ಪುಟ:Vimoochane.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಮೋಚನೆ

೧೯

ವಾಣಿಯಲ್ಲಿ ಮಾತಾಡಬಲ್ಲರೆ?...... ನಾನು ಈ ಸಮಾಜದೊಳಗೇ
ಒಬ್ಬ ಸದಸ್ಯನಾಗಿದ್ದೆ ನಿಜ. ಆದರೆ ನಾನು ಜೀವಿಸಿದ್ದು ಈ ಸಮಾಜದ
ಹೊರಗಿನ ಒಬ್ಬ ವ್ಯಕ್ತಿಯಾಗಿ. ಈ ಸಮಾಜಕ್ಕೂ ನನಗೂ ಇದ್ದ
ಸಂಬಂಧವೇನು ಹಾಗಾದರೆ? ಹುಟ್ಟಿ, ಬೆಳದು, ಸತ್ತು ಮಣ್ಣಾಗುವ
ಕೋಟಿ ಜನರಲ್ಲಿ ನಾನೊಬ್ಬ ನಿಜ. ಆದರೆ ಸತ್ತ ಬಳಿಕ ನನ್ನ ಬಗ್ಗೆ,
ಉಳಿದವರು ಕ್ಷಣಕಾಲವೂ ಯೋಚನೆಮಾಡುವಂತೆ ಇಲ್ಲವೆ? ಅವರ
ಪಾಲಿಗೆ ನಾನು ಮುರಿದುಹೋದ ಮುಳ್ಳುಕಡ್ಡಿಯೆ?
ಎಂಟು ವರ್ಷಗಳಿಗೆ ಹಿಂದೆ ನಾನು ಆ ಬರೆಹಗಾರರನ್ನು ಕಂಡೆ.
ಎಲ್ಲಿಯೋ ನಾನು ಓದಿದ್ದ ಆತನ ಕೃತಿಗಳು ನನ್ನ ಗಮನವನ್ನು
ಸೆಳೆದಿದ್ದುವು. ಅವನಿಗೆ ಮರಣಪ್ರಾಯನಾಗಬೇಕಾಗಿದ್ದ ನಾನು,
ಅವನ ಪ್ರಭಾವಕ್ಕೆ ಒಳಗಾಗಿ ನನ್ನ ವ್ಯಕ್ತಿತ್ವವನ್ನೇ ಕಳೆದುಕೊಳ್ಳುವ
ಗಂಡಾಂತರದಲ್ಲಿ ಸಿಲುಕಿದೆ. ನಾನು ಆಯ್ದುಕೊಂಡಿದ್ದ ಹಾದಿಯಿಂದ
ನನ್ನನ್ನು ಬೇರೆಡೆಗೆ ಒಯ್ಯಲು ಯತ್ನಿಸಿದ ಆತನಿಂದ, ನಾನು ಬೇಗನೆ
ದೂರವಾದೆ. ಆದರೆ ಈ ದಿನ ಇದನ್ನು ಬರೆಯಲು ನಾನು ಸಮರ್ಥ
ನಾದುದ್ದಕ್ಕೆ ಯಾರಾದರೂ ಕಾರಣರಿದ್ದರೆ, ಆ ವ್ಯಕ್ತಿ ಆತನೊಬ್ಬನೇ.
ಆತ ಹೇಳುತ್ತಿದ್ದ: "ಚಂದ್ರಶೇಖರ, ನೀವು ಯಾರೋ ನನಗೆ
ತಿಳೀದು.ನಿಮ್ಮ ವಿಚಿತ್ರ ವ್ಯಕ್ತಿತ್ವವನ್ನ ನಿಮ್ಮ ಇಚ್ಛೆಗೆ ವಿರುದ್ದವಾಗಿ
ತಿಳಿಯೋ ಬಯಕೆಯೂ ನನಗಿಲ್ಲ. ಆದರೆ ಇಷ್ಟು ಹೇಳಬಲ್ಲೆ. ಈ
ಜೀವನ ಪ್ರವಾಹದಲ್ಲಿ ನೀವು ಹುಲ್ಲುಕಡ್ಡಿಯೋ, ಕಲ್ಲುಬಂಡೆಯೋ,
ಒಡೆದ ದೋಣಿಯೋ, ಯುದ್ದದ ಹಡಗೋ ಆಗಿರೋದು ನಿಜ.
ನೀವೇನೇ ಇರಿ,ನಿಮ್ಮ ಅನುಭವಗಳನ್ನ ನೀವು ಬರೆದಿಡಬೇಕು.ಅದು
ಒಳ್ಳೇ ಸಾಹಿತ್ಯ ಆಗೋದರಲ್ಲಿ ಯಾವ ಸಂಶಯವೂ ಇಲ್ಲ."ಹಾಗೆ
ಆತ ಹೇಳಿದಾಗ ನನಗೆ ನಗು ಬಂದಿತ್ತು.ಸ್ವಲ್ಪ ಹೆಮ್ಮೆಯೂ ಅನಿ
ಸಿತ್ತು.ಆದರೆ, ನನ್ನ ಪೂರ್ಣಕತೆ ತಿಳಿದರೆ ಈತ ನನ್ನನ್ನು ದೂರವಿಡ
ಬಹುದೆಂಬ ಭೀತಿಯೂ ನನ್ನನ್ನು ಆವರಿಸಿತ್ತು.
ಅಂತೂ ಈಗ ನಾನು ಬರೆಯತೊಡಗಿದ್ದೇನೆ. ಬರೆದುದನ್ನು
ಆ ಸಾಹಿತಿಗೇ ತಲುಪಿಸಿದರಾಯಿತು.ಆತ ಈ ಕೆಲಸಕ್ಕೆ ಒಪ್ಪ