ಪುಟ:Vimoochane.pdf/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಾರನ್ನೋ ಆಗ ಆಕೆ ಮೇಚ್ಚಿರಬೇಕು....ಈಗ? ಅವಳ್ನ ದೂರಬಾ ರೇನೋ ಅದು ನಿಜಾನ್ನು. ಆದರೆ ಒಮ್ಮೆ ನನ್ನ ಬಲಿ ತೆಗೆದುಕೊಂಡ್ಮೇಲೆ, ಹೊಸ ಎಂಟ್ರೀ ಪುಸ್ತಕ ಷುರು ಮಾಡ್ಮೇಕೋ ಬೇಡ್ವೊ?"....... "

ವೈಮನಸ್ಸು ಅನ್ನು ಹಾಗಾದರೆ. ಇಲ್ಲಿಗೆ ಬರೋದೇ ಇಲ್ವೇನು ಈಗ ?"

"ಹಾಗೇನಿಲ್ವಪ್ಪಾ....ಹೆರಿಗೆಗೆ ಹೋಗಿದಾರೆ ಸಾಹೇಬರು!.... ಇದೇ ಊರಲ್ಲೇ --ಆರು ಮೈಲ್ಲಿ ಆಚೆ ಇರೋ ತವರ್ಮನೆಗೆ !"

"ಅಭಿನಂದನೆ."

" ಥೂ!......"

....... ಶ್ರೀಕಂಠ, ತನ್ನ ಮಲಗುವ ಕೊಠಡಿಗೆ ನನ್ನನ್ನು ಒಯ್ದ. ಬೇರೆ ಬೇರೆ ಭಾಗಗಳಲ್ಲಿ ಕಿಟಕಿಗಳಿಗೆ ಸಮಿಸನಾಗಿದ್ದ. ಕೆತ್ತನೆಯ ಕೆಲ ಸದ ಮಂಚಗಳು .ಇಳಿಬಿಟ್ಟದ್ದ ಸೊಳ್ಳೆಯ ಪರದೆ. ಎಲ್ಲವೂ ಶುಭ್ರ ಶುಭ್ರವಾಗಿದ್ದ ಹಾಸಿಗೆ-ದಿಂಬು ಹೊದಿಕೆಗಳು.

"ಆದು ಶಾರದಾ ಹಾಸಿಗೆ ಆಲ್ಲೇ ಮಲಕೋ."

"ಉಂಟೇ ಎಲ್ಲಾದರೂ? ಅವರೇನೆಂದಾರು.?"

"ಒಳ್ಳೇ ಹುಡುಗಿ ಶಾರದಾ.ಅವಳೇನೂ ಆಕ್ಷೇಪಿಸೋಲ್ಲ."

ಉದ್ವಿಗ್ನಗೊಂಡಿದ್ದ ಶ್ರೀಕಂಠನನ್ನು ಸಂತವಿಸುವ ಮಾತು ಗಳನ್ನಾಡಬೇಕೆಂದು. ಮನಸ್ಸು ಬಯನಿತು. ಆದರೆ ಸರಿಯಾದ ಮಾತೇ ಹೊಳೆಯಲಿಲ್ಲಿ .ಶ್ರೀಕಂಠನನ್ನು ಕಹಿಯಾಗಿ ನಗುತ್ತ ಹೇಳಿದ:

"ಅದು ಬರೇ ಹಾಸಿಗೆ ಕಣೋ..ಹೆದರುಕೊಬೇಡ. ನಾನು ಮಲಕೋತೀನಿ..ನಿದ್ದೆ .ಬರುತ್ತೆ ನನಗೆ ..ಫ್ಯಾನ್ ಹಾಕೋ. ಪೇಪರ್ ಓದೋ ಹಾಗಿದ್ರಿ.ಓದು ....ನೆದ್ದೆ ಬಂದ್ರೆ ದೀಪ ಆರಿಸ್ಬೆಡು.ನಿನ್ತಲೇ ಮೇಲ್ಗಡೇನೇ ಸ್ವಿಚ್ಚಿದೆ......."

ಬಹಳ ಹೊತ್ತು ನನಗೆ ನಿದ್ದೆ ಬರಲಿಲ್ಲ. ಎಷ್ಟೋ ಕಾಲದಿಂದ ನಿದ್ದೆಹೋಗಿದ್ದ ಮನಸ್ಸು ಜಾಗೃತವಾಗಿತ್ತು ...ಜೀವನ ಹೀಗೂ ಇದೆ ಆಲ್ಲವೆ? ಮೇಲ್ಮಟ್ಟದ ಜೀವನ ರಂಗಕ್ಕೆ ಶ್ರೀಕಂಠ ಕಾಲಿರಿಸಿದ್ದ. ಆದರೆ ಭಾರವಾದ ಹೂವಿನ ಹಾರ ಆವನ ಕೊರಳನ್ನು ಬಾಗಿಸಿ ಉಸಿರು ಕಟ್ಟಿ.