ಪುಟ:Vimoochane.pdf/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಬಾ, ಇಲ್ಲೊಬ್ಬರು ಸ್ನೇಹಿತರಿದ್ದಾರೆ. ಪರಿಚಯ ಮಾಡ್ಕೊ ಡ್ತೀನಿ."

"ಶ್ರೀಕಂಠನನ್ನು-ಅವನ ಜತೆಯಲ್ಲಿದ್ದುದರಿಂದ ನನ್ನನ್ನೂ–ಅಲ್ಲಿ ಆದರದಿಂದ ಕಂಡರು. ಅಲ್ಲಿದ್ದ ಒಬ್ಬನೆ ಯುವಕ ಹುಡುಗ ಸಾರ್ ಸಾರ್" ಎನ್ನುತ್ತ ಶ್ರೀಕಂಠನ ಹಿಂದೂ ಮುಂದೂ ಓಡಾಡುತಿದ್ದ.

ತಿಂಡಿ ಬಂತು; ಕುಡಿತ ಬಂತು; ಆ ಬಳಿಕ....

ಮನೆಯೊಡತಿಗೆ ಶ್ರೀಕಂಠ ಹೇಳಿದ: '

'ಅಮ್ಮಾ, ಈತ ನನ್ನ ಪ್ರಾಣ ಸ್ನೇಹಿತ. ಯಾರಾದರೂ ಒಳ್ಳೆಯವರ ಪರಿಚಯ ಮಾಡಿಸ್ಕೊಡಿ .. ಬರ್ತೀನಪ್ಪ ಚಂದ್ರೂ .. ಆ ಮೇಲೆ ಸಿಗ್ತೀನಿ ."

ಅಷ್ಟು ಹೇಳಿ ಅವನು ಮಹಡಿಯ ಮೆಟ್ಟಿಲೇರಿ ಹೊದ.

....ಭ್ರಮೆಗೊಂಡು ಅಂತರ್ಮುಖಿಯಾಗಿ ಕುಳಿತಿದ್ದ ನನ್ನ ಕೊರಳನ್ನು ಮೃದುವಾದ ಬಾಹುಗಳೆರಡು ಬಳಸಿದುವು. ನಾನು ಎದು ವಿಧೇಯನಾಗಿ ಅವಳನ್ನು ಹಿಂಬಾಲಿಸಿದೆ..... ಅಚ್ಚುಕಟ್ಟಾಗಿದ್ದ ಶಯಾಗೃಹ. ಗೋಡೆಯ ಮೇಲೆ ಪಾಶ್ಚಾತ್ಯ ನಟಿಯರ ಅಂಗವಿನ್ಯಾಸ ಗಳ ಭಾವಚಿತ್ರಗಳು. ಆಕೆ ಆಹ್ವಾನದ ನೋಟದೊಡನೆ ನನ್ನೆದುರು ನಿಂತಿದ್ದಳು– ಹೆಣ್ಣು, ನೀಳವಾದ ನನ್ನ ಕ್ರಾಪನ್ನು ಬದಿಗೆ ಸರಿಸಿ, ಒಲಿಯುವ ದೃಷ್ಟಿ ಯಿಂದ, ಅವಳಿಗೆಂದೆ:

"ಇಲ್ಲಿ ಬಾ."

ಆಕೆ ಬಂದಳು. ನಾನವಳನ್ನು ಬರಸೆಳೆದು ಅಪ್ಪಿಕೊಂಡೆ. ದೀರ್ಘ ಕಾಲ ಪ್ರೇಮದ ಕಾಹಿಲೆಯಿಂದ ನಾನು ನರಳಿದ್ದಾಗ, ಚುಂಬನ ನನಗೆ ದೊರೆತಿರಲಿಲ್ಲ. ಇಲ್ಲಿ ಗುರುತು ಪರಿಚಯವಿಲ್ಲದ ಹೆಣ್ಣು ನನ ಗದನ್ನು ಕೊಟ್ಟಳು–ನನ್ನು ಮೆಚ್ಚಿಸುವ ಆತುರದಿಂದ ಬಗೆ ಬಗೆ ಯಾಗಿ ಕೊಟ್ಟಳು.

ಹೃದಯದಲ್ಲಿ ಎಲ್ಲಿಯೋ ಒಂದೆಡೆ ನನಗೆ ನೋವಾಗುತಿತ್ತು. ಯಾವುದೋ ಕೀಲಿ ಕಳಚಿಕೊಂಡಿತ್ತು. ದೇಹದ ಚಲನ ವಲನಗಳು