ಪುಟ:Vimoochane.pdf/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮದುವೆಯ ಅನಂತರದ ಮೊದಲ ದಿನಗಳ ಹುಡುಗಿ ಶಾರದೆಯನ್ನು ಕಂಡಿದ್ದೆ. ಆಗ ಆಕೆ ಸೀರೆಯ ಸೆರಗು ಸರಿಪಡಿಸಿಕೊಂಡಿದ್ದಳು--- ಏನನ್ನೋ ಬಚ್ಚಿಡಲು ಯತ್ನಿಸಿದಂತೆ. ಕಾರನ್ನು ಒತ್ತಟ್ಟಿಗೆ ಬಿಟ್ಟು, ನಡೆಯುತ್ತ ಹೋಗುವುದು, ಜಟಕಾ-ಬಸ್ಸುಗಳಲ್ಲಿ ಪ್ರಯಾಣ ಬೆಳೆ ಸುವುದು, ಆಗ ಅವರ ಪಾಲಿನ ವಿಹಾರವಾಗಿತ್ತು.....ಈಗ ಶಾರದಾ ಯುವತಿ. ಸೆರಗಿನ ಕಡೆಗೆ ಗಮನವಿರಲಿಲ್ಲ. ಬಚ್ಚಿಡಬೇಕೆಂಬ ಬಯಕೆ ಇರಲಿಲ್ಲ.

ಹತ್ತಾರು ನೆನಪುಗಳು ನನ್ನನ್ನು ಬಾಧಿಸಿದುವು. ಎಷ್ಟು ಸಾರೆ

ಶ್ರೀಕಂಠ ಮಗುವಿನಂತೆ ನನ್ನೊಡನೆ ಶಾರದೆಯ ಬಗ್ಗೆ ಹೃದಯ ಇರಿ ಯುವ ಮಾತನ್ನಾಡಿರಲಿಲ್ಲ! ಆದನ್ನೆಲ್ಲಾ ಎಂದಾದರೂ ನಾನು ಮರೆ ಯುವುದು ಸಾಧ್ಯವಿತ್ತೆ?

ಆಕೆ ಶಾರದೆಯಲ್ಲದೆ ಬೇರೆ ಯಾರಾದರೂ ಆಗಿದ್ದರೆ, ನಾನು

ಪ್ರಾಯಶಃ ಒಲಿದ ಹೆಣ್ಣೆನೆದುರು ಒಪ್ಪಿದ ಗಂಡಾಗುತ್ತಿದ್ದೆನೇನೋ. ಆದರೆ ಇಲ್ಲಿ ಶಾರದೆಯನ್ನು ನೋಡಿದಾಗ ಆಕೆಯ ಹಿಂದೆ ಶ್ರೀಕಂಠ ಕಾಣಿಸುತಿದ್ದ....ಅವರಿಬ್ಬರಿಂದಲೂ ದೂರವಾದ ಬೇಬಿ---ನಾಗರಾಜು ...ಆ ಬಳಿಕ ನನ್ನ ಜೀವನಕ್ಕೇ ಸಂಬಂಧಿಸಿದ ಸಂಭವಗಳು.

ಶಾರದೆಯ ನೋಟವನ್ನು ಇದಿರಿಸಲಿಚ್ಛಿಸದೆ ನಾನೆಂದೆ :

" ಬಂದದ್ಡಕ್ಕೆ ಕಾಫೀನಾದರು ಕೊಡಿ ಅತ್ತಿಗೆ, ಅತಿಥಿ ಸತ್ಕಾರ

ಮಾಡೋಕೂ ತಿಳೀದು ನಿಮಗೆ."

ಸಮಾಧಾನ - ಸಂದೇಹಗಳ ಚಿಹ್ನೆಯೊಂದು ಅವಳ ಮುಖದ

ಮೇಲೆ ಮೂಡಿತು. ವಿಚಾರ ಬದಲಿಸಬೇಕೆಂದು ನಾನು ಹಾಗೆ ಹೇಳಿದ್ದರೆ, ಮತ್ತೂ ಅದೇ ವಿಚಾರಕ್ಕೆ ನಮ್ಮನ್ನು ಆ ಮಾತು ತಂದು ಮುಟ್ಟಿಸಿತ್ತು.

" ನೀವು ಅಲ್ಪ ಸಂತೋಷಿ, ಬರೇ ಕಾಫೀಲೇ ತೃಪ್ತಿ ಪಟ್ಕೋ

ತೀರಿ."

" ಮನುಷ್ಯ ಜೀವಕ್ಕೆ ಇನ್ನೆಷ್ಟು ಬೇಕು ಹೇಳಿ?'

" ನೀವು ಮತ್ತು ನಿಮ್ಮ ಶ್ರೀಕಂಠಯ್ಯ - ಇಬ್ಬರು ಈಗೀಗ