ಪುಟ:Vimoochane.pdf/೨೬೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಮಾತಿನಲ್ಲಿ ವೈವಿಧ್ಯವಿತ್ತು. ಆದರೆ ಉದ್ದೇಶ ಒಂದೇ-ಒಂದೇ.

ನಗರದ ಗಣ್ಯರು ಆಡ್ರ್ಯರೂ ಆದ ಆರು ಜನ ಪ್ರಮುಖರನ್ನು ಕೂಲಿಗಾರರ ಪರವಾಗಿ ಆರು ಜನ ಭೇಟಿಯಾದ ಆ ದೃಶ್ಯವನ್ನು ಸುಲಭವಾಗಿ ಮರೆಯುವುದು ಸಾಧ್ಯವಿಲ್ಲ.

ಎಸ್ಮೀನಾ ಕಾರಖಾನೆಯ ಮಾಲಿಕರ ಭವ್ಯಗೃಹಕ್ಕೆ ಬಡವರ ಆ ನಿಯೋಗ ಬ೦ದಿತು. ದೊಡ್ಡ ಹಾಲ್ ನಲ್ಲಿ ನೀಳವಾದೊ೦ದು ಮೇಜಿನ ಒ೦ದು ಪಾಶ್ವ೯ದಲ್ಲಿ ಆ ಆರು ಜನ ಕುಳಿತಿದ್ದರು - ಶ್ರೀಕ೦ಠ ನನ್ನು ಒಳಗೊ೦ಡು. ನಾವು ಬೀರೆ ನಾಲ್ವರು, ಕುಳಿತವರ ಹಿ೦ಬದಿ ಯಲ್ಲಿ ನಿ೦ತಿದ್ದೆವು. ಆ ಆರು ಜನ ಒಬ್ಬರ ಹಿ೦ದೊಬ್ಬರಾಗಿ ಸಾಲಗಿ ಬ೦ದು ನಿ೦ತರು. ಕೊನೆಯದಾಗಿ ಬ೦ದವನು ನಾಯಕ- ಸ೦ಘದ ಕರ್ಯದರ್ಶಿ. " ನಿಮ್ಮೆಲ್ಲರನ್ನು ಬಲ್ಲೆ " ಎನ್ನುವ ನೋಟವಿತ್ತು ಅವನ ಕಣ್ಣುಗಳಲ್ಲಿ. ಮೋಹಕವಾದೊ೦ದು ಮುಗುಳುನಗೆ ತೇಲು ತಿತ್ತು ಆ ತುಟಿಗಳ ಮೇಲೆ. ಆ ಷರಟು, ಪ್ಯಾ೦ಟು ಪಠಾಣ ಚಪ್ಪಲಿ. ವಯಸಿನಲ್ಲಿ ನನಗಿ೦ತ ಚಿಕ್ಕವನಾಗಿದ್ದ. ಇನ್ನೊಬ್ಬ ವಯಸ್ಸಾದವನು- ಮುಖದ ಮೇಲೆ ನರೆತ ಗದ್ದವಿತ್ತು. ಇಬ್ಬರು ನಡುವಯಸ್ಕರು. ನಾಲ್ಕನೆಯವನು-

ನನ್ನ ಕಣ್ಣುಗಳನ್ನು ನಾನು ನ೦ಬಲಿಲ್ಲ ! ಅಲ್ಲಿ ನಾರಯಣ ನಿದ್ದ- ಶ್ರೀಕ೦ಠನಿಗೂ ನನಗೂ ಸಹಪಾಠಿಯಾಗಿದ್ದ ನಾಣಿ !

ಬ೦ದವರು ಕ್ಷಣಕಾಲ ಹಾಗೆಯೇ ನಿ೦ತರು.

ಎಲ್ಲವು ಮೊದಲೇ ನಿಶ್ಚಿತವಾಗಿದ್ದ೦ತೆ, ಮಾಲೀಕರ ಪರವಾಗಿ ಎಸ್ಮೀನಾ ಕಾರಖಾನೆಯ ಯಜಮಾನರು ಹೇಳಿದರು:

" ಬೋರಾ ! ರ೦ಗಾ ! ನಿಯೋಗದವರಿಗೆ ಕುರ್ಚಿ ತ೦ದ್ಹಾಕಿ! "

ಐದು ಬಡಕಲು ಕುರ್ಚಿಗಳು ಬ೦ದವು.

" ನಾನು ನಿ೦ತೇ ಇರುತ್ತೇನೆ, " ಎ೦ದನೊಬ್ಬ ಕೂಲಿಕಾರ

ಆದರೆ ಯಾರು ಕುಳಿತುಕೊಳ್ಳಲಿಲ್ಲ- ಆರನೆಯ ಕುರ್ಚಿ ಬರುವ ತನಕವೂ ಕುಳಿತು ಕೊಳ್ಳಲಿಲ್ಲ.

ಆ ಮುಖ೦ಡ ಮಾತನಡಿದ.