ಪುಟ:Vimoochane.pdf/೨೭೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೨೭೦
ವಿಮೋಚನೆ

"ಓ! ಅಗ್ಲೇ ಎಬ್ಬಿಸ್ಬೇಕಾಗಿತ್ತು."

ಆದರೆ ಹಾಗೆ ಬಾಗಿಲುತಟ್ಟಿ ಎಬ್ಬಿಸುವ ಧೈರ್ರ್ಯ ಅವನಿಗಿರಲಿಲ್ಲ.

ನಾನು ಶ್ರೀಕಂಠನನ್ನು ಕರದೆ.

"ಕಂಠೀ ಕಂಠೀ.........ಮಗೂಗೆ ಮೈ ಚೆನ್ನಾಗಿಲ್ವಂತೆ ಕಣೋ ........ಏಳು, ಏಳು."

ಧಿಗ್ಗನೆದ್ದು ಅವನು ಕಣ್ಣು ಹಿಸಕಿಕೊಳ್ಳುತ್ತಾ ಸುತ್ತಲೂ ನೋಡೆದ. ತಾನು ಎಲ್ಲಿದ್ದೆ ನೆಂಬುದನ್ನೂ ಅಲ್ಲಿದ್ದುದರ ಕಾರಣವನ್ನೂ ಆತ ತಿಳಿಯಲು ಸ್ವಲ್ಪ ಹೊತ್ತು ಹಿಡಿಯಿತು.

"ಯಾರ್ಬಂದಿದಾರೆ?"

"ನಾಗ."
"ನಾಗ! ನಾಗ!"

"ಬಂದೆ ಬುದ್ದಿ" ಎನ್ನುತ ಅವನು ಒಳಬಂದು, ಮತ್ತೊಮ್ಮೆ ಆದೇ ಸಂದೇಶವನ್ನಿತ್ತ.

ನಾವಿಬ್ಬರೂ ಹೊರಬಿದ್ದೆವು. ಹಾದಿಯಲ್ಲಿ ಯಾವ ಟ್ಯಾಕ್ಸಿಯೂ ಸಿಗಲಿಲ್ಲ. ಜಟಕಾ ಮಾಡಿಕೊಂಡು ಮನೆಸೇರಿದೆವು. ಆಳು ನಾಗ ನಮ್ಮನ್ನು ಹಿಂಬಾಲಿಸಿ ಬಂದ, ನಡೆಯುತ್ತ.

ಡಾಕ್ಟರು ಆಗಲೆ ಬಂದಿದ್ದರು. ಮೂರು ವರ್ಷ ದಾಟಿದ್ದ ಪುಟ್ಟ ಹುಡುಗ ಜ್ವರಡದಿಂದ ತಪ್ತನಾಗಿ ಕನವರಿಸುತಿದ್ದ: "ಅಮ್ಮಾ-ಅಪ್ಪಾ

ದಾದಿ ಮುಖ ಬಾಡಿಸಿ ನಿಂತಿದ್ದಳು.

ಶ್ರೀಕಂಠ ರೇಗುತ್ತ ಕೇಳಿದ:

"ಎಷ್ಟೊತ್ನಿಂದ ಬೇಬಿ ಹೀಗಿದಾನೆ?"

"ಅಂತೂ ಸುಖದುಃಖ ವಿಚಾರಿಸ್ತೀರಲ್ಲ!"

"ಶಾರದಾ-ಪ್ರಶ್ನೆಗೆ ಉತ್ತರಕೊದಡು."

"ಕೊಡ್ತೀನಿ. ನಾನು

ರಾತ್ರೆ ವಾಪಸು ಬ್ಂದಾಗಲೇ ಮೈ

ಬೆಚ್ಚಗಿತ್ತು. ನೀವು ಮೇಲಕ್ಕೂ ಬರ್ಲಿಲ್ಲ........"

ಡಾಕ್ಟರೆಂದರು:

" ಮಗು ನೀರ್ನ್ನಲ್ಲಿ ನೆನೆದಿರಬೇಕು."