ಪುಟ:Vimoochane.pdf/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಿಂದೊಮ್ಮೆ ನಾನು ರಕ್ಶಣೆಕೊಟ್ಟಿದ್ದ ದೇಶಭಕ್ತರ ನೆನಪಾಯಿತು

"ಅವರೆಲ್ಲೊ ಕಂಠಿ, ಆ ದೇಶಭಕ್ತರು?"

"ತಾಳಮ್ಮಾ ,ತಾಳು."

ಕತ್ತಲಾದಮೇಲೆ ನಾವು, 'ಸೈಮನ್ಸ್'ಗೆ ಹೋದೆವು ಎಸ್ಮೀನಾ ಕಾರ್ಖಾನೆಯ ಮಾಲೀಕರ ಮಗನಬ್ಬ ನಮ್ಮನ್ನು ಸೇರಿ ಕೊಂಡ. ತಿಂಡಿ, ಕುಡಿತ, ಧೂಮಪಾನ.... ಕೈ ಕೈ ಹಿಡಿದು ಕುಣಿತ.... ಮೈಗೆ ಮೈತಗುಲಿಸಿ ಕುಣಿತ.

ಆಂಗ್ಲರೂ ನಾವೂ ಅಂದಿನಿಂದ ಮಿತ್ರರು. ಅವರ ಸಂಸ್ಕ್ರತಿ ಯನ್ನು ಒಪ್ಪಿಕೊಳ್ಳುವುದರಲ್ಲಿ ಅಪ್ಪಿಕೊಳ್ಳುವುದರಲ್ಲಿ ತಪ್ಪಿರಲಿಲ್ಲ ಹಾಗೆ ಮಾಡುವುದು ನ್ಯಾಯವಾಗಿತ್ತು. ದೇಶ ಸ್ವತಂತ್ರ್ಯವಾದ ಆನಂ ದೋನ್ಮಾದದಾಲ್ಲಿ ಯಾರದೋ ಬಾಹು ಯಾರದೋ ನಡುವನ್ನು ಬಳಸಿ ದರೆ, ಅದರಲ್ಲಿ ಅನ್ಯಾಯವೇನೂ ಇರಲಿಲ್ಲ

ಯಾರೋ ಕೇಳುತ್ತಿದ್ದರು:

"ಒಬ್ಬರೇ ಬಂದಿದ್ದೀರಲ್ಲ? ಶ್ರೀಮತಿ ಶ್ರೀಕಂಠರು ಕಾಣಿಸ್ತಾ ಇಲ್ಲ!"

ಶ್ರೀಕಂಠ ನನ್ನೆಡೆಗೆ ತಿರುಗಿ ಕೇಳಿದ:

"ಯಾರೋ ಆ ಪ್ರಶ್ನೆ ಕೇಳ್ತಿರೋನು? ಏನಾಗ್ಬೇಕಂತೋ ಅವನ್ಗೆ?"

ನಾನು ವಿನಯದಿಂದ ಉತ್ತರವಿತ್ತೆ:

"ಲೇಡಿ ಶ್ರೀಕಂಠರಿಗೆ ಆರೋಗ್ಯ ಸರಿಯಾಗಿಲ್ಲ ಸಾರ್."

ಸ್ವಲ್ಪ ಹೊತ್ತಾದ ಮೇಲೆ ಶ್ರೀಕಂಠ ಪ್ರಶ್ನಿಸಿದ:

"ನೀನೇನೋ ಹಾಗಂದೆ. ಆದರೆ ಶಾರದಾ ಎಲ್ಲಿಗೆ ಹೋಗಿ ದಾಳೋ ಯಾರಿಗೆ ಗೊತ್ತು?..... ಏನಪ್ಪ ........ ನಮ್ಮವರು ಇಷ್ಟೊತ್ತಿಗೆ ಮನೇಲೇ ಇರ್ತಾರೆ ಅಂತೀಯಾ?"

"ಈ ದಿವಸವೂ ಅದೇ ವಿಷಯ ಚರ್ಚಿಸ್ಬೇಕೆ?"

"ಸರಿ, ಬಿಟ್ಟಡೋಣ ಅದನ್ನ.... ಅಲ್ಲ ಚಂದ್ರೂ, ನಾನು ಇಲ್ಲಿ ಈರೀತಿ ಇರೋದು ಅವಳು ಮಾತ್ರ ಪತಿಭಕ್ತೆ ಪರಾಯಣೆ