ಪುಟ:Vimoochane.pdf/೨೫೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಕ್ಷಣ ಕಾಲ ಶ್ರಿಕಂಠ ಹುಬ್ಬ ಗಂಟಿಕ್ಕಿದ. ಆಮೇಲೆ ಮುಖ ಸಡಿಲಿಸಿ ನಕ್ಕು, "ನಿನ್ನಿಷ್ಟ" ಎಂದ. ಬಹಳ ದಿನಗಳ ಮೇಲೆ ಅವನೇ ಆ ವಿಷಯವೆತ್ತಿದ.

"ನಿನಗೋಸ್ಕರ ಏರ್ಪಾಟು ಮಾಡಿದೀನಪ್ಪ. ನಾಳೆ ಬೇರೆ ಮನೆ ತೋರಿಸ್ತಿನಿ. ನೀನು ಬೇಕು ಅಂದಾಗ ಹೊಸಬರ್ನ ಅಲ್ಲಿಗೆ ಕರಸ್ತಾರೆ."

ಅದು ನಾನಿಟ್ಟ ಇನ್ನೊಂದು ಹೆಜ್ಜೆ. ಮಾನವ ಜೀವನದ ಕಟ್ಟು ಪಾಡುಗಳನ್ನು ಬಿಟ್ಟು ಸ್ವಲ್ಪ ಹೊತ್ತು ಮೃಗವಾಗುವುದು. ಬಳಿಕ ಅದನ್ನು ಸ್ಮರಣೆಯಿಂದ ತೊಡೆದು ಹಾಕುವುದು...

ಹಣದ ಏಣಿಯಲ್ಲಿ ಶ್ರೀಕಂಠ ಮೇಲಕ್ಕೇರುತಿದ್ದ. ಮಿಲಿಟರಿ ಗಾಗಿ ದೊರಗು ಬಟ್ಟಿ ತಯಾರಿಸುವ ಆರ್ದರು ದೊರಕಿಸಿಕೊಂಡ ಆತನ ಮಾವ, ಅಳಿಯನಿಗಾಗಿ ಸಣ್ಣ ಬಟ್ಟಿ-ಕಾರ್ಖಾನೆಯೊಂದನ್ನು ಸಂಪಾದಿಸಿಕೊಟ್ಟರು. ಹಿಂದಿನ ಯಜಮಾನ ಸಾಲಮಾಡಿದ್ದ; ಯಂತ್ರಗಳು ಸವೆದು ಹೋಗಿದ್ದುವು. ಇವರು ನಗದು ಹಣ ತೆತ್ತು, ಕಾರ್ಖಾನೆಯನ್ನು ಪಡೆದರು.

ಸವೆದು ಹೋಗಿದ್ಗ ಯಂತ್ರಗಳು ದುರಸ್ತಿಯಾದುವು. ಒಟ್ಟು ಸಾವಿರದೈನೂರು ಜನ ಮೂರು ಪಾಳಿಗಳಲ್ಲಿ ದುಡಿದರು...ಇಲ್ಲಿಂದ ಬಟ್ಟೆಯ ಬೇಲುಗಳು ಹೋದಂತೆ, ಅಲ್ಲಿಂದ ನೋಟನ ಕಟ್ಟುಗಳು ಬಂದವು.

ಒಂದು ಕಾಲದಲ್ಲಿ, ಹೋಗೆಯುಗುಳುತಿದ್ದ ಬಟ್ಟೆ ಕಾರ್ಖಾನೆ ಯಲ್ಲಿ ಅರಳಿ ಹಿಂಜುವ ಕೆಲಸವಿತ್ತು ನನ್ನ ತಂದೆಗೆ. ಈಗ ಅಂಥ ವೊಂದು ಕಾರ್ಖಾನೆಯ ಒಡೆಯನ ಆಪ್ತ ಸಚಿವ ನಾನು. .

..ಅಜ್ಜಿಯ ಮನೆಯನ್ನು ನಾನು ಎಂಟು ರೂಪಾಯಿ ಬಾಡಿಗೆಗೆ ಬೇರೆಯವರಿಗೆ ಕೊಟ್ಟೆ.

ನನಗೋಸ್ಕರ, ಒಂದು ಹೋಟೆಲಿನ ಬಳಿಯಲ್ಲೆ, ಹೆಚ್ಚು ಅನುಕೂಲತೆಗಳಿದ್ದ ಪುಟ್ಟ ಮನೆಯೊಂದನ್ನು, ಬಾಡಿಗೆಗೆ ಹಿಡಿದೆ.