ಪುಟ:Vimoochane.pdf/೨೬೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಜಾತಿಗೆ ಸೇರಿದ್ದ.....ಆದರೆ ನಾನು ಅಲ್ಲಿರುವುದು ಸಾಧ್ಯವಿರಲಿಲ್ಲ. ಆ ಇನ್ನೊಂದು ಪಕ್ಷ? ಅದು ಶ್ರೀಕಂಠನದು, ನನ್ನದಲ್ಲ.. ನಾನು ಶ್ರೀಕಂಠನ ಸ್ನೇಹಿತ ಅಷ್ಟೆ-ಪರೋಪಜೀವಿ.

ಒಂದು ವೇಳೆ ನನ್ನ ತಂದೆ ಬದುಕಿ ಉಳಿದಿದ್ದರೆ? ಇಷ್ಟು ವರ್ಷ ಗಳ ಕಾಲ ಆತ ದುಡಿಯುವುದು ಸಾಧ್ಯವೇ ಇರಲಿಲ್ಲ. ಆದರೆ ಒಂದು ವೇಳೆ ದುಡಿಯುತ್ತಿದ್ದರೆ? ಆಗ ಮೆರವಣಿಗೆಯಲ್ಲಿ ಅವನೂ ಇರುತಿದ್ದ. ನಿಯೋಗದ ಆಯ್ಕೆಗೆ ಸಂಬಂಧಿಸಿ ಅವನೂ ಅಭಿಪ್ರಾಯ ವ್ಯಕ್ತಪಡಿಸು ತಿದ್ದ.ಅಥವಾ ಅವನನ್ನೂ ನಿಯೋಗಕ್ಕೆ ಆರಿಸುತಿದ್ದರೋ ಎನೋ... ಹಾಗಾದರೆ,ಅದು ಅವನ ಪಕ್ಷವಾಗುತಿತ್ತು.

ತಂದೆಯ ಪಕ್ಷ....ಇಲ್ಲ,ನಾನು ದೂರಬಂದಿದ್ದೆ.ಆ ಪಕ್ಷವನ್ನು ನಾನು ಸೇರುವುದು ಸಾಧ್ಯವಿರಲಿಲ್ಲ.ಆದರೆ ಆ ಇನ್ನೋಂದು ಪಕ್ಷ?

ಇನ್ನೋಂದು ಪಕ್ಷದ ಪ್ರಮುಖರು ಏರಿದ ಸ್ವರದಲ್ಲಿ ಹೇಳು ತಿದ್ದರು:

"ಮುನಿಸ್ವಾಮಪ್ಪ,ಇದು ಯುಧಕಾಲ.ಈಗ ಇಂಧ ಕೇಳಿಕೆ ಮುಂದಿಡೋದು ಕಾನೂನು ಬದ್ಧ ಅಂತ ತಿಳ್ಕೋಂಡಿದೀರಾ?"

ಕಾರ್ಯದರ್ಶಿಯ ಉತ್ತರ ಬರುತಿತ್ತು:

"ಕಾನೂನು ನಿರ್ಮಿಸಿರೋದು ಮನುಷ್ಯರೇ ಅನ್ನೊ ವಿಷಯ ತಮ್ಮೆಲ್ಲರಿಗೂ ತಿಳಿದಿರಬಹುದು."

"ಪೋಲೀಸರಿಗೆ ತಿಳಿಸಿದರೆ ಏನಾಗುತ್ತೆ ಗೊತ್ತೋ?"

"ನಮ್ಮೆಲ್ಲರನ್ನೂ ಅರೆಸ್ಟ್ ಮಾಡಿಸೋ ಸಾಮರ್ಥ್ಯ ನಿಮಗಿದೇ ಅನೋದು ಹೊಸ ವಿಷಯವೇನೂ ಅಲ್ಲ."

"ಖಡಖಂಡಿತವಾಗಿ ಹೇಳ್ತೀನಿ:ಇನ್ನೊಂದು ವರ್ಷದ ವರೆಗೆ ಬೋನಸ್ ಕೊಡೋದು ಸಾಧ್ಯವಿಲ್ಲ!"

"ನಾವು ಅಷ್ಟೇ ಖಡಾಖಂಡಿತವಾಗಿ ಹೇಳ್ತೀನಿ: ಒಂದು ನಿಮಿಷವು ಇನ್ನು ತಡೆಯೋದು ಸಾಧ್ಯವಿಲ್ಲ!"

"ನೀವಿನ್ನು ಹೊರಡಬಹುದು"

"ಹೊರಡ್ತೇನೆ. ಇಪ್ಪತ್ತು ಸಹಸ್ರ ಕೆಲಸಗಾರರು ನಾವೇನು