ಪುಟ:Vimoochane.pdf/೨೫೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಕೊಟ್ಟ ಶಾರದೆಯನ್ನು ಆತ ಆಗ ದೇವಿಯೆಂದು ಕರೆದ.

ಆದರೆ ಶಾರದಾ ಬೇಗನೆ ಮನೆಗೆ ಬರಲಿಲ್ಲ. ಮಗುವನ್ನು ನೋಡಿಕೊಳ್ಳುವ ಸಂಭ್ರಮದಲ್ಲಿ ಆಕೆ ಶ್ರೀಕಂಠನನ್ನು ಮರೆತಳು. ಅಥವಾ ಮಗುವನ್ನೆ ನೆಪವಾಗಿರಿಸಿ ಆವನನ್ನು ದೂರವಿಟ್ಟಳೇನೊ ! ಎರಡು ಮೂರು ಸಾರಿ ನಾನು ಶ್ರೀಕಂಠನೊದನೆ ಅವರ ಮಾವನ ಮನೆಗೆ ಹೋಗಿ, ಮಹಾರಾಣಿಗೂ ರಾಜಕುಮರನಿಗೂ ಗೌರವ ಸಲ್ಲಿಸಿ ಬಂದೆ. ಆಗ ಶಾರದಾ ನನ್ನನ್ನು ಕಂಡು ಮುಗಳ್ನಗುತಿದ್ದಳು. ಅದು ಭಾವನೆಗಳಿಗೆಲ್ಲ ಮುಖವಾಡವಾದ ಮುಗುಳ್ನಗು.

ಶ್ರೀಕಂಠನ ಪಾಲಿಗೆ ಮಗನ ಆಗಮನದ ಸಂಭ್ರಮ ಬಹಳ ದಿನ ಉಳಿಯಲಿಲ್ಲಿ. ನಾವಿಬ್ಬರೇ ಇದ್ದಾಗ ಪದೇ ಪದೇ ಶಾರದಾಳ ಮಾತು ಬರುತಿತ್ತು.

"ಚಂದ್ರೂ......ನಾನು ಸ್ವಾರ್ಥಿ.....ಒಪ್ಕೋತೀನಿ. ನಾವು ಗಂಡಸರೆಲ್ಲಾ ಹೀಗೆಯೊ ಏನೊ. ನಾನು ಶಾರದಾನ ಪ್ರೀತಿಸ್ತೀನಿ. ಅವಳು ನನ್ನ ಪ್ರೀತಿಸ್ತಾಳೆ. ಆದರೂ ಅದು ಸಾಲದು ಅನ್ನಿಸುತ್ತೆ..... ಏನಂತೀಯಾ?"

ಅಂಥ ಸಂದರ್ಭಗಳಲ್ಲಿ ನಾನು ಸುಮ್ಮನಿರ ಬಯಸುತ್ತಿದ್ದೆ.

"ಅಲ್ಲ ಚಂದ್ರೂ...ಈ ಪ್ರೇಮ ಅಂತಾರಲ್ಲ, ಅದೇನು ಹೇಳು. ಓದಿ ತಿಳ್ದೋನು-ನಾಲ್ಕು ಊರು ನೋಡಿರೋನು-ನೀನೇ ಹೇಳಪ್ಪ ಸ್ವಲ್ಪ....ಪ್ರೇಮ ಮತ್ತು ಕಾಮ, ಅದೇನು ನಿಷಯ ಹೇಳ್ನೋ ಡೋಣ....."

"ಯಾಕೊ ಸುಮ್ನಿದೀಯ? ನಿನ್ನ ಈ ಮುಚ್ಚುಮರೆ ನನ ಗಾಗೊಲ್ಲ ನೋಡು."

...ಯಾವುದೋ ಥಿಯೇಟರಿನ ಬಳಿ ಕಾರು ನಿಂತಿತು. ಅದನ್ನು ಅಲ್ಲಿ ಬಿಟ್ಟು, ಶ್ರಿಕಂಠ ನನ್ನನ್ನು ಕರೆದುಕೊಂಡು ನೇರವಾದ ಬೀದಿ ಯಿಂದ ಸ್ವಲ್ಪ ದೂರ ನಡೆದು ಹೋದ.

"ಎಲ್ಲಿಗೆ?" ಎಂದೆ.