ಪುಟ:Vimoochane.pdf/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಖ ಅಷ್ಟು ಅಪರಿಚಿತವಾಗಿರಲಿಲ್ಲ. ಆತ ಸಾರ್ವಜನಿಕ ಭಾಷಣ ಜಡಿಯುತಿದ್ದಾಗ, ನಾನೆಲ್ಲಿಯೋ ಆತನನ್ನು ನೋಡಿದ ಹಾಗಿತ್ತು .

ಹೊರಬರುತ " ಚಳವಲಳಿಯವರೇನೋ? " ಎಂದು ಶ್ರೀಕಂಠ ನನ್ನು ಕೇಳಿದೆ.

"ಹೂನಪ್ಪಾ. ಹುಷಾರಾಗಿ ನೊಡ್ಕೊ . ಭಾರಿ ಕುಳ."

ನನ್ನ ಕುತೂಹಲ ಕೆರಳಿದರೂ ಸುಮ್ಮನಾದೆ......ಆ ವ್ಯಕ್ತಿಗಾ ದರೋ ಬಾರಿಬಾರಿಗೂ ಊಟ ಉಪಚಾರಗಳ ಅವಶ್ಯತೆ ಇತ್ತು. ನಾನು ಮೈ ಸರಿ ಇಲ್ಲದವನಂತೆ ನಟೀಸಿ, ಹೋಟಿಲಿನಿಂದ ನನಗಾಗಿ ತಿಂಡಿ- ಊಟ ತರಿಸುತ್ತಿದ್ದ. ಒಳಗಿನ ಕೊಠಡಿಯಲ್ಲಿದ್ದ ದೇಶಭಕ್ತರು ಕೈಬಾಯಿಗೆ ಕೆಲಸ ಕೊಡುತಿದ್ದರು.....

ಹೊರಗಾದರೋ ಘೋಷ ಕೇಳಿಸುತ್ತಿತ್ತು: " ಮಾಡು ಇಲ್ಲವೆ ಮಡಿ!" ಯಾರಾದರೂ ವಿಸ್ಮಯಗೊಳ್ಳುವಂತೆ ಜನ ಸಾಮಾನ್ಯರು ಹೋರಾಡುತ್ತಿದ್ದರು. ಸ್ವಾತಂತ್ರ್ಯದ ಸ್ವರ್ಣ ಭೂಮಿ ಸೇರಲೆಂದು, ಮುಗ್ಗರಿಸಿ ಬಿದ್ದರೂ ಎದ್ದು. ಜನಕೋಟಿ ಓಡುತಿತ್ತು ನನಗೆ ಅದು ಅರ್ಥವಾಗಲಿಲ್ಲ. ಜನ ಜೀವನದಿಂದ ನಾನು ಬಲು ದೂರ ಸಾಗ್ತಿದೆ ರಿಂದಲೋ ಏನೋ, ನನಗದು ಅರ್ಥವಾಗಲಿಲ್ಲ.

ಆದರೆ ಶ್ರೀಕಠನಿಗೆ?. ಅವರ ಮಾವನಿಗೆ? ಅವರ ಮನೆಯಲ್ಲಿ ದೇಶಪ್ರೇಮವಿತ್ತೆಂದು ನನಗೆ ಆ ವರೆಗೂ ಹೊತ್ತಿರಲಿಲ್ಲ ದಿವಾನರ ಬೀಗರಂತೆ ವರ್ತಿಸುತ್ತಿದ್ದ ಇವರು,ತ್ರಿರಂಗಿ ಬಾವುಟವನ್ನು ಮುಟ್ಟ -ಬಯಸಿದ್ದುಂಟು?ಅಥವಾ-

ನನ್ನ ಸಂದೇಹವೇ ಸರಿಯಾಗಿತ್ತು. ಮಾರನೆ ದಿನ ಶ್ರೀಕಂಠ ಹೇಳಿದ

"ಶಾರದಾ ತಂದೆ ಸಾಮಾನ್ಯ ವ್ಯಕ್ತಿ ಅಲ್ಲ ಕನೊ. ಹ್ಯಾಗಿದೆ ಥೋರಣೆ? ಹೊರಗೆ ನಾವು ನಿಷ್ಠಾವಂತರಾದ ರಾಜಭಕ್ತರು. ಯುದ್ಧ ನಿಧಿ ಸಮಿತ್ಲೆಲ್ಲಾ ನಾವೇ ಇರೋದು. ಇತ್ತ ಗುಪ್ತವಾಗಿ ನಾವು ನೆರವಾಗೋದು ರಾಜದ್ರೋಹಿಗಳಿಗೆ!"

"ಬಹಳ ಕಾಲದಿಂದಲೂ ಹೀಗೇ ನಡೀತಾ ಇದೆಯೇನು?"