ಪುಟ:Vimoochane.pdf/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವರು ಮಾಡುತಿದ್ದ ಸ್ತುತ್ಯಯತ್ನವನ್ನು ಹೊಗಳಿ ಪತ್ರಿಕೆಗಳಲ್ಲಿ ವರದಿಗಳು ಬಂದವು.

ಮೊದಲ ದಿನ ಮಾಲೀಕರೆಂದರು.

"ಒಂದು ತಿಂಗಳ ಬೋನಸ್ ಕೊಡ್ತೀವಿ."

ಬಂಧಿತರಾದವರು ಒಪ್ಪಲಿಲ್ಲ. ಆದಾದ ಮೇಲೆ ಇನ್ನೊಂದು ಉತ್ತರ ಹೋಯ್ತು.

"ಎರಡು ತಿಂಗಳ ಬೋನಸ್ ಕೊಡ್ತೀವಿ."

"ಮುಷ್ಕರ ಸಮಿತಿ ಸದಸ್ಯರನ್ನ ನಾವು ಕಂಡು ಮಾತನಾಡ್ಬೇಕು."

ಆದಕ್ಕೆ ಪೋಲೀಸ್ ಅಧಿಕಾರಿಗಳು ಸಮ್ಮತಿ ಇತ್ತರು. ಲಾಕ ಕಪ್ಪಿನ ಒಳಗೆ ಆರು ಜನ ,ಹೊರಗೆ ಸಮಿತಿ ಸದಸ್ಯರು, ನಿಂತು ಸಭೆ ಜರಗಿತು.

ಆ ಉತ್ತರದಲ್ಲಿ ದಿಟ್ಟತನವಿತ್ತು:

"ಮೂರು ತಿಂಗಳ ಬೋನಸ್ ದೊರೆಯುವವರೆಗೂ ನಮ್ಮ ಮುಷ್ಕರ.ನಮ್ಮ ಮುಖಂಡರೆಲ್ಲರ ಬಿಡುಗಡೆಯಾಗ್ಬೇಕು. ಯಾರೊ ಬ್ಬರನ್ನೂ ಕೆಲಸದಿಂದ ತೆಗೆದು ಹಾಕಕೂಡದು."

"ಸಾಧ್ಯವಿಲ್ಲ," ಎಂದರು ಮಾಲೀಕರು.

ಮರುದಿನ ನಗರದ ಇತರ ಕೈಗಾರಿಕೋದ್ಯಮದ ಕಾರ್ಮಿಕರೂ ಸಹಾನುಭೂತಿಯ ಮುಷ್ಕರ ಹೂಡಿದರು. ಪೋಸ್ಟರು ಅಂಟಿಸುತಿದ್ದ ಹಲವರ ಬಂಧನವಾಯಿತು.ಬೀದಿಗಳಿಂದ ಮುಖ್ಯ ಮುಖ್ಯರಾದ ಕೆಲಸಗಾರರನ್ನು ಸ್ಟೇಷನ್ನಿಗೆ ಕರೆದೊಯ್ದರು.ನಗರದ ಎರಡು ಮೂರು ಲಾಕಪ್ಪುಗಳು ಕೂಡುದೊಡ್ಡಿಗಳಾದುವು.

"ನಾಳೆಯಿಂದ ಕಾರಖಾನೆ ಶುರುವಾಗುತ್ತಪ್ಪ," ಎಂದ ಶ್ರೀ ಕಂಠ.

"ಅಂದರೆ?"

"ಕಾಣಿಸೋದಿಲ್ವೇನು?ಹ್ಯಾಗಿದಾರೆ ಸೂಳೇ ಮಕ್ಳು ! ನಾವೇ ಸೋತ ಹಾಗಾಯ್ತು ಅಂತೂ"

"ಮೂರು ತಿಂಗಳ ಬೋನಸ್ ಕೊಡೋದೂಂತ ತೀರ್ಮಾನಿಸಿ