ಪುಟ:Vimoochane.pdf/೨೪೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

"ಏನು ತರಿಸ್ಲಿ ಹೇಳು?"

"ಚಂದ್ರೂ....ನಾನು ಇಲ್ಲಿ ಕೂತಿರೋಕೆ ಆಗಲ್ಲ. ಕೊಂಡು ಕೊಂಡದ್ದಾಯ್ತು. ಇನ್ನು ಮನೆಗೆ....ನಡಿ ಹೋಗೋಣ."

"ನಾನು? ನಾನು?"

"ನೀನೆ. ನಡಿ ಹೋಗೋಣ."

ಯೋಚಿಸಲು ಸಮಯವಿರಲಿಲ್ಲ. ಸಮಯವಿದ್ದಳೂ ಯೋಚಿ ಸುತಿದ್ದೆನೋ ಇಲ್ಲವೋ.. ಹಣದ ಪಾಕೀಟಗಾಗಿ ನಾನು ತಡವರಿಸಿದೆ. ಶೀಕಂಠ ಬಿಲ್ ನೋಡುತ್ತ ರೂಪಾಯಿಯ ಮೂರು ನಾಣ್ಯಗಳನ್ನು ಟ್ರೀಯ ಮೇಲಿರಿಸಿದ. ಕಾಣಿಕೆಯ ಎರಡಾಣೆಯೂ ಹೊರಬಿತ್ತು.

ಹೊರಗೆ ಕಾರು ನಿಂತಿತ್ತು. ಶ್ರೀಕಂಠನೇ ಚಾಲಕ. ಶಾರದಾ ಇರಲಿಲ್ಲ........ಯಾರೂ ಇರಲಿಲ್ಲ....

"ಒಬ್ನೇ ಇದೀಯೇನು?"

ಆತ ಮಾತನಾಡಲಿಲ್ಲ. ವೇಗ ವೇಗವಾಗಿ ಕಾರು ಓಡಿಸಿದ.

ಊರಿನ ಹೊರಗೆ ವಿಸ್ತರಣದಲ್ಲಿ ಸೊಗಸಾದ ಆ ಮಹಡಿ ಮನೆ ಇತ್ತು. ಹೆಬ್ಬಾಗಿಲಲ್ಲೆ ಆಲ್ಸೇಷಿಯನ್ ನಾಯಿಯ ಸ್ವಾಗತ." ಬುದ್ದೀ ಬುದ್ದೀ" ಎನ್ನುತ್ತ ಬಾಗಿ ಬಾಗಿ ಓಡುತಿದ್ದ ಆಳುಮಕ್ಕಳಿಬ್ಬರು.

ಕಾರಿನೊಳಗಿದ್ದ ಪತ್ರಿಕೆ ಪುಸ್ತಕ ಬಾಟಲಿಗಳು ಮೇಲೆಹೋದುವು.

"ಬಾ ಚಂದ್ರೂ. ಮೇಲಕ್ಕೆ ಬಾ....ನನ್ ರೂಮಿಗೆ."

..ಹಾಗೆ ನಾನು ಮೇಲಕ್ಕೆ ಹೋದೆ. ನನ್ನದಲ್ಲದ ಒಂದು ಲೋಕ ಮತ್ತೆ ಕರೆದಿತ್ತು.

"ಚಂದ್ರೂ ಹೀಗ್ಯಾಕಿದೀಯಾ?"

"ಹ್ಯಾಗಿದೀನಿ?"

"ಕನ್ನಡೀಲಿ ನೋಡ್ಕೊ."

ಆ ಕೊಠಡಿಯಲ್ಲಿ ಎರಡು ದೊಡ್ಡ ನಿಲುವುಗನ್ನಡಿಗಳಿದ್ದುವು. ಪ್ರತಿ ಹೆಚ್ಚೆಗೂ ಪ್ರತಿಬಿಂಬ ಕಾಣುವಂತೆ ಯಾಕೆ ಆಂಥ ಕನ್ನಡಿಗಳನ್ನಿ ಡುವರೊ! ವಿಸ್ತ್ತಾರವಾದ ಜಾಗದಲ್ಲಿ ಓರಣವಾಗಿ ಸೋಫಾಗಳನ್ನಿರಿಸಿ ದ್ದರು. ಯಾವುದೋ ದೇಶದ ನಿಸರ್ಗ ಸೌಂದರ್ಯವನ್ನು ತೋರಿಸುವ