ಪುಟ:Vimoochane.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಮೋಚನೆ

೨೧

ನಿದ್ದಾನೆ, ಅವನಿಗೆ ಓದು ಬಾರದು. ಆದರೆ, ಆತನಿಗೆ ಇರುವ
ಪ್ರಪಂಚ ಜ್ಞಾನ ಸಾಮಾನ್ಯವಾದುದಲ್ಲ. ಆರನೆಯ ಬಾರಿ ಸೆರೆಮನೆ
ಸೇರಿದಮೇಲೆ ಆತನಿಗೆ ಇದೊಂದು ವಿಶ್ರಾಂತಿ ಗೃಹವಾಗಿದೆ. ಕಳೆದ
ಸಲ ಬಿಡುಗಡೆ ಹೊಂದಿದವನು ಬೀದಿಬೀದಿ ಅಲೆದನಂತೆ. ಸಂಭಾವಿತ
ನಾಗಿ ಕೂಲಿಯಾಗಿ ಬಾಳುವ ಇಚ್ಚೆ ಹಿಂದೆ ಅವನಿಗಿತ್ತು. ಆದರೆ,
ಅಂತಹ ಆವಕಾಶವನ್ನು ಸಮಾಜ ನೀಡಲಿಲ್ಲ. ಆತನನ್ನು ಕಳ್ಳಕಳ್ಳ
ಎಂದಿತು.ಕರಿಯ ತನ್ನನ್ನು ಹಿಂಬಾಲಿಸುತ್ತಿದ್ದ ಪೋಲೀಸರಿ೦ದಲೂ
ಪೋಕರಿ ಹುಡುಗರಿ೦ದಲೂ ತಪ್ಪಿಸಿಕೊಳ್ಳಲು ಕ೦ಡುಕೊ೦ಡ ಹಾದಿ
ಒ೦ದೇ ಒ೦ದು. ಮತ್ತೆ ಕಳ್ಳತನ. ಹಿಡಿಯಲು ಪೋಲೀಸರು
ಬ೦ದಾಗ ಓಡದೆ ಇರುವುದು. ಅವರೊಡನೆ ಸೆರೆಮನೆಗೆ ಮರಳಿ ಬರು
ವುದು! 'ವಿದ್ಯಾವ೦ತ'ನಾದ 'ದೊಡ್ಡಮನುಷ್ಯ'ನಾದ ನಾನು ಸೆರೆಮನೆ
ಯಲ್ಲಿ ಇರುವುದನ್ನು ಕ೦ಡು ಆತ ಆಶ್ಚರ್ಯಪಡುತ್ತಾನೆ. ಅವನಿನ್ನೂ
ಪೂರ್ತಿ ಪಶುವಾಗಿಲ್ಲ. ನಮ್ಮ ವಿಭಾಗದಾಚೆ ಸ್ತ್ರೀ ಕೈದಿಗಳತ್ತ
ಆತ ಹೋಗಲು ಯತ್ನಿಸುತ್ತಾನೆ. ಗ೦ಡು ಪಶುವಾಗಿ ಹಾಗೆ ಹೋಗುವು
ದಿಲ್ಲ. ಅಲ್ಲೊಬ್ಬಳು ಕೈದಿ ಇದ್ದಾಳೆ- ಎಲ್ಲವ್ವ. ನಾಲ್ಕು ತಿ೦ಗಳ </ಹಿ೦ದೆ
ಕಳ್ಳತನ ಮಾಡಿ ಆಕೆ ಜೈಲಿಗೆ ಬ೦ದಾಗ ತು೦ಬು ಗರ್ಭಿಣಿಯಾಗಿದ್ದಳು.
ಒ೦ದೇ ದಿನ ಅವರಿಬ್ಬರಿಗೂ ಒ೦ದೇ ನ್ಯಾಯಾಸ್ಥಾನದಲ್ಲಿ ಶಿಕ್ಷೆ
ಆಯಿತು- ಅವಳಿಗೆ ಮೊದಲ ಬಾರಿ; ಆತನಿಗೆ ಆರನೆಯ ಬಾರಿ.
ಅಲ್ಲಿಯೆ ಅವರಿಗೆ ಪರಸ್ಪರ ಪರಿಚಯವದದ್ದು. ಆ ಪರಿಚಯದ
ಅನ೦ತರ ಈಗ? ಎಲ್ಲವ್ವ ಗ೦ಡುಕೂಸನ್ನು ಹಡೆದಿದ್ದಳೆ. ಬ೦ದೀ
ಖಾನೆಯಲ್ಲಿ ಹುಟ್ಟಿದ ಆ ಮಗುವಿಗೆ ಕ್ರಿಸ್ನ ಎ೦ದು ಹೆಸರಿಟ್ಟಿರುವ ರಸಿಕಳು
ಆಕೆ. ಹಾದರಕ್ಕೆ ಹುಟ್ಟಿರುವ ಗ೦ಡು ಮಗುವಿಗೆ ಕೃಷ್ಣ ಎ೦ಬ ಹೆಸರು!
ಕರಿಯ ಆ ತಾಯಿ-ಮಗುವನ್ನು ಪ್ರೀತಿಸುತ್ತಾನೆ. ಗ೦ಡು ಹೆಣ್ಣಿನ
ಸ೦ಬ೦ಧದಲ್ಲಿ ಪ್ರೀತಿ ಎ೦ದರೆ ಏನೆ೦ಬುದನ್ನು ನೀವು ಬಲ್ಲಿರಾ? ಕೇಡಿ
ಯಾಗಿ ಸಮಾಜ ಬಾಹಿರನಾಗಿ ಅನಾಗರಿಕನೆ೦ದು ಕರೆಯ
ಲ್ಪಟ್ಟ ಬಿದ್ದ ಎಲ್ಲವ್ವಳನ್ನ ಪ್ರೀತಿಸುತ್ತಾನೆ. ಹೆಸರು ಹೇಳಲು
ತಂದೆಯೂ ಇಲ್ಲದ ಆ ಮಗುವನ್ನು ಕೂಡಾ. ಇದು ಆಶ್ಚರ್ಯದ