ಪುಟ:Vimoochane.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨

ವಿಮೋಚನೆ

ಸಂಗತಿ. ಕರಿಯ ಕೊಠಡಿಯ ಸರಳುಗಳ ಎಡೆಯಿಂದ ನನ್ನೂಡನೆ
ಮಾತನಾಡೂತ್ತಾ ತನ್ನ ಹೃದಯದೂಳಗಿನ ನೋವನ್ನು, ಹೂರಕ್ಕೆ
ಹರಿಯಬಿಡುತ್ತಾನೆ. ಅವಕಾಶ ದೊರೆತರೆ, ಹೊರ ಹೋದಮೇಲೆ
ಎಲ್ಲವ್ವನೊಡನೆ ಸಂಸಾರ ಹೂಡಬೇಕೆಂಬ ಆಸೆ ಅವನಿಗೆ-ಮನುಷ್ಯ
ನಾಗುವ ಆಸೆ. ಕೇಡಿಯ ಹಗಲುಗನಸಿಗೆ ಒಂದು ಮಿತಿ ಮೇರೆ ಬೇಡವೆ-
ಎಂದು ಕೇಳಬಹುದು ಯಾರಾದರೂ!
ಪಕ್ಕದ ಇನ್ನೂಂದು ಕೊಠಡಿಯಲ್ಲಿ ಎಳೆ ಹರೆಯದ ಯುವಕ
ನೊಬ್ಬನಿದ್ದಾನೆ. ಕರಿಯನಿಗಿಂತ ಐದಾರು ವರ್ಷ ಚಿಕ್ಕವನು ಈತ.
ಇನ್ನೂ ವಿಚಾರಣೆ ಮುಗಿದಿಲ್ಲ. ಈತನ ಮನಸ್ಸು ಆಸ್ತವ್ಯಸ್ತವಾಗಿದೆ.
"ನಾನು ಹೊಡೆದೆ. ಅವಳು ಸತ್ತೋದ್ಲು. ಆದರೆ ಸತ್ತೋಗ್ಲಿ ಅಂತ
ನಾನು ಹೊಡೀಲಿಲ್ಲ. ನಾನು ತಪ್ಪುಮಾಡಿಲ್ಲ. ಏನು ಸಾರ್?
ನನ್ನ ಬಿಟ್ಬಿಡಬಹುದೇ ಸಾರ್?" ಎಂದು ಆತ ಕೇಳುತ್ತಿದ್ದಾನೆ.
ಎಲ್ಲರೂ ಹೀಗೆಯೇ .ಆರಂಭದಲ್ಲಿ ಎಲ್ಲರೂ ಹೀಗೆಯೇ.
ನಾನದನ್ನು ಚೆನ್ನಾಗಿ ಬಲ್ಲೆ. ನಾಳೆ ಆತನ ಮುಖದ ಚರ್ಯೆ ಬದಲಾಗುವುದು.
ಮುಖದ ಮೇಲೆ ಕಾಠಿನ್ಯದ ರೇಖೆಗಳು ಮೂಡುವುವು. ಎಲ್ಲರನ್ನೂ
ನೆಟ್ಟದೃಷ್ಟಿಯಿಂದ ನೋಡುವ ಸಾಮರ್ಥ್ಯ ಆ ಕಣ್ನುಗಳಿಗೆ ಬರುವುದು
ಆಮೇಲೆ ತುಚ್ಛೀಕಾರದ ನೋಟ. ಇದು ಯಾವಾಗಲೂ ಹೀಗೆಯೇ.
.....ನನ್ನ ಆತ್ಮಕತೆ ಹೇಳಲು ಹೊರಟವನು ಬೇರೆಯವರ
ಬಗ್ಗೆ ಬರೆಯುತ್ತಿದ್ದೇನೆ ! ಇದು ಸರಿಯಲ್ಲ .ನನಗಿರುವ ಸ್ವಲ್ಪ ಅವ
ಕಾಶದಲ್ಲಿ, ಹೇಳಬೇಕಾದ್ದೆಲ್ಲವನ್ನೂ ನಾನು ಹೇಳಿ ಮುಗಿಸಬೇಕು.
ಆದರೆ ಈ ದಿನ ನಾನು ಹೆಚ್ಚು ಬರೆಯಲಾರೆ. ಗತಕಾಲದ
ಸ್ಮರಣೆಗಳು ಧಾವಿಸಿಬರುತ್ತಿವೆ. ಏನನ್ನು ಬರೆಯಲಿ? ಏನನ್ನು ಬಿಡಲಿ? ಆದರೂ ನಾನು ಬರೆಯಬೇಕು. ಯೋಚಿಸಿ ಯೋಚಿಸಿ, ನೂರು ಎಳೆಗಳನ್ನು ಒಂದೊಂದಾಗಿ ಎತ್ತಿ, ಜೀವನದ ಬಿಡಿಸಲಾಗದ ಸಿಕ್ಕನ್ನು ಮೆಲ್ಲಮೆಲ್ಲನೆ ಬಿಡಿಸಿ, ಒಂದು ನೇರವಾದ ದೀರ್ಘವಾದ ದಾರವನ್ನು ನಾನು ತಯಾರಿಸ ಬೇಕು. ಆ ದಾರದ ಕೊನೆ ಬಂದಾಗ ನನ್ನ ಕತೆಯ ಮುಕ್ತಾಯ ವಾಗುವುದು. ಆ ರಹಸ್ಯವನ್ನು ಇಲ್ಲಿ ಹೇಳಲೇ? ಆ ದಾರವೇ ನನ್ನ