ಪುಟ:Vimoochane.pdf/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಡಾಮಿಟ್."

ಇಂಥ ಸಂಭಾಷಣೆಯನ್ನು ನಾನು ಕೇಳುತಿದ್ದೆ. ನನಗದು ಆಭಾಸವಾಗಿತ್ತು. ಬೋರ್ಗಲ್ಲ ಮೇಲೆ ನೀರು ಸುರಿದು ಹರಿದು ಹೋದ ಹಾಗೆ. ಆದರೆ ನಾನು ಕಲ್ಲಾಗಿದ್ದೆನೆ? ಅದು ಸಂದೇಹದ ವಿಷಯ. ಆದರೆ ನನ್ನ ಕಾಲುಗಳು ಮಾತ್ರ ಕೆಸರಿನಲ್ಲಿ ಹೂತು ಹೋಗಿದ್ದ ಹಾಗೆ ಭಾಸವಾಗುತಿತ್ತು.

ಈ ರೀತಿಯ ಜೀವನ ನನಗೆ ಬೇಸರ ಬಂದರೆ ಆಶ್ಚರ್ಯಪಡ ಬೇಕಾದ್ದೇನೂ ಇರಲಿಲ್ಲ. ಆದರೆ ನಾನೇನು ಮಾಡುವುದು ಸಾಧ್ಯ ವಿತ್ತು ? ಮತ್ತೆ ಸಾಯುವ ಬಯಕೆ.....ಏನಾಗಿ ಬಿಟ್ಟೆ ನಾನು!

ಆದರೆ ಬೇಬಿ......ಶ್ರೀಕಂಠ–ಶಾರದೆಯರ ನಡುವೆ ಯಾತನೆ ಗೊಳಗಾಗಿ ಬೆಳೆಯುತಿದ್ದ ಆ ಬೇಬಿ.....ಜೀವನದಲ್ಲಿ ಅತ್ಯುನ್ನತ ವಾದ ಅವಸ್ಥೆಯೊಂದಿದ್ದರೆ ಅದು ಶೈಶವ. ಮಗುತನಕ್ಕಿಂತ ಹಿರಿ ದಾದುದು ಇನ್ನೊಂದಿಲ್ಲ. ಮಕ್ಕಳು ದೇವರಿದ್ದ ಹಾಗೆ ಎನ್ನುವು ದುಂಟು. ದೇವರು ಎಂದರೆ ಇಂಥದೇ ಎಂಬ ಕಲ್ಪನೆ ಹಿಂದೆ ನನ ಗಿತ್ತು, ಈಗ ಅದು ಮಾಸಿಹೋಗಿರುವ ಚಿತ್ರ. ಆದರೆ ಮಕ್ಕಳ ಹಾಗೆ ದೇವರು ಇರುವುದು ನಿಜವಾದರೆ, ನಾನು ದೇವರನ್ನೂ ಪ್ರೀತಿಸುವೆ. ದೇವರೆಂಬವನು ಸೃಸ್ಟಿ ಲಯ ಕರ್ತೃ ಎಂದು ಹೇಳುತ್ತಾರೆ. ಅದು ನಿಜವಾದರೆ, ದೇವರು ಮಕ್ಕಳ ಹಾಗಿರುವುದು ಸಾಧ್ಯವಿಲ್ಲ.

ಹಸುಳೆಯ ಮುಗುಳು ನಗು.....ನಾನು ಅವರ ಬೇಬಿಯನ್ನು ಪ್ರೀತಿಸಿದೆ. ಆವನನ್ನು ನಾನು ಎತ್ತಿ ಮುದ್ದಾಡದ ದಿನವಿರಲಿಲ್ಲ ಆ ಮಗು ನನ್ನನ್ನು " ಮಾಮಾ" ಎಂದು ಕರೆಯುತ್ತಿದ್ದ. ಯಾವ ಮಾವನೋ ಏನೋ ....ಆದರೆ ಆ ಪದ ನನ್ನ ಮತ್ತು ಆತನ ಸಂ ಬಂಧವನ್ನು ಸ್ಧಿರಗೊಳಿಸಿತ್ತು.

ಅವನ ನಾಲ್ಕನೆಯ ವರ್ಷ – ಎಷ್ಟೊಂದು ಕುತೂಹಲಿಯಾಗಿ ಆತ ಬೆಳೆಯುತಿದ್ದ ! ಸಾವಿರ ಪ್ರಶ್ನೆಗಳನ್ನು ಕೇಳುವ ಅಭಾಸ ಅವ ನದು. "ಮಾಮಾ, ನಂಗೆ ನಾಯ್ಮರಿ ಬೇಕು." " ಮಾಮಾ, ಕೂಚ್ಮರಿ ಯಾರು ಮಾಮಾ?" " ಆಕಾಶ್ದಲ್ಲಿ ಸ್ವಿಚ್ಚು ಹಾಕಿ ಉರಿಸೋನು