ಪುಟ:Vimoochane.pdf/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊಠಡಿ ಸೇರಿದ ಮೇಲೆ ಗ್ಲಾಸುಗಳ ಸದ್ದು. ಶ್ರೀಕಂಠ ಬಾಗಿಲಿಗೆ ಆಗಣಿ ತಗಲಿಸಿದ, ಆತ ವ್ಹಿಸ್ಕಿ-ಸೋಡಾಗಳನ್ನು ಬೆರೆಸುತಿದ್ದಾಗ ಕೇಳಿದೆ.

"ಯಾವತ್ತಿಂದ ಆಭ್ಯಾಸ?"

"ಮೂರು ವರ್ಷಗಳಾದುವು ಚಂದ್ರೂ. ನಮ್ಮ ಶಾರದಾ ಮೊದಲ ಕಹಿ ಗುಟುಕು ಕೋಟ್ಟಮೇಲೆ ಇದಕ್ಕೆ ಆತುಕೊಂಡಿದ್ದೀನಿ."

"ಆದೇನು ಒಗಟು?"

ಅವನು ನೋವಿನ ನಗೆ ನಕ್ಕು. ಎರಡು ಗ್ಲಾಸುಗಳಲ್ಲೆ ಸುಲಭ ವಾಗಿ ಅವನ ನಾಲಿಗೆ ಸಡಿಲಿಕೊಂಡಿತು. ಆತನ ಆತ್ಮ ಕಥೆಯನ್ನು ಕೇಳುತ್ತ ಕುಳಿತೆ.

ಬಿ.ಎಸ್ ಸಿ. ಮುಗಿಸಿದ ಶ್ರೀಕಂಠ ಉದ್ಯೋಗ ಹುಡುಕಿಕೊಂಡು ಹೋಗಲಿಲ್ಲ , ಕುಳಿತಲ್ಲೆ ಹಣಸಂಪಾದಿಸುತಿದ್ದ ರಖಂ ವ್ಯಾಪಾರಿ ಯಾದ ಆತನ ಮಾವ ,ಆಳಿಯ ದೇವರನ್ನು ಪರೀಕ್ಷಿಸಿ ನೋಡಿದರು. ಅವರ ಒಬ್ಬಳೇ ಮಗಳು ಗಂಡ, ಸಾವಿರ -ಸಾವಿರದ ವ್ಯಾಪಾರದಲ್ಲಿ ನಿಷ್ಣಾ ತನಾಗಿ ಕಂಡುಬಂದ. ಊರ ವಿಸ್ತರಣದಲ್ಲಿ ನವ ದಂಪತಿಗಳಿಗಾಗಿ ಸ್ವಂತದ ಮನೆಯನ್ನು ಕಡಿಮೆಗೆ ಕೊಂಡುದಾಯಿತು.......ಶಾರದಾ ಬಂದಳು...... ಎಲ್ಲ ಸೌಕರ್ಯಗಳೂ ಬಂದವು. ಆದರೆ ಸುಖ- ಶಾಂತಿ?

"ಗಂಡ-ಹೆಂಡತಿ ಆಂದರೆ ಏನು ಚಂದ್ರೂ ? ಅದೇನು ಒಪ್ಪಂ ದವಾ ? ಆಕೆ ಪೂರ್ತಿ ಒಪ್ಪಿಗೆಯಿಲ್ಲದೆ, ಎಷ್ಟು ಬೇಕೊ ಅಷ್ಟನ್ನೇ ಕೊಡ್ತಿದ್ಲು. ಶ್ರೀಮಂತರ ಹುಡುಗೀನಪ್ಪಾ!......ಅದರೆ ನಾನು ಎಂಥಾ ಫೂಟ! ದುಡ್ದೊಂದಿದ್ದರೆ ಧಿಮಾಕು.. ಸ್ಥಾನ ಮಾನ ಏನು ಬೇ ಕಾದರೂ ಕೊಂಡ್ಕೋಬದಹುದು.......ಹುಂ. ಶಾರದಾ.....ನೀನು ಭಾಗ್ಯವಂತ ಚಂದ್ರೂ.....ನೀನು ಮದುವೆ ಬೇಡಿ ತೋಟ್ಕೂಂಡಿಲ್ಲ .......ವಿಷಯ ಗೊತ್ತೆ ಚಂದ್ರೂ?.......ಶಾರದಾ ಸ್ವಲ್ವ ವಿಚಿತ್ರ ಪಾಣಿ. ದೊಡ್ದ ಮನೆತನಾಂತ ಹೇಳಿದೆನಲ್ಲ? ಸಂಬಂಧಿಕರು ಗೆಳೆಯರು ಯಾರು ಯಾರೋ ಬರ್ತಿದ್ರು - ಹೋಗ್ತಿದ್ರು. ಅಂತೂ