ಪುಟ:Vimoochane.pdf/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

...ಸೋಮವಾರ

ಇದೇ ಈಗ ಸೆರೆಮನೆಯ ಪಹರಿ ಹೊಡೆದಿದ್ದಾನೆ. ಮನ ಸಿಲ್ಲದ ಮನಸಿನಿಂದ ಎದ್ದು ಕುಳಿತಿದ್ದೇನೆ. ಏಳದೆ ಹೇಗಿರಲಿ? ಸಿರಿ ವಂತಿಕೆಯ ಸೋಮಾರಿತನ ನನ್ನ ಪಾಲಿಗೆ ಇನ್ನಿಲ್ಲ, ಪಯಣ ಹೊರ ಟಿರುವ ಪ್ರತ್ತಿಕ, ಸೂರ್ಯೋದಯದಲ್ಲೆದ್ದು ಮುಂದಿನ ಮಾರ್ಗ ಕ್ರಮಿಸಲೇ ಬೇಕು. ನಿಯಮ ನಿಷ್ಟೆ ಇದ್ದರೆ ಮಾತ್ರ ಆ ಯಾತ್ರಿಕ, ಹಿಮವತ್ಪರ್ವತವನ್ನೇರಿ ಕೈಲಾಸನಾಥನನ್ನು ಕಾಣಬಲ್ಲ.

ಈ ಒಂದು ವಾರದಲ್ಲಿ ನಾನು ನಿಯಮನಿಷ್ಟೆ ಪಾಲಿಸಿದ್ದೇನೆ— ಹೊತ್ತಿಗೆ ಸರಿಯಾಗಿ ಏಳುವ ಮಟ್ಟಿಗೆ ಹೊತ್ತಾಗುವವರೆಗೂ ಬರೆ ಯುವ ಮಟ್ಟಿಗೆ.

ಹಿಂದಿನ ನನ್ನ ಜೀನನದಲ್ಲಿ ಒಂದು ಸೂತ್ರವಿತ್ತೆ, ಕ್ರಮಬದ್ಧತೆ ಯಿತ್ತೆ? ಹಾಗೆಂದು ಯಾರಾದರೂ ಕೇಳಿದರೆ ನಾನು ಕೊಡಬಹುದಾದ ಉತ್ತರವಿಷ್ಟೆ : "ಇಲ್ಲ, ಇರಲಿಲ್ಲ.” ನಾನು ಈ ಸ್ಪಿತಿಗೆ ಬಂದಿರುವು ದಕ್ಕೆ, ಅಂಥ ಸೂತ್ರ ಕ್ರಮಬದ್ಧತೆ ಇಲ್ಲದೆ ಹೋದುದೂ ಒಂದು ಕಾರಣ

ಇದು ಪ್ರಶಾಂತವಾದ ಪ್ರಾತಃಕಾಲ, ನಿಸರ್ಗದ ಮಾಧುರ್ಯ ವನ್ನು ಸವಿಯಲು ಕವಿ ಹೃದಯ ಬೇಕಂತೆ. ನನಗೆ ಕವಿ ಹೃದಯ ಇದೆಯೋ ಆ ಪರೀಕ್ಷೆಯಾಗಬೇಕಾದರೆ, ಯಾವನಾದ ರೊಬ್ಬ ಕವಿಯನ್ನು ಒರೆಗಲಾಗಿ ಮಾಡಿ ನನ್ನನ್ನು ನಾನದಕ್ಕೆ ತೀಡಿ ನೋಡಬೇಕು! ಅಂತಹ ಬೌದ್ಧಿಕ ಕಸರತ್ತಿಗೆ ನಾನು ಸಿದ್ಧನಿಲ್ಲ ; ಆ ಪಂದ್ಯಾಟಕ್ಕೆ ನನಗೆ ಪುರಸತ್ತಿಲ್ಲ!

ನನಗೆ ಈಗ ಆನಂದದ ಅನುಭವವೂ ಆಗುತ್ತಿದೆ; ನೋವಿನ