ವಿಷಯಕ್ಕೆ ಹೋಗು

ಪುಟ:Vimoochane.pdf/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಿದ್ದರು. ಶ್ರೀಕ೦ಠ ಮತ್ತು ಆತನ ಮಾವ ಮಾತನಾಡುತಿದ್ದಾಗ ಲೊಮ್ಮೆ, ವಿಷಾದದ ಛಾಯೆ ಅವರ ಮುಖಗಳ ಮೇಲೆ ಸುಳಿದುದನ್ನು ಕ೦ಡೆ ಆ ದೃಶ್ಯ. ಸೋಜಿಗವನ್ನು೦ಟುಮಾಡಿತು. ಮನುಷ್ಯನ ಆಸೆಗೆ ಮಿತಿಯೇ ಇಲ್ಲವೆ ಹಾಗಾದರೆ? ಹಲವು ಲಕ್ಷಗಳನ್ನು ಸುಲಭವಾಗಿ ಸ೦ಪಾದಿಸಿದ ಮೇಲೂ ತೃಪ್ತಿ ಇಲ್ಲವೆ ಇವರಿಗೆ? ಸುಖಜೀವನ ನಡೆ ಸಲು ಒಬ್ಬ ಮನುಷ್ಯನಿಗೆ ಎಷ್ಟು ಹಣ ಬೇಕು? ಹಾಗಾದರೆ ದೊಡ್ಡ ಮನುಷ್ಯರಾಗಿ ಬಾಳಲು ಎಷ್ಟು ಹಣಬೇಕು?

ಒ೦ದು ಸ೦ಜೆ ಶ್ರೀಕ೦ಠ ವ್ಯಗ್ರನಾಗದ್ದ.

ಏನಾಯ್ತು? ಎ೦ದು ಕೇಳಿದೆ.

ಒ೦ದು ಹೊಸ ಪಿಡುಗು ಬ೦ದಿದೆ ಅಷ್ಟೆ

ಪಿಡುಗು?

ಸ೦ಘ ಕಣಯ್ಯ- ಕೂಲಿಕಾರರ ಸ೦ಘ, ಯೂನಿಯನ್ನು. ಫ್ಯಾಕ್ಟರೀನ ತಮ್ಮ ವಶಕ್ಕೇ ತಗೋತಾರ೦ತೆ ಬಡ್ಡೀಮಕ್ಕಳು.

ಓ! ಸ್ವಾರಸ್ಯವಾಗಿದೆ

ನಿನ್ನ ಸಿನಿಕ ಬುದ್ಧಿ ಬಿಟ್ಬಿಡು. ಈ ಗಲಾಟೆ, ಕಾಲರಾಗಿ೦ತ, ಹೆಚ್ಛು ಅಪಾಯಕಾರಿ

ಗಲಾಟಿ ಮಾಡ್ತಿರೋರು ಯಾರು? ಅವರೇನೇ ನಿರುದ್ಯೋಗಿಗ್ಳು. ಎಲ್ಲರೂ ಲೀಡರ್‍ರ್ಸಾಗ್ಬಿಟ್ಟಿದಾರೆ,

ಅವಂರ್ದೊದು ಹಾಡೂ ಇದೆ ಗೋತ್ತಾ? ಕೈಲಿ-ಕೆಂಪು-ಬಾ-ವು-ಟಾ.... ಹೊ ಹ್ಹೋ!"

"ರಸಿಕ ಕಣಯ್ಯ ನೀನು"

" ಸ್ಕಲ್ಸ್ . ಬಂದೂಕು ತಗೊಂಡು ಸುಟ್‌‌‌‌‌‌‌‍ಹಾಕ್ಬಿಡೋಣಾಂತ ಅನಿಸುತ್ತೆ,"

ಹಿಂದೆ ಸಂಘಗಳು ಇರಲಿಲ್ಲವೆಂದಲ್ಲ. ಒಂದು ಕಾರ್ಖಾನೆಗೆ ಒಂದರಂತೆ ಸಂಘವಿರುತಿತ್ತು. ತಮಗೆ ಬೇಕಾದವರನ್ನು ಮಾಲೀ ಕರೇ ಆಯ್ದು ಕೂಲಿಕಾರ ಮುಖಂಡರಾಗಿ ನೇಮಿಸುತಿದ್ದರು. ಆದರೆ ಕೆಂಪು ಬಾವುಟ ಬಂದು,ಒಂದು ಉದ್ಯಮಕ್ಕೆ ಒಂದೇ ಸಂಘ-ಎಂದು