ಪುಟ:Vimoochane.pdf/೨೫೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಶಾರದಾ, ಮಗುವಿನೊಡನೆ ಗಂಡನ ಮನೆಗೆ ಬಂದಳು.

ಇವರಿಬ್ಬರ ಆಗಮನದಿಂದ ಶ್ರೀಕಂಠನ ಜೀವನ ಕ್ರಮ ಸ್ವಲ್ಪ ಅಸ್ತವ್ಯಸ್ತವಾದಂತೆ ತೋರಿದುದು ಸ್ವಲ್ಪ ದಿನ ಮಾತ್ರ. ಹಲವು ಸಂಜೆಗಳು ಮಿಲಿಟರಿ ಕ್ಯಾಂಪಿನವರ ಸಹ ವಾಸದಲ್ಲಿ ಕಳೆದು ಹೋಗುತಿದ್ದುವು. ರಾತ್ರೆಗಳಲೆಲ್ಲಾ ಹಲವೊಮ್ಮೆ ಕಾರಖಾನೆಯ ನೆಪ ಹೇಳಿ ಶ್ರೀಕಂತಠ ಹೋರಗೇ ಉಳಿಯುತಿದ್ದ.

ಮೊದಲು ಕೆಲವೊಮ್ಮೆ ಗಂಡನ ತಿರುಗಾಟನನ್ನು ಶಾರದಾ ನಿರೀಕ್ಷಿಸಿದ್ದುಂಟು. ರಾತ್ರೆ ಹೊತ್ತು ಗಂಡನಿಗಾಗಿ ಫ್ಯಾಕ್ಟರಿಗೆ ಫೋನ್ ಮಾಡಿದ್ದುಂಟು. ಹಾಗೆ ಮಾಡಿದುದು ಕೆಲವು ದಿನ ಮಾತ್ರ....ಆ ಮೇಲೆ ಅವಳಿಗೆ ಬಿಡುವಿರಲಿಲ್ಲ. ದಾದಿಯ ಕೈಯಲ್ಲಿ ಮಗುವನ್ನು ಬಿಟ್ಟು ಶಾರದಾ ದಿನವೂ ಲೇಡೀಸ್ ಕ್ಲಬ್ಬಿಗೆ ಹೋದಳು. ಯುದ್ಢ ರಂಗದಲ್ಲಿರುವ ಹುಡುಗರಿಗಾಗಿ ಸ್ಟೆಟರ್-ಕಾಲುಚೀಲ ಹೆಣೆಯುವ ಪರೋಪಕಾರಿ ಸ್ತ್ರೀಯರ ಸಮಿತಿಗೆ ಆಕೆ ಅಧ್ಯಕ್ಷೆಯಾದಳು.

"ನಮ್ಮ ಶಾರದಾ-" ಎಂದ ಶ್ರೀಕಂಠ, ಒಮ್ಮೆ.

"ಏನು?"

"ಮಿಲಿಟರಿ ವೃತ್ತದಲ್ಲಿ ಎಲ್ಲರ ಮೆಚ್ಗೆ ಪಡೆದಿದ್ದಾಳೆ."

ಅಸ್ವಾಭಾವಿಕವಾದ ನಗು ಮುಗಿದಮೇಲೆ ಮತ್ತೆ ಮಾತು:

"ಒಳ್ಳೇದೇ ಆಯ್ತೂಂತಿಟ್ಕೊ. ಲಕ್ಷಾಧೀಶ್ವರನ ಹೆಂಡತಿ ಆಧು ನಿಕಳಾಗಿರ್ಬೇಕು. ಹಾಗಿದ್ದರೇನೇ ನನಗೆ ಲಾಭ."

ನಾನು ಸಿಗರೇಟಗೆ ಕೈ ಹಾಕಿದೆ.

"ಹಚ್ಚಬೇಡ ಕಣೋ-ಜಾಸ್ತಿ ಭೈರಿಗೆ ಕೊರೆಯೊಲ್ಲ........ ಒಂದೇ ಪ್ರಶ್ನೆ........ನಾನು ಶಾರದಾ ಮೇಲೆ ದೂರು ಹೊರಿಸಿ, ಬೇರೆ ಹೆಣ್ಣಿನ ಕಡೆ ಹೋಗ್ತೀನಿ. ಶಾರದಾ, ನನ್ಮೇಲೆ ದೂರು ಹಾಕಿ ಬೇರೆ ಗಂಡಿನ ಕಡೆಗೆ ಹೋದರೆ? ಆಕೆ ಹಾಗ್ಮಾಡೋದು ತಪ್ಪು ಅನ್ನೋ ಣವೆ?....ಏನಂತೀಯಾ?"

"ಕಂಠಿ, ಇದೆಲ್ಲಾ ಯೋಚಿಸಿ ಯಾಕ್ಸುಮ್ನೆ ತಲೆ ಕೆಡಿಸ್ಕೊ ಳ್ತೀಯಾ?"