ಪುಟ:Vimoochane.pdf/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೀರಾ?"

"ಈಗ ತಾನೇ ನಿರ್ಧಾರವಾಯ್ತು. ನನಗೊಬ್ಬನಿಗೇ ಇದರಿಂದ ಸುಮಾರು ಎರಡೂವರೆ ಲಕ್ಷ ಕೈ ಬಿಡುತ್ತೆ.ಎರಡೂವರೆ ಲಕ್ಷ !"

ಶಾರದಾ ಬಂದು ಕೇಳಿದಳು.

"ಸಾಯಂಕಾಲ ಸಾಧನಾ ಬೋಸ್ ನೃತ್ಯ ....ಬರ್ತೀರಿ ತಾನೆ?"

ಶ್ರೀಕಂಠ ನನ್ನ ಮುಖ ನೋಡಿ,"ಏನಪ್ಪಾ,ಬೇರೇನಾದರೂ ಕಾರ್ಯಕ್ರಮ ಇದೆಯೇನಪ್ಪ?"ಎಂದು ಕೇಳಿದ.

"ಯಜಮಾನಿತಿ ಕೇಳ್ತಾ ಇದಾರೆ ಅಂದ್ಮೇಲೆ,ಉಳಿದ ಕಾರ್ಯ ಕ್ರಮವೆಲ್ಲಾ ಮನ್ನಾ"

"ಇಷ್ಟು ಹೊತ್ತಿಗೆ ಬಾಕ್ಸು ಟಿಕೆಟು ಸಿಗುತ್ತೋ ಇಲ್ಲವೋ?"

"ನಾನು ಈಗಾಗಲೇ ಮೂರು ಸೀಟು ಬುಕ್ ಮಾಡ್ಸಿದೀನಿ, "ಎಂದಳು ಶಾರದಾ.

"ಒಪ್ಪಿಗೆ.ಐದು ಘಂಟೆಗೇ ಸಿದ್ದವಾಗಿರ್ತೀವಿ....ಆದರೆ ಸಾಧನಾ ಬೋಸ್ ಗೆ ವಯಸ್ಸಾಯ್ತು,ಅಲ್ವೇನೋ ಚಂದ್ರು?"

ಮುಖ ಕೊಂಕಿಸದೆ ಶಾರದಾ ಹೇಳಿದಳು.

"ಇದೇ ಕೊನೇ ದಿಗ್ವಿಜಯ. ಇನ್ನು ಆಕೆ ಟೂರ್ ಬರೋಲ್ಲ. ಇದೊಂದ್ಸಲ ನೋಡಿ...ಅವಳ ಜತೆಗಾರನೊಬ್ಬ ಚೆನ್ನಾಗಿದಾನಂತೆ ಗೊತ್ತೆ?"

ಶ್ರೀಕಂಠ "ಹುಂ!"ಎಂದ;ಬೇರೆ ಉತ್ತರವೀಯಲಿಲ್ಲ.

ಶಾರದಾ ನೆಟ್ಟ ದೃಷ್ಟಿಯಿಂದ ನನ್ನನ್ನೆ ನೋಡಿ,ಹೊರಡುವ ಸಿಧ್ದತೆಗಾಗಿ ಒಳಹೋದಳು.

.....ಬಂಗಾಳದ ಪ್ರಖ್ಯಾತ ನೃತ್ಯಕಲಾವಿದೆ! ಸಾಧನಾ ಬೋಸ್ ಗೆ ಪುರಭವನದಲ್ಲಿ ಸಂಭ್ರಮದ ಸ್ವಾಗತವೇರ್ಪಟಿತ್ತು..... ಕಿಕ್ಕಿರಿಂದ ತುಂಬಿತ್ತು ಸಭಾಭವನ.....ಸಾಧನಾ ಬೋಸ್ ರಾಜ ನರ್ತಕಿಯಾಗಿ ಕುಣಿದಳು...ಮತ್ಸ್ಯಗಂಧಿಯಾದಳು..ಕಥಕ್ ..ಮಣಿಪುರಿ....ಆಕೆ ಬೆಡಗುಗಾತಿಯಾದ ಬಿನ್ನಾಣಗಿತ್ತಿ ಯಾಗಿರಲಿಲ್ಲ.ಆದರೆ ಆ ಮುಖಮುದ್ರೆ ಆಕರ್ಷಣೀಯವಾಗಿತ್ತು.