ಪುಟ:Vimoochane.pdf/೨೪೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಎರಡು ಮೂರು ಚಿತ್ರಗಳಿದ್ದುವು ಗೋಡೆಯ ಮೇಲೆ. ವಿಶಾಲವಾದ ಕಿಟಕಿಗಳಿಗೆ ತೆಳುವಾದ ಬಣ್ಣದ ಬಟ್ಟೆಯ ಕಮಾನು ಕಟ್ಟದ್ದರು. ಆ ಕಿಟಿಕಿಯಾಚೆ ನಮ್ಮೂರು ಕಾಣಿಸುತ್ತಿತ್ತು-ಇನ್ನೂ ಎಚ್ಚರವಿದ್ದ ನಮ್ಮೂರು. ಸಹಸ್ರ ಚಿಕ್ಕೆಗ‍ಳಾಗಿ ವಿದ್ಯುದ್ದೀಪಗ‍ಳು ಕಾಣಿಸುತಿದ್ದುವು ....ಅಲ್ಲೇ ಎಲ್ಲೋ ಒಂದೆಡೆ ನನ್ನ ಮನೆ ಇರಬೇಕು....ಅದರಾಚೆಗೆ ಎಲ್ಲೋ ಆ ಹುಡುಗಿ....

"ಏನೋ ಇದು? ಕವಿ ನಿಂತ ಹಾಗೆ ನಿಂತೀದೀಯಲ್ಲೋ?"

ರಾತ್ರೆಯ ಪಾಯಜಾಮೆ ಗೌನು ತೊಟ್ಟು ಶ್ರೀಕಂಠ ನಗುತ್ತ ಕೇ‍ಳುತ್ತಿದ್ದ. ಅವನ ಅಂಗಾಂಗಗಳು ತುಂಬಿಕೊಂಡಿದ್ದುವು. ಆ ಕಣ್ಣುಗಳಲ್ಲಿ ದಿಟ್ಟತನವಿತ್ತು.

"ಸಂಕೋಚ ಪಟ್ಕೋಬೇಡವಮ್ಮಾ. ನಾನೊಬ್ನೇ ಇದೀನಿ

.......ಒಳಗೆ ವಾಷ್ ಬೇಸಿನ್ನಿದೆ, ಮುಖ ತೊಳಕೊ. ಬಟ್ಟೆ ಇಟ್ಟಿ ದೀನಿ, ಬದಲಾಯಿಸ್ನೊ."

........ನಾನು ಹೊಸಬನಾಗಿ ತೋರುತ್ತ ಕೊಠಡಿಗೆ ಹಿಂತಿರುಗಿ ಸೋಫಾದ ಮೇಲೆ ಒರಗಿ ಕುಳಿತೆ. ಕೇಳಿಯೂ ಕೇಳಿಸದಂತೆ ರೇಡಿಯೋ ಹಾಕುತ್ತ ಶ್ರೀಕಂಠನೆಂದ.

"ಇನ್ನು ಹೇಳು ನಿನ್ಕತೆ."

"ನಮ್ಮ ಬೊಂಬಾಯಿ ಫರ್ಮು ದಿವಾಳಿ ಎದ್ದೋಯ್ತು ಕಂಠಿ. ಸದ್ಯಕ್ಕೆ ಬೀದೀಲಿದೀನಿ."

"ಸರಿ. ಒಬ್ನೇನೊ ಇನ್ನೊ?"

"ಹೂನಪ್ಪಾ."

"ಭಾಗ್ಯವಂತ ನೀನು!"

ಆಡುಗೆಯ ಹುಡುಗ ಬಂದು ಹೋದ. ಇಬ್ಬರೂ ಊಟದ ಕೊಠಡಿಗೆ ಹೋದೆವು. ಆ ಕುರ್ಚಿ ಮೇಜು ಬಿಳಿಬಟ್ಟೆ ಸ್ವಚ್ಛವಾ ಗಿದ್ದುವು. ಊಟವೂ ಅಷ್ಟ. ಆದರೆ ನನಗೆ ಏನೂ ಸೇರಲಿಲ್ಲ. ಕತ್ತಲು ಕವಿದಿದ್ದ ಮೆದುಳಿಗೆ ಹೆದರಿ ನಾಲಿಗೆ ನಿರಾಕರಿಸಿತ್ತು. ಶ್ರೀ ಕಂಠನೂ ಉಂಡುದು ಸ್ವಲ್ಫವೇ........