ಪುಟ:Vimoochane.pdf/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಾರು ಮಾಮಾ?" "ದೇವರು ಉರಿಸ್ತಾನೆ-ಅಂತಾಳಲ್ಲ ಆಯಾ. ದೇವರು ಹ್ಯಾಗಿದಾನೆ ಮಾಮಾ?" "ಜ್ವರ ಬಂದರೆ ಚೆನ್ನಾಗಿರತ್ತೆ ಆಲ್ವಾ? ಬೆಚ್ಚಗೆ ಮಲಕೋಬಹುದು."

ಮಗು ಯಾರದು? ಯಾರ ಮಗ ಈತ? ಚಿರಜವ್ವನೆಯಾಗಿ ಇರಲು ಸರ್ವಪ್ರಯತ್ನ ಮಾಡುತ್ತಿದ್ದ ಶಾರದಾ ಅವನನ್ನು ಹೆಚ್ಚು ಮುದ್ದಾಡುತ್ತಿರಲಿಲ್ಲ. ಶ್ರೀಕಂಠ "ಎಲ್ಲೋ-ಏನೋ-ಯಾಕೋ-" ಎಂದು ದಿನಕ್ಕೊಮ್ಮೆ ಮಗನನ್ನು ಕೇಳಿದರೆ ಕೇಳಿದ, ಬಿಟ್ಟರೆ ಬಿಟ್ಟ. ಆತ ಮಗುವಿನೊಡನೆ ಮಾತನಾಡತೊಡಗಿದಾಗ ಮಾತ್ರ, ಶಾರದಳೂ ಮಾತನಾಡುತಿದ್ದಳು. ಮಗುವನ್ನೆಲ್ಲಿ ಆತ ತನ್ನದಾಗಿ ಮಾಡುವನೋ ಎಂಬ ಶಂಕೆ ಆವಳನ್ನು ಬಾಧಿಸುತ್ತಿದ್ದಿರಬೇಕು.

ಆದರೆ ವಾಸ್ತವವಾಗಿ ಮಗು ಅವರದಾಗಿರಲಿಲ್ಲ. ನನ್ನದಾ ಗಿತ್ತು. ಬೆಳಿಗ್ಗೆ ನಾನು ಬರುವುದು ತಡವಾದರೆ ಬೇಬಿ ನನಗಾಗಿ ಕಾದಿರುತಿದ್ದ. "ಮಾಮಾ ಬಂದ್ಮೇಲೆ ಬೇಫಾಸ್ಟು" ಎನ್ನುತಿದ್ದ. ಆಡುವಾಗಲೂ ಅಷ್ಟೆ; ಉಣ್ಣುವಾಗಲೂ ಅಷ್ಟೆ.

ಅದನ್ನು ಕಂಡು ಶಾರದೆಗೆ ಅಸೂಯೆಯಾಗುತಿತ್ತು.

"ಎಲ್ಲರೂ ಸೇರಿ ಮಗೂನ ಕೆಡಿಸಿದ್ರು," ಎಂದು ಅವಳು ಆಗಾಗ್ಗೆ ಆಕ್ರೋಶಮಾಡುತಿದ್ದಳು. ಆದರೆ ಎಂದೂ ನೇರವಾಗಿ ನನ್ನನ್ನು ಬಯ್ಯುತ್ತಿರಲಿಲ್ಲ. ನನ್ನೊಡನೆ ಮಗುವಿನ ಬಗ್ಗೆ ಮಾತನಾ ಡುತ್ತಿರಲಿಲ್ಲ.

ಪುತ್ರಸಂತಾನವಾಗದೇ ಹೋದರೆ ಮೋಕ್ಷ ಸಿಗುವುದಿಲ್ಲವಂತೆ. ಇನ್ನೊ೦ದು ಲೋಕದ ಯೋಚನೆಯನ್ನೆ೦ದೂ ನಾನು ಮಾಡಿದವನಲ್ಲ. ಈ ಲೋಕದಲ್ಲಿ ಮಾನವನಾಗಿ ಬಾಳಬೇಕೆಂಬುದಷ್ಟೇ ನನಗಿದ್ದ ಆಪೇಕ್ಷೆ ನನ್ನ ಪಾಲಿಗೆ ಅದು ಫಲಿಸದೇ ಹೋದ ಅಪೇಕ್ಷೆ.

ಇನ್ನು ಪುತ್ರ ಸಂತಾನ? ಆಗಲೆ ಹೇಳಿದೆನಲ್ಲ? ಮಕ್ಕಳನ್ನು ನಾನು ಪ್ರೀತಿಸುತಿದ್ದ. ಆದರೆ, 'ವಂಶದ ಕುಡಿ' ಯಾಗಿ ನನ್ನದೊಂದು ಮಗುವಿರಬೇಕೆಂದು ನಾನೆಂದೂ ಬಯಸಲಿಲ್ಲ. ಮುದ್ದಾದ ಎಳೆಯ ಕೈಯನ್ನು ನನ್ನದರಲ್ಲಿಟ್ಟು ಪುಟ್ಟ ಹೆಜ್ಜೆಗಳನ್ನಿಡುತ್ತ ನನ್ನ ಜತೆಯಲ್ಲಿ