ಪುಟ:Vimoochane.pdf/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಮಂತ್ರಿತರನ್ನೆಲ್ಲ ಕ೦ಡು, "ಹೀಗೆ ದಯೆಮಾಡಿಸ್ಬೇಕು" ಎಂದು ಒಳಗೆ ಕರೆದೊಯ್ದು ಶಾರದೆಯ ವಶಕ್ಕೊಪ್ಪಿಸಿ, ಕೃತಕವಾಗಿ ಬಾರಿ ಬಾರಿಗೂ ಮುಗಳ್ನಕ್ಕು ಕೈ ಜೋಡಿಸಿ ಬೇಸರವಾಗಿ, ಶ್ರೀಕಂಠ ನನ್ನನ್ನೆಳೆದುಕೊಂಡು ಹೊರಬಂದ.

ಅವನ ಮುಖ ಮ್ಲುನವಾಗಿತ್ತು. ಎಲ್ಲಿಗೋ ಓಡುತಿದ್ದ ಅವನ ಮನಸ್ಸನ್ನು ಹಿಡಿದು ತರಲೆಂದು ಕೇಳಿದೆ:

"ಅವನೆಲ್ಲೋ ಆ ಭೂಪ? ಆದಿವ್ಸ ನಮ್ಮನೇಲಿ ಅಡಗಿದ್ದು ಕ್ರಾಂತಿ ಮಾಡ್ದೋನು?"

ತನಗಿಷ್ಟವಿಲ್ಲದೆ ಇದ್ದರೂ ಅನಿವಾರ್ಯವಾಗಿ ಮುಗುಳ್ನಗುತ್ತ ಶ್ರೀಕಂಠ ಉತ್ತರವಿತ್ತ:

"ಆ ದಿವ್ಸವೇ ಹೇಳಿದ್ದೆ- ಅದು ಸಾಮನ್ಯ ಘಟ ಅಲ್ಲಾಂತ. ಆತ ಇನ್ನು ಕೆಂದ್ರದಲ್ಲೇ ಸಚಿವನಾಗ್ತಾನೆ. ಅದಕ್ಕೋಸ್ಕರ ದಿಲ್ಲಿಗೆ ಹೋಗಿದಾನೆ. ಇನ್ನು ನಾವು ದಿಲ್ಲಿಗೆ ಹೋದರೆ, ಉಳ್ಕೊಳ್ಳೋದು ಅವರ್ಮನೇಲೆ!"

ಶ್ರೀಕಂಠನಿಗೆ ಖುಷಿಯಾಗ ಬೇಕೆಂದು ನಾನು ಗಟ್ಟಯಾಗಿ ನಕ್ಕೆ. ಆದರೆ ಆತ ಸತ್ಕಾರ ಕೂಟ ನಡೆಯುತ್ತಲಿದ್ದ ಹಾಲ್‌ನತ್ತ ನೋಡುತ್ತ ಮುಖ ಗಂಟಕ್ಕಿಕೊಂಡು ಗೊಣಗಿದ:

"ಬೆಕ್ಕು! ಬೆಕ್ಕು!"

"ಕಂಠಿ...."

"ನೋಡಿದ್ಯೇನೋ ಚಂದ್ರು ಬೆಕ್ನ? ಬಿಳೇ ಹೊದಿಕೆಯ ಬಿಳೇ

ಬೆಕ್ಕು...."

ಬೆಲೆ ಬಾಳುವ ಬಿಳಿಯ ರೇಷ್ಮೆ ಸೀರೆಯುಟ್ಟು ಶುಭ್ರ ಖಾದಿಯ ವಾತಾವರಣಕ್ಕೆ ಹೊಂದಿಕೆಯಾಗುವಂತೆ ಶಾರದಾ, ಜಗತ್ತೆಲ್ಲವೂ ತನ್ನದೆಂಬ ಆತ್ಮವಿಶ್ವಾಸದಿಂದ ನಗುತ್ತಿದ್ದಳು.

"ನಡಿ ಚಂದ್ರು, ನಾಲ್ಕು ನಿಮಿಷ ಹೊರಗೆ ಹೋಗ್ಬಿಟ್ಟು

ಬರೋಣ."

ಅಳಿಯ ಹೊರ ಹೋದುದು ತಿಳಿದರೆ, ಆ ಮಾವ ಮುನಿದು