ಪುಟ:Vimoochane.pdf/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಡೆದು ಬರುವ ಒಂದು ಮಗುವಿದ್ದರಾಯಿತು. ಅದು ಯಾರದಾದರೂ ಸರಿಯೆ. ಅದಕ್ಕಿಂತ ಹೆಚ್ಚು ನನಗೆ ಬೇಕಾಗಿರಲಿಲ್ಲ......

ಯುದ್ಧ ಮುಕ್ತಾಯವಾಗಿತ್ತು ಆಗಲೆ. ಆದರೆ, ಆ ಯುದ್ಧದ ಶನಿ ಸಂತಾನಗಳಾಗಿದ್ದ ಕಳ್ಳಪೇಟೆ, ದಾಸ್ತಾನುಗಾರಿಕೆ, ಸತ್ತಿರಲ್ಲಿಲ್ಲ. ಜನರು ಎಲುಬುಗೂಡುಗಳ ಮೇಲೆ ಹಣದ ಕಟ್ಟಿದವರು, ಕಟ್ಟು ತ್ತಲೇ ಹೋದರು.

ಜನರ ಎಲುಬು ಗೂಡು ಮತ್ತು ಹಣದ ಥೈಲಿ. ಜನರು ಎಂದರೆ ಯಾರು? ಎಲುಬು ಗೂಡುಗಳಂತಹ ಶರೀರಗಳಿದ್ದ ಜನರ ಬಗ್ಗೆ ನನಗೆ ಕನಿಕರವಿತ್ತೆ? ದುರ್ಬಲರನ್ನು ಎಂದೂ ನಾನು ಪ್ರೀತಿಸಿದವ ನಲ್ಲ. ದುರ್ಬಲನಾದ ವ್ಯಕ್ತಿಯೂ ಒಂದೇ - ಸತ್ತೆ ಇಲಿಯೂ ಒಂದೇ. ಆದರೆ, ಒಂದೇ ಸಮನೆ ಇಲಿ ಸತ್ತರೆ ಅಂಟು ಜಾಡ್ಯ ಬರುವುದಲ್ಲವೆ ? ಹಾಗೆಯೇ, ಥೈಲಿಯ ಭಾರದಿಂದ ಎಲುಬು ಗೂಡುಗಳೂ ಪುಡಿ? ಯಾದರೆ?....... ಎಲ್ಲವೂ ದುರಂತವಾಗಿಯೇ ತೋರುತಿತ್ತು - ಎಲ್ಲವೂ.

ಶ್ರೀಕಂಠ ಹೇಳುತ್ತಿದ್ದ:

"ಚಂದ್ರೂ , ನೀನು ನಿರಾಶಾವಾದಿ ಕಣೊ."

ನಿಜವಿದ್ದಿರಬಹುದು. ಆದರೆ ಹಾಗೆ ಹೇಳಿದ ಅವನನ್ನು ಆಶಾ ವಾದಿ ಎನ್ನುವುದು ಸಾಧ್ಯವಿತ್ತೆ ? ಅವನ ಆಶಾವಾದದಿಂದ, ಅವನಿ ಗೊಬ್ಬನಿಗೇ ಲಾಭವಾಗುತ್ತಿತ್ತು-ಇತರರಿಗಲ್ಲ. ಅವನ ದೃಷ್ಟಿಯಲ್ಲಿ ಎಲ್ಲವೂ ಸ್ಪಷ್ಟವಾಗಿತ್ತು : ಈ ಜಗತ್ತು ಸಮರ್ಥರದು ; ಬಾಯಿ ಇದ್ದ ವನೇ ಬದುಕಿದ ; ಹಣ ಸಂಪಾದಿಸಿ ಬಲಾಢ್ಯನಾದವನೇ ಮಾನವ. ಅಲ್ಲಿ ಸಂಧಾನಕ್ಕೆ ಅವಕಾಶವಿರಲಿಲ್ಲ. ರಿಯಾಯತಿಯ ಮಾತಿರಲಿಲ್ಲ. ಎಲ್ಲವೂ ಕಟ್ಟುನಿಟ್ಟಿನ ಏರ್ಪಾಟು. ಒಂದು ಕಡಿತ ಎರಡು ತುಂಡು.

ಹಾಗಿದ್ದೂ ಅವನು ತನ್ನ ಆವರಣದ ಕೈದಿಯಾಗಿದ್ದ. ಬಾರಿ ಬಾರಿಗೂ ಆತೆ ಮಿತಿಮೀರಿ ಕುಡಿದಾಗ ನನಗೆ ವಿಷಾದನೆನಿಸುತಿತ್ತು.

"ಕಂಠಿ, ಒಂದ್ಮಾತು ಹೇಳ್ತೀನಿ. ಕೋಪಿಸ್ಕೋತೀಯಾ?"