ಪುಟ:Vimoochane.pdf/೨೬೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಸುದ್ದಿ ತರ್ತೀವೋ ಆಂತ ಆತುರದಿ೦ದ ಹಾದಿ ನೋಡ್ತಿದ್ದಾರೆ.

ಎಂಥ ಗಡಸು ವೈಖರಿ! ಹೊರಡುವಾಗಲೂ ಮಾತಿನ ಗುಂಡು. ಇಪ್ಪತ್ತು ಸಹಸ್ರ ಜನ ಕೆಲಸಗಾರರ ಮಾತೆತ್ತಿದಾಗ,ಮಾಲೀಕರ ಎದೆಗಳಲ್ಲಿ ನಡುಕ ಹುಟ್ಟಿತ್ತು!

ಆ ಆರು ಜನರೂ ಹೊರಟು ಹೋದರು- ನಾರಾಯಣನೂ ಕೂಡಾ.

ಉಳಿದವರು-ಮಾಲೀಕರು-ತಮ್ಮ ತಮ್ಮೊಳಗೆ ಮಾತನಾಡಿ ಕೊಂಡರು.

"ಒಂದು ತಿಂಗಳ ಬೋನಸಿಗಾದರೆ ಒಪ್ತೀವಿ ಅಂತ ಹೇಳ್ಬಹು ದಾಗಿತ್ತೇನೊ?

"ಅದ್ಯಾಕ್ಸಾರ್ ?"

"ಒಂದು ತಿಂಗಳಿನ್ದಲ್ಲ, ಎರಡು ತಿಂಗಳಿನ್ದೇ ಕೊಟ್ಟರೂ ಕೊಡ ಬಹುದು. ಆದರೆ ಈಗಲ್ಲ.ಆವರನ ಹಣ್ಣು ಮಾಡಿ ಹಾದಿಗೆ ತರಬೇಕು; ಆ ಮೇಲೆ ಭಿಕ್ಷೆ ಅಂತ ನೀಡ್ಬೇಕು."

"ಸರಿ!"

ಶ್ರೀಕಂಠ ನನ್ನ ಬೆನ್ನು ಮುಟ್ಟಿ, "ಹೊರಡೋಣ ಚಂದ್ರೂ," ಎಂದ.

ಮನೆಗೆ ಹೋಗುವುದರ ಬದಲು, ಮಧ್ಯಾಹ್ನದ ಊಟಕ್ಕಾಗಿ ಯಾವುದೋ ಹೋಟೆಲು ಸೇರಿದೆವು.

ನಾನು ನಾರಾಯಣನ ಪ್ರಸ್ತಾಪವೆತ್ತಿದೆ.

"ನಾಣಿನ ನೋಡಿದೆಯೋ ಇಲ್ಲವೋ..."

"ಅವನನ್ನ ನೆನೆಸಿಕೊಂಡರೆ ವಾಕರಿಕೆ ಬರುತ್ತೆ. ಎಷ್ಟು ಒರ ಟಾಗಿದಾನೆ ನೋಡು!"

"ಅವನೊ ಮಿಲ್ ಸೇರಿದ್ನಲ್ಲಾ."

ಹುಂ.ಲಿಸ್ಟ್ ನೋಡ್ದೆ. ಸೂಯರ್ಕಾಂತಿ ಮಿಲ್ನಲ್ಲಿದಾನೆ. ಗುಮಾಸ್ತೆ.....ಅವನು ಮುಂದೆ ಹೀಗೆಯೇ ಆಗ್ತಾನೇಂತ ನನ್ಗೆ ಆಗಲೇ ಗೊತ್ತಿತ್ತು...."