ಪುಟ:Vimoochane.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಮೋಚನೆ

೨೩

ಪಾಲಿಗೆ ಉರುಳಾಗಿ ಪರಿಣಮಿಸುವುದೆಂದರೆ ನೀವು ನಂಬುವಿರಾ?
ದೇಹದ ಕಾಹಿಲೆ, ಮನಸ್ಸಿನ ಕಾಹಿಲೆಯನ್ನು ಮೀರಿಸಿದೆ. ಈಸಾರೆ
ಈ ಆನಾರೋಗ್ಯದಿಂದ ನಾನು ತಪ್ಪಿಸಿಕೊಳ್ಳಲಾರೆ. ಈ ವಿಚಾರಣೆಯ
ನಾಟಕದಲ್ಲಿ ನನಗೆ ಆಸಕ್ತಿಯಿಲ್ಲ. ಆದರೂ ನ್ಯಾಯದ ಸತ್ಯದ ದೊಡ್ದ
ಹೆಸರಿನಲ್ಲಿ ಆ ವಿಚಾರಣೆ ಆಗಬೇಕು! ನನಗೆ ನಗು ಬರುತ್ತಿದೆ: ನನ್ನ
ಬಿಡುಗಡೆಯನ್ನು ನಾನು ಪಡೆದಮೇಲೆ ಇವರೇನು ಮಾಡುವವರು?
ಒಂದು ವಾರದ ಬಳಿಕ ಇವರೇನು ಮಾಡುವವರು?