ ಬೇಡ........... ಹೇಗೋ ಒದಗಿ ಬಂದಿದೆ...... ಇದು ಇಲ್ಲಿಗೇ ಕೊನೆಗಾಣಲಿ....."

ಸಾವಿತ್ರಿ, ಕಣ್ಣೀರೊರೆಸಿಕೊಳ್ಳುತ್ತಾ ಹೇಳಿದಳು:

"ಬೇಡವಪ್ಪಾ........ ಮದರಾಸಿಗೇ ಹೋಗ್ತೀನಿ..... ಗುರುತಿ ನವರಿದ್ದಾರೆ...."

ಮದರಾಸು__ಗುರುತಿನವರು__....ನಾನು ನೆಟ್ಟ ದೃಷ್ಟಿಯಿಂದ ಅರೆಕ್ಷಣ ಅವಳನ್ನು ನೋಡಿದೆ. ಈ ಹೆಣ್ಣು ಧರ್ಮದ ಹಾದಿಯಲ್ಲೆ ಸಾಗಿ ದುಡಿದು ಆ ಮಗನನ್ನು ದೊಡ್ಡವಳಾಗಿ ಮಾಡುವಳೆಂಬುದು ಅರ್ಥವಿಲ್ಲದ ಮಾತು. ಆದರೆ ಧರ್ಮದ ಹಾದಿ ಯಾವುದು? ಧರ್ಮ ವೆಂದರೇನು?

"ನನ್ನ ಮರೀಬೇಡಿ ಅಕ್ಕಾ.....ಅಕ್ಕಾ...."

ಆ ಸಾವಿತ್ರಿ ಹೊರಟುಹೋದಳು.

ಎಲ್ಲವೂ ಬರಿದು ಬರಿದಾಗಿತ್ತು ನನ್ನೆದುರು...... ಹೆಜ್ಜೆಹೆಜ್ಜೆಗೂ ನನ್ನನ್ನು ಇದಿರಿಸುತ್ತಿದ್ದ ಶೂನ್ಯ.