ಪುಟ:Vimoochane.pdf/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಂಬಿಕೆ ಹುಟ್ಟಿದವಳಂತೆ ನನ್ನನ್ನೆ ಅವಳು ನೋಡಿದಳು.

"ತಗೋ ಎಂದೆ. ಕೇಳಿಸ್ಲಿಲ್ವಾ? "

ಅವಳು ಎದ್ದು ಕುಳಿತಳು.

"ನಾನು ಕಣ್ಣೀರು ಹಾಕ್ದೆ ಅಂತಾನಾ ?

ಬಿಗಿಹಿಡಿದಿದ್ದ ಅವಳ ಅಂಗೈ ತೆರೆದು ಆ ಹಣವಿಟ್ಟ, ಆಕೆಯ ಮುಂಗುರುಳನ್ನು ನೇವರಿಸಿದೆ.

"ಇದು ನಿನ್ನ ಹಣ. ತಿಳೀತೆ?"

"ಹೊರಡೋ ಹೊತ್ತಿಗೆ ಮನೆಯವರು ಅರ್ಧ ಕಸಕೋತಾರೆ."

ಮತ್ತೆ ಸುಲಿಗೆಯ ಮಾತು.. ನನಗೆ ಅದು ಅಸಹ್ಯವೆನಿಸಿತು. ಉಸಿರು ಕಟ್ಟಿದ ಹಾಗಾಗುತಿತ್ತು ನನಗೆ ಬಹಳ ಹೊತ್ತು ಅಲ್ಲಿರಲಾರದೆ ಹೊರಟು ನಿಂತೆ. ಆಕೆ ನನ್ನೆದೆಯಲ್ಲಿ ಮುಖವಿಟ್ಟಳು. ಕನಿಕರದಿಂದ ನಾನು ಅವಳನ್ನು ಚುಂಬಿಸಿದೆ.

ಸ್ವಲ್ಪ ಹೊತ್ತಿನಲ್ಲೇ ಶ್ರೀಕಂಠನೂ ಬಂದ.

"ಹೊರಡೋಣ್ವೇನೋ ದೊರೆ?" '

'ಹೊಂ."

ಥಿಯೇಟರಿಗೆ ಬಂದು ಸ್ವಲ್ಪ ಹೊತ್ತು ಚಿತ್ರ ನೋಡಿದೆವು. ನಡುವೆ, ತಪ್ಪೊಪ್ಪಿಕೊಳ್ಳುವವನ ಹಾಗೆ, ಶ್ರೀಕಂಠನೆಂದ.

"ಇದು ಆಗಾಗ್ಗೆ ನಾನು ಬಂದು ಹೋಗೋ ಮನೆ. ಯಾವತ್ತೆ ನಿನಗೆ ಹೇಳ್ಳೆಕೂಂತಿದ್ದೆ, ಅನುಭವಿಯಾದ ನೀನೇ ಮಾತಾಡ್ರೀ ಯಾಂತ ನಂಬಿಕೆ ಇತ್ತು, ಬೊಂಬಾಯಿ ಗಿಂಬಾಯಿಾಲಿ ಮಜಾ ಮಾಡ್ರೋನು...ಆದರೆ ನೀನೊ-ಮಹಾ ರಹಸ್ಯಮಯಿ..ನಿನಗೆ ಮೆಚ್ಚೆ ಆಯ್ಯೋ ಇಲ್ಲವೋ...ಕರಕೊಂಡು ಬಂದೆ ಅಂತೂ...'

"ಥ್ಯಾಂಕ್ಸ್ ಕೊಡ್ಲೇನು?"

"ಆಂಥ ಔದಾರ್ಯ ನಿನಗೆಲ್ಬಂತು ?" ಪ್ರಯೋಜನವಿರಲಿಲ್ಲ–ನಾನು ಹೆಣ್ಣಿನ ಸಂಗಮಾಡಿದುದು ಅದೇ ಮೊದಲೆಂದು ಅವನೊಡನೆ ಹೇಳುವುದರಿಂದ ಪ್ರಯೋಜನವಿರ ಲಿಲ್ಲ. ಅವನ ಮಾತಿಗೆ ಪ್ರತಿಯಾಗಿ ನಾನು ನಕ್ಕು, ಸಿಗರೇಟು