ಪುಟ:Vimoochane.pdf/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊಳ್ಳಬಹುದು ಆದರೆ ಶ್ರೀಕಂಠನ ಕೊರಗಿಗೆ ಬೇಕಾದ ಔಷಧಿಗಿಂತ, ಮಾವನ ಮುನಿಸು ಮುಖ್ಯವಾಗಿರಲಿಲ್ಲ.

ನಾವು ಬೇಗನೆ ವಾಪಸು ಬಂದೆವು. ಬಂದಾಗ ಸುಪ್ರಸಿದ್ದರು

ಪಿಟೇಲು ಬಾರಿಸುತ್ತಿದ್ದರು.

"ಇನ್ನು ಭಾಷಣ ಕಣೋ ಚಂದ್ರು. ಆಮೇಲೆ ವಂದನಾರ್ಪಣೆ."

ಮಾನ್ಯ ಮಂತ್ರಿಗಳ ಸ್ವರ ಕೇಳಿಸುತಿತ್ತು :

"ಧರ್ಮಸೇವಾಪ್ರಸಕ್ತ ಸದಾಶಿವ ಮೂರ್ತಿಯವರೇ, ಶ್ರೀ

ಮತಿ ಶಾರದಾದೇವಿಯವರೇ, ಶ್ರೀಮಾನ್ ಶ್ರೀಕಂಠಯ್ಯನವರೇ..."

"ಓ!" ಎಂದು ಆಣಕಿಸಿದ ಶ್ರೀಕಂಠ.

ಆಳೊಬ್ಬನು ಓಡಿಬಂದು ಹೇಳಿದ :

"ದೊಡ್ಡಯಜಮಾನ್ರೂ ಚಿಕ್ಕಮ್ಮಣ್ಣಿಯವರೂ ಆಗ್ಲಿಂದ

ಬುದ್ದೀರ್ರ್ನ ಕರೀತನ್ರೆ. ತಾವು ಬರಬೇಕಂತೆ..."

ಮಗನನ್ನು ಮನೆಯಲ್ಲೆ ಬಿಟ್ಟು ಬಂದ್ದಿದ್ದ ಯುವತಿ ಶಾರದಾ

ನಟನೆಯ ಬೆರಗು ನೋಟದಂದ ಮಾತಿನ ಮಳೆ ಸುರಿಸುತಿದ್ದ ಸಚೆವ ರನ್ನೇ ನೋಡುತಿದ್ದಳು. ಪಕ್ಕದಲ್ಲೇ ಒಂದು ಆಸನ ಖಾಲಿಯಾಗಿ

ಕಾದಿತ್ತು ಶ್ರೀಕಂಠನಿಗಾಗಿ.

"ಬುದ್ದಿಯವರಿಗೆ ಮೈ ಸರಿಯಾಗಿಲ್ವಂತೆ, ಆ ಮೇಲೆ ಬರ್ರ್ತ

ರಂತೆ-ಆಂತ ಹೋಗಿ ಹೇಳಪ್ಪ."

--ಹಾಗೆ ಹೇಳುತ್ತ ಶ್ರೀಕಂಠ, ಮೈ ಸರಿಯಾಗಿಲ್ಲವೆನ್ನುವುದಕ್ಕೆ,

ಸೂಚನೆ ಎಂಬಂತೆ, ಮೆದುಳನ್ನು ತಟ್ತುತಿದ್ದ.

ಪ್ರಶಂಸೆ ಗುಣಗಾನದ ಆ ಬಾಷಣ ಮುಗಿಯುತಿದ್ದಂತೆ ಶಾರದಳೇ

ಆಲ್ಲಿಗೆ ಬಂದಳು-ಬಿರುಗಾಳಿಯ ಹಾಗೆ.

"ಏನಿದು ನಿಮ್ತಮಾಷೆ? ಬನ್ನಿ. ಆಪ್ಪ ಕರೀತಾ ಇದಾನೆ.

ನೀವು ವಂದನಾರ್ಪಣೆ ಮಾಡ್ಬೇಕಂತೆ."

"ತಲೆ ಸಿಡೀತಾ ಇದೆ ಶಾರದಾ."

"ಇದೇ ಈಗ ಬಂತೇನೋ ಕಾಹಿಲೆ?"

"ನೀವೇ ಆರ್ಪಿಸಿ ಶಾರದಾ"