ಪುಟ:Vimoochane.pdf/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಾಗಿರ್ಬೇಕೊಂತ ಭಾವಿಸೋದು-ಇದು ಸರಿಯಾ?"

"ನೋಡಪ್ಪಾ ಕಂಠಿ. ಈ ವಿಷಯ ನಿಲ್ಲಿಸ್ದೇ ಇದ್ದರೆ, ಹೊರ ಗ್ಹೋಗಿ ನಿಂತಿರ್ತ್ತಿನಿ."

"ತಪ್ಪಾಯ್ತು."

ನಮ್ಮ ಜತೆಯಲ್ಲಿದ್ದವನು ಅದಾಗಲೇ ಯಾವುದೋ ಮೂಲೆ ಸೇರಿದ್ದ. ಎಂಥೆಂಥ ಜನರಿದ್ದರು ಅಲ್ಲಿ! ಸ್ವಾತಂತ್ರ್ಯದ ಮಂಗಳೋದ ಯವನ್ನು ಇದಿರುನೋಡುತ್ತ ಉನ್ನತ ಅಧಿಕಾರಿಗಳು ಡ್ಯುಟಯ ಮೇಲಿದ್ದರು ನಿಜ. ಆದರೆ ಅವರ ಪತ್ನಿಯರು ಅಲ್ಲಿಗೆ ಬಂದಿದ್ದರು. ನಗರದ ಗಣ್ಯರು-ಸುಸಂಸ್ಕ್ರತರು-ದೊಡ್ದ ಮನುಷ್ಯರು ಅಲ್ಲಿ ದ್ದರು. ಹೇಳಲು ಅಡ್ರೆಸಿದ್ದ ವ್ಯಕ್ತಿಗಳು, ಎರಡೆರಡು ಫೋನ್ ನಂಬ ರಿದ್ದವರು,ಇಂಥ ಮನೆತನದವರೆಂದು ಹೇಳಿಕೊಳ್ಳುವ ಸೌಲಭ್ಯವಿದ್ದ ವರು....... ಅದು ಸಮಾಜದ ಸೌರಭ..........

ಎಂಥ ಸೌರಭ!....... ನನಗೆ ವಾಕರಿಕೆ ಬರುತಿತ್ತು. ಮೂಗು ಮುಚ್ಚಿಕೊಳ್ಳಬೇಕೆನಿಸುತಿತ್ತು.

ಶ್ರೀಕಂಠನನ್ನೆಳೆದುಕೊಂಡು ಬಾಲ್ಕನಿಗೆ ಹೋದೆ. ಹನ್ನೆರಡು ಹೊಡೆಯುವ ಹೊತ್ತು. ಸಿಂಗರಿಸಿದ್ದ ಬೀದಿಗಳು ವಿದ್ಯುದ್ದೀಪಗಳ ಹಾಲು ಬೆಳಕಿನಲ್ಲಿ ಹಗಲಿನಂತೆ ಕಾಣಿಸುತ್ತಿದ್ದವು......... ಆ ಜನ ಜಂಗುಳಿ! ಜನರಿಗೆ ಹುಚ್ಚುಹಿಡಿಯಿತೇನು ಹಾಗಾದರೆ? ಆ ಸಂತೋಷ ಕೋಲಾಹಲ... ಹಾಗಾದರೆ ನಾಳೆಯಿಂದ ನಿಜವಾಗಿಯೂ ಜಗತ್ತು- ನಮ್ಮ ಜಗತ್ತು- ಬದಲಾಗುವುದೆ? ಮಾನವ ಬದಲಾಗುವನೆ? ಶ್ರೀಕಂಠ ಇನ್ನು ನಾರಾಯಣನನ್ನು ಅವಹೇಳನ ಮಾಡಲಾರನೆ?

ಬೆತ್ತದ ಎರಡು ಕುರ್ಚಿಗಳನ್ನು ತರಿಸಿ ನಾವು ಅಲ್ಲಿ ಕುಳಿತೆವು. 'ಸೈಮನ್ಸ್'ನವರು ದೇಶಪ್ರೇಮಿಗಳಾಗಿ ಮಾರ್ಪಟ್ಟಿದ್ದರು...... ಒಂದು ಹಿಂದೀ ಗೀತ..... ಆ ಬಳಿಕ ಒಂದು ಇಂಗ್ಲಿಷ್....... ಗಾಳಿ ತಣ್ಣನೆ ಬೀಸುತಿತ್ತು. ನನ್ನ ಎವೆಗಳು ಮುಚ್ಚಿಕೊಂಡವು. ಕೈ ಬೆರಳುಗಳ ನಡುವೆ ಸಿಗರೇಟು ಉರಿಯುತ್ತಲೇ ಇತ್ತು.....

ಸ್ಫೋಟನವಾದಂತೆ ಸದ್ದು! ನಾನು ಬೆಚ್ಚಿ ಬಿದ್ದೆ. ನಿದ್ದೆ ಹೋ