ಪುಟ:Vimoochane.pdf/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೈ ಕಟ್ಟಿನ ಗಾತ್ರ ದ್ರೋಹ ಬಗೆಯುತಿದ್ದರೂ ಅದರ ಮೇಲೆ ಆಕೆ ಪ್ರಭುತ್ವ ಸ್ತಾಪಿಸುತ್ತಿದ್ದಳು.........

ನನ್ನ ಮನಸ್ಸು ಎಲ್ಲೆಲ್ಲೋ ಓಡಾಡುತ್ತಿತ್ತು. ನಡುವಿನಲ್ಲಿ ಕುಳಿತಿದ್ದ ಶ್ರಿಕಂಠನಿಗೂ ನೆಮ್ಮದಿ ಇದ್ದಂತೆ ತೊರಲ್ಲಿಲ್ಲ.

ಅವನೆಂದ:

"ಇಷ್ಟೊತ್ತಿಗೆ ಎಲ್ಲವೂ ಮುಗಿದಿರತ್ತೆ. ಅವರ್ನೆಲ್ಲಾ ಬಿಟ್ಟಿದಾರೆ. ಆ ನಾರಾಯಣ್ನನ್ನೂ ಕೂಡಾ......"

ಅವನ ಕಣ್ಣುಗಳು ಸಾಧನಾ ಬೋಸನ್ನು ನೋಡುತ್ತಿದ್ದರೆ, ಮನಸ್ಸು ಹೊರಗೆ ಸುತ್ತಾಡುತಿತ್ತು.

ಶಾರದಾಗೆ ನಮ್ಮ ಮಾತಿನಿಂದ ಬೇಸರವಾಯಿತೇನೋ. ಶ್ರಿಕಂಠ, ನಾನು ಮತ್ತು ಶಾರದಾ ನಡುವೆ ಗೋಡೆಯಾಗಿದ್ದ-ಯಾ ವಾಗಲೂ. ಅವಳ ಬಗೆಗೆ ತಿಳಿಯುವ ಇಚ್ಛೆ ಎಂದೂ ನನಗೆ ಆಗುತ್ತಿರ ಲಿಲ್ಲ. ಆಕೆ ನನ್ನನ್ನು ಆಗಾಗ ಶೂನ್ಯದೃಷ್ಟಿಯಿಂದ ನೋಡುತ್ತಿದ್ದಳು. ಆದರೆ ಶೂನ್ಯದೃಷ್ಟಿಯಲ್ಲಿ ಎಂದೂ ಯಾವ ಅರ್ಥವೂ ಇರುವುದಿಲ್ಲ- ಅಲ್ಲವೆ?

ಪುರಭವನದಿಂದ ಹೊರಬಿದ್ದ ಮೇಲೆ, ನಮ್ಮ ಕಾರು ಮಾನವ ಸಾಗರದಲ್ಲಿ ಈಸಬೇಕಾಗಿ ಬಂತು.

"ಬರ್ತಾ ಇದೆ ಕಂಠಿ, ಮೆರವಣಿಗೆ!"

"ಹುಂ. ಬೇರೆ ಹಾದಿಗೆ ತಿರುಗಿಕೊಳ್ಳಪ್ಪಾ......."

ಕಾರನ್ನು ಹಿಂದೆಕ್ಕೆ ಸರಿಸಿ ಎಡಕ್ಕೆ ತಿರುವಿದೆ.

"ಸ್ವಲ್ಪ ನಿಲ್ಸು ಚಂದ್ರೂ.......ಕಾಮ್ರಿಕರ ವಿಜಯೊತ್ಸವ ನೋಡೋಣ."

ಶಾರದಾಗೆ ಬೇಸರವಾಯಿತು. ಪ್ರತಿಭಟನೆಯ ಸ್ವರದಲ್ಲಿ ಆಕೆ ಎಂದಳು:

"ಏನದು? ಮನೆಗೆ ಹೋಗ್ಬಾರ್ದಾ?"

"ನೋಡಿ ಸ್ವಲ್ಪ........ ಇದೇ ಈಗ ನಮ್ಮ ಎರಡೂವರೆ ಲಕ್ಷ ಕ್ಷೌರ ಮಾದಿದಾರೆ. ಹೊಟ್ಟೆ ಉರಿದು ಹೋಗ್ತಾ ಇದೆ ಇಲ್ಲಿ.........