ಪುಟ:Vimoochane.pdf/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

...ಭಾನುವಾರ

ಭಾನುವಾರ ಎಂದೊಡನೆ ವಿಶಿಷ್ಟ ಭಾವನೆಗಳು ಉಂಟಾಗುತ್ತದೆ. ದುಡಿಯುವವರಲ್ಲಿ. ಅದು ರಜಾ ದಿನ, ಕಂಪನಿ ಸರಕಾರದ ಕೆಳಗೆ ನಾವು ಗುಮಾಸ್ತೆಗಳಾಗತೊಡಗಿದಂದಿನಿಂದ, ತಲೆತಲಾಂತರಗಳಿಂದ, ಈ ದೇಶದಲ್ಲಿ ಭಾನುವಾರದೊಂದು ರಜಾ ದಿನವಾಗಿದೆ.

ಆದರೆ ನನ್ನ ಪಾಲಿಗೆ ಎಲ್ಲವೂ ರಜಾದಿನಗಳೇ...ಎಲ್ಲವೂ ದುಡಿ ಯುವ ದಿನಗಳೇ. ಈಗ ಈ ಸೆರೆಮನೆಯಲ್ಲೂ ಅಷ್ಟೇ: ಹಿಂದೆ ಆ ಸೆರೆ ಮನೆಯಲ್ಲೂ ಅಷ್ಟೆ.

ಹಿಂದಿನ ಆ ಸೆರೆಮನೆಯೆಂದು ಸಂಬೋಧಿಸುತ್ತಿರುವುದು, ನಾನು ವಾಸವಾಗಿದ್ದ ಬಾಹ್ಯ ಜಗತ್ತನ್ನು.

ಬಿಡುಗಡೆಯನ್ನು ಇದಿರುನೋಡುತ್ತಿರುವ ನಾನೀಗ ಮುಖ ಕ್ಷೌರದ ಗೊಡವೆಗೆ ಹೋಗಬೇಕಾಗಿದ್ದಿಲ್ಲ. ಯಾರ ಪ್ರಿತ್ಯರ್ಥಕ್ಕಾಗಿ ಸಂತೃಪ್ತಿಗಾಗಿ ಈ ಮುಖ ಕ್ಷೌರ? ನನ್ನ ನುಣ್ಣನೆಯ ಮುಖವನ್ನು ಇನ್ನೊಬ್ಬರು ನೋಡುವುದರಿಂದ, ನನಗಿನ್ನು ಆಗಬೇಕಾದ ಲಾಭ ವೇನೂ ಇಲ್ಲ

ಹನ್ನೆರಡು ವರುಷಗಳಿಗೆ ಹಿಂದೆ, ನಾನು ಇಪ್ಪತ್ತಾರರ ಯುವಕ ನಾಗಿದ್ದಾಗಲೂ, ಹಾಗೆಯೇ ಆಯಿತು. ಆಗ ನಾನು ಪ್ರಪಂಚದ ಮೇಲೆಯೇ ಮುನಿದು ದೂರವಾಗಿದ್ದೆ. ಕಾದು ಬೆಂದಿದ್ದ ಹೃದಯದ ಮೇಲೆ ನಿರಾಸೆಯ ತಣ್ಣೀರೆರಚಿ ಕೆಡಿಸಿದ್ದರು ಕೆಟ್ಟವರು. ಹೆಣ್ಣೊಂದು ನನ್ನ ಜೀವನದ ಒಳ ಪ್ರವೇಶಿಸಿದಾಗ, ನೇರವಾದೊಂದು ಹೊಸ ದಾರಿ ಯನ್ನು ಹಿಡಿಯಲು ನಾನು ಇಚ್ಚಿಸಿದೆ. ಆದರೆ ಅವರು ಬರಬೇಡ ವೆಂದರು. ಆ ಹೆಣ್ಣು ನನ್ನನ್ನು ಅಣಕಿಸಿ ಅವಮಾನಿಸಿತು....ಆಗ