ಪುಟ:Vimoochane.pdf/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬೮

ವಿಮೋಚನೆ

ನೋಡಿಯಾದರೂ ನೋಡೋಣ ಅವರ ಸಂಭ್ರಮಾನಾ......"

ಘೋಷಣೆಗಳು- ಜಯಕಾರಗಳು; ಕ್ರಾಂತಿಗೆ ವಿಜಯವಾಗಲಿ, ಎಂಬ ಹಾರೈಕೆ; ನಿಯೋಗದ ಪ್ರತಿಯೊಬ್ಬ ಸದಸ್ಯನ ಹೆಸರಲ್ಲೂ ಜಯಕಾರ.......

" ಕಾಣಿಸ್ತಾ ಇದಾನೇನೋ ನಿನ್ ಸ್ನೇಹಿತ?"

" ಯಾರು ಕಂಠಿ?"

" ಅವ್ನೇ ನಾಣಿ..."

" ಪಾಪ! ಎಲ್ಲಿದಾನೊ...ನೀನು ಅನ್ಯಾಯವಾಗಿ ಅವನ್ನ ಹೀನೈಸ್ತೀಯಾ."

ಯಾವುದೋ ಹಳೆಯ ನೆನಪು ನನ್ನನ್ನು ಕಾಡಿಸಿ ಆ ಮಾತು ಹೇಳಿಸಿತು. ಆ ನಾಣಿಯ ಜೀವನದ ಬಗೆಗೆ ನನಗೆ ಗೌರವ ವಿತ್ತೇನೊ.

" ನನ್ಗೊತ್ತು ಚಂದ್ರು...ನೀನು ಬಹಳ ಮೃದು...ನಾಣಿಯಂ ಥವರಿಂದಾನೆ ನಮಗೆ ಆಪತ್ತು ಬರೋದು. ಆ ನನ್ಮಕ್ಳು, ಒಂದು ನೋಡಿದರೆ ಕೂಲಿಕಾರರೂ ಅಲ್ಲ-ಈಚೆಗೆ ನಮ್ಮವರೂ ಅಲ್ಲ. ಈ ವಿದ್ಯಾವಂತ ಬಡ ಮಧ್ಯಮವರ್ಗ... ನಾನ್ಹೇಳ್ತೀನಿ ಚಂದ್ರೂ- ಈ ಲೋಕ್ದಲ್ಲಿ ಇರ್ರ್ಬೇಕಾದ್ದು ಎರಡೇ ವರ್ಗ: ನಮ್ಮದು-ಅವರದು. ನಡುವೆ ಮಧ್ಯಮವರ್ಗಾಂತಿರೋದರಲ್ಲಿ ಅರ್ಥವಿಲ್ಲ...."

" ನಿನ್ದೆಲ್ಲಾ ಕಟ್ಟು ನಿಟ್ಟಾದ ಸ್ಪಷ್ಟವಾದ ಅಭಿಪ್ರಾಯ ಕಂಠಿ." ನಾನು ಹಾಗೆ ಹೇಳಿದೆ. ಆದರೆ ಹೇಳದ ಒಂದು ವಿಷಯ ವಿತ್ತು. " ನಿನ್ನ ಹಾಗಲ್ಲ ನಾನು. ನನ್ನದು ಅನಿಶ್ಚಯದ ಓಲ ಡುವ ರ್ದುಬಲ ಮನಸ್ಸು-" ಎಂದು ಆತನಿಗೆ ತಿಳಿಸಬೇಕಾ ಗಿತ್ತು. ಆದರೆ ಹಾಗೆಂದು ಮಾತುಗಳಲ್ಲಿ ಹೇಳುವಂತಿರಲಿಲ್ಲ.

ಶಾರದಾಳನ್ನು ಮನೆಯಲ್ಲಿ ಬಿಟ್ಟ ಮೇಲೆ, ನಾವು ನನ್ನ ವಸತಿಗೆ ನಡೆದು ಬಂದೆವು.

" ಏನೇನಿದೆ ನೋಡು ಚಂದ್ರೂ... ಬೀರ್ ನಿಂದ ಹಿಡ್ಡು ಏನಿದ್ದರೂ ಸರಿಯೆ-ಎಲ್ಲಾ ತೆಗೆ."