ಪುಟ:Vimoochane.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦

ವಿಮೋಚನೆ

ಕೊಡಲಿ.ಹೊಸದಾಗಿ ಬರೆಯುವವರ ಪುಸ್ತಕಗಳಿಗೆ ಸ್ವಲ್ಪ ಹಳಬರು
ಮುನ್ನುಡಿ ಬರೆಯುತ್ತಾರಂತೆ. ನನ್ನ ಪುಸ್ತಕಕ್ಕೆ ಆತನೇ ಮುನ್ನುಡಿ
ಬರೆಯಲಿ. ಈ ಆತ್ಮಕತೆ ಇನ್ನೆಷ್ಟೋ ಜನಕ್ಕೆ ದೊರೆಯುವಂತಾಗಲಿ.
ಯಾಕೆ ಈ ಹಂಬಲ? ನಾನು ಪ್ರಸಿದ್ದ ಪುರುಷನಾಗಬೇಕೆಂದೆ?
ಪತ್ರಿಕೆಗಳಲ್ಲಿ ನನ್ನ ಹೆಸರು ಬರಬೇಕೆಂದೆ? ಇಲ್ಲ, ಅಂಥ ಪ್ರಸಿದ್ದಿ
ನನಗೆ ಬೇಕಾಗಿಲ್ಲ. ಮಹಾ ಅಪಾಯಕಾರಿಯಾದ ವ್ಯಕ್ತಿ ಎಂದೂ
ಸಮಾಜಕಂಟಕನೆಂದೂ ನಾನು ಈಗಾಗಲೇ ಸಾಕಷ್ಟು ಪ್ರಸಿದ್ದನಾಗಿ
ದೇನೆ. ಯಾರು ಎಲ್ಲಿ ಕೊಲೆಮಾಡಿದರೂ ನಾನೇ ಜವಾಬ್ಧಾರ ಎನ್ನು
ವಷ್ಟರ ಮಟ್ಟಿಗೆ ಪ್ರಖ್ಯಾತನಾಗಿದ್ದೇನೆ. ದಿನಪತ್ರಿಕೆಗಳು ಮೊದಲ
ಪುಟದಲ್ಲಿ ದಪ್ಪ ಅಕ್ಷರಗಳಲ್ಲಿ ನನ್ನ ಮೇಲಿನ ಆರೋಪಗಳನ್ನು
ಮುದ್ರಿಸಿವೆ. ಇನ್ನು ಆಗಬೇಕಾಗಿರುವುದು ನನ್ನ ವಿಚಾರಣೆ. ಆಮೇಲೆ
ಶಿಕ್ಷೆ-ಮರಣ ದಂಡನೆ ಇಲ್ಲವೆ ಬದುಕಿರುವವರೆಗೂ ಕಾರಾಗೃಹ.
ನನಗೇಕೋ ನಗು ಬರುತ್ತಿದೆ. ಇವರು ಮೂರ್ಖರು. ಇಂಥವ
ರಿಂದಲೇ ತುಂಬಿರುವ ಈ ಸಮಾಜದ ಸಹವಾಸ ಸಾಕುಸಾಕಾಗಿ ನಾನು
ಹೊರಟುಹೋಗುತ್ತಿದ್ದೇನೆ. ಕರುಳಿನ ಬಾಧೆಯನ್ನೂ ಸಹಿಸಿ ನನ್ನ
ಹೃದಯದಲ್ಲಿ ನೆಲೆಸಿರುವ ನೆಮ್ಮದಿಯನ್ನು ಇವರು ಕಾಣರೇ? ನಾನು
ಅಪೇಕ್ಷೆಪಟ್ಟರೆ ಇಲ್ಲಿಂದ ತಪ್ಪಿಸಿಕೊಂಡು ಹೋಗುವುದು ದೊಡ್ಡ
ಮಾತಲ್ಲ ಆದರೆ, ನನಗೆ ಬೇಕಾಗಿರುವುದು ಅಂಥ ವಿಮೋಚನೆಯಲ್ಲ.
ಸಣ್ಣ ಸೆರೆಮನೆಯಿಂದ ದೊಡ್ಡ ಸೆರೆಮನೆಗೂ,ದೊಡ್ಡವರಿಂದ ಸಣ್ಣದಕ್ಕೂ
ಹೋಗಿ ಬಂದು ನಾನು ಬೇಸತ್ತು ಹೋಗಿದ್ದೇನೆ ನನಗೀಗ ಬಿಡು
ಗಡೆ ಬೇಕು -ನಿತ್ಯರ್ತವಾದ ಬಿಡುಗಡೆ. ನ್ಯಾಯದ ದೀರ್ಘ ಹಸ್ತ
ವಾಗಲೀ, ಪೋಲೀಸರ ಕೊರಕಲು ಕೈಯಾಗಲೀ, ನಾಗರಿಕರೆಂಬುವರ
ಸಂಸ್ಕಾರವಾಗಲೀ ಎಂದೆಂದಿಗೂ ನನ್ನನ್ನು ಬಾಧಿಸದಂತಹ ಬಿಡುಗಡೆ
ನನಗೆ ಬೇಕು. ಅದು ಸುಲಭಸಾಧ್ಯವಲ್ಲವೆಂಬುದನ್ನು ನಾನು ಬಲ್ಲೆ.
ಅದಕ್ಕೆ ಅಪಾರ ಬೆಲೆ ತೆರಬೇಕಾದೀತು. ಅದು ದೊಡ್ಡ ಮಾತಲ್ಲ.
ಆಂಥ ಬೆಲೆಯನ್ನೇ ನಾನು ತೆತ್ತು ಬಿಡುಗಡೆ ಹೊಂದಬೇಕು.
ನನ್ನ ಪಕ್ಕದ ಕೊಠಡಿಯಲ್ಲಿ ಸುಪ್ರಸಿದ್ಧ ಕೇಡಿಯಾದ ಕರಿಯ