ಪುಟ:Vimoochane.pdf/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಛೆ! ಛೆ! ಮೊನ್ನೆವರೆಗೂ ಕಾಂಗ್ರೆಸು ಕಂಡರಾಗ್ತಿರಿಲ್ಲ ಮಾ ನಿಗೆ. ಇನ್ನು ಹ್ಯಾಗೆ ಹೇಳೋಕಾಗತ್ತೆ ? ನಾಳೆ ಏನಾಗುತ್ತೋ ಯಾ ರು ಬಲ್ಲರು ? ಈಗಿನಿಂದ್ಲೀ ಹುಷಾರಾಗಿರೋದು ಮೇಲಲ್ವಾ ?"

"ಚೆನ್ನಾಗಿದೆ ರಾಜಕಾರಣ !"

"ಪಾಲಿಟಿಕ್ಸ್ ಅನ್ನೋದೇ ಅದಕ್ಕೆ ಚಂದ್ರು. ನಮ್ಮ ಮಾಃ ಮಾಡ್ತಿರೋದೋ ಸರಿ ಅನಿಸುತ್ತೆ ನನಗೂ...... ಏನಂತೀಯಾ ?"

"ತಲೆದೂಗ್ದೆ."

"ಆತ ಹ್ಯಾಗಿದಾನೆ-ಭೂಪತಿ ?"

"ಸದ್ಯಃ ಬೇರೆಲ್ಲಿಗಾದರೂ ಸಾಗ್ಸವ್ವಾ....ಅವನ ಸಹಾವಾ ಸ ಇನ್ನು ಹೆಚ್ಚು ದಿವ್ಸ ಮಾಡೋಕಾಗಲ್ಲ. ಎಂಥ ಬೂರ್ ! ಎಂಥ ಬೋರ್ ! ಇನ್ನೂ ನಾಲ್ಕು ದಿವಸ ನಮ್ಮಲ್ಲೇ ಆವನಿದ್ದಾಂತಂದ್ರೆ ಅ ವನ ಕತ್ತು ಹಿಸಕ್ತೀನಿ ಅಷ್ಟೆ. ದೇಶಭಕ್ತರ ಬಲಿದಾನ-ಅಂಥ ಪೇಪರ್ರ್ನೋರು ಪ್ರಿಂಟು ಮಾಡ್ತಾರೆ! "

"ಹುಚ್ಚಪ್ಪಾ, ಹಾಗೇನಾದರೂ ಮಾಡಿ ನನ್ನ ಕುತ್ಗೆಗೆ ತಂದಿ ಟ್ವೀಯೆ !" .

..ನಾವು ಊರ ಹೊರಗೆ ಹೋದೆವು. ಇಲ್ಲದ ಬಿಡುವನ್ನು ದೊರಕಿಸಿಕೊಂಡು ಶ್ರೀಕಂಠ ನನಗೆ ಡ್ರೈವಿಂಗ್ ಕಲಿಸಿದ....

ಯುದ್ಧದ ಐದನೆಯ ವರ್ಷ. ನಾಲ್ವತ್ತೆರದರ ಚಳವಳಿಯೂ ನಿಂತು ಹೋಗಿತ್ತು-ಮಳೆ ಬಂದು ನಿಂತ ಹಾಗೆ, ಒಬ್ಬ ಪಾವಟಿಗೆ ಜಾರುವಂತೆ, ಅಲ್ಲೊಂದು ಇಲ್ಲೊಂದು ಬಂಧನ-ಬಿಡುಗಡೆಯ ವಾರ್ತೆ ಮಾತ್ರ ಕೇಳಿಬರುತ್ತಿತ್ತು, ಆಗಾಗ್ಗೆ.

ಆ ಅವಧಿಯಲ್ಲಿ ನಾನು ಬಾಳ್ವೆಯ ಇನ್ನೋಂದು ರೂಪವನ್ನು ಕಂಡೆ.

ಎಂದಿಗೆ ಯುದ್ಢ ನಿಂತು ಸಾಮಗ್ರಿಗಳ ಬೆಲೆ ಇಳಿಯುವುದೋ ಎಂದು ಬಡ ಸಂಸಾರಗಳು ಕಾದು ಕುಳಿತಿದ್ದರೆ, ಯುದ್ಢ ಇನ್ನು ನಿಂತು ತಮಗೆ ತೊಂದರೆಯಾಗುವುದಲ್ಲಾ-ಎಂದು ಲಕ್ಷಾಧೀಶರು ವ್ಯಥೆಪಡು