ಪುಟ:Vimoochane.pdf/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ನಾನು ಅಳೋದಿಲ್ಲ ......ನಾನು ವಿಷಯ ಲಂಪಟಿ ಅಂತ .

ತಿಳಕೊಂಡಿದ್ದಿರಿ ಅಲ್ವೆ ? ......ನಾನು ಅಷ್ಟು ಕೆಟ್ಟವಳಲ್ಲ ಚಂದ್ರ .

ಶೇಖರ್....ನಿಮ್ಮ ಸ್ನೇಹಿತ ಶ‍್ರೀಕಂಠ ಗೆ ಹೇಳಿ ನಾನು ಕುಲಟೆ ಅಲ್ಲಾಂತ ಆದರೆ ಇಷ್ಟು ನಿಜ.ನನಗೂ ಅವರಿಗೂ ಹೊಂದಿಕೆ ಯಾಗೋದಿಲ್ಲ.......ಬೇರೆಯಾಗಿ ಹೋಗೋದಕ್ಕೂ ನಾನು ಸಿದ್ಧ ವಿಲ್ಲ .ಬಹುಶಃ; ಅಷ್ಟು ಧೈರ್ಯ ನನಗಿಲ್ಲವೋ ಏನೋ.... ಅದರೇ ಇನ್ನು ನನ್ನ ಹಾದಿಗೆ ನನಗೆ,ಅವರ ಹಾದಿ ಅವರಿಗೆ ."

"ಏನು ಹೇಳಬೇಕೋ ತೋಚೋದಿಲ್ಲ, ಅತ್ತಿಗೆ.".

"ಏನೂ ಹೇಳ‍್ಬೇಡಿ.ಅದೇ ಮೇಲು.ನಾನು ತಪ್ಮಾಡ್ತಿದೀ.

ನೀಂತ ನೀವೇನಾದರೂ ಹಿತವಚನ ಹೇಳೋಕೆ ಬಂದರೆ ಅದರಿಂದ .

ಯಾರಿಗೂ ಏನು ಪ್ರಯೋಜನವಾಗೋದಿಲ್ಲ. ನನ್ನ ಮನಸ್ಸು ಕಹಿಯಾಗುತ್ತೆ ಅಷ್ಟೆ."

ಆಕೆ ಕರವಸ್ತ್ರವೆತ್ತಿಕೊಂಡು ಕಣ್ಣೊರೆಸಿಕೊಳ್ಳುತಿದ್ದಂತೆ ನಾಗ.

ರಾಜು ಓಡುತ್ತಾ ಬಂದ.

"ಮಾಮಾ,ಮಾಮಾ......ಎಲ್ಲೋಗಿದ್ದೆ? ಯಾಕ್ಬರ್ಲಿಲ್ಲ?.

ನಂಗ್ಬೇಜಾರಾಗ್ಬಿಟ್ಟಿತ್ತು ಮಾಮಾ.....ನೀನೂ ಅಣ್ಣನ್ಜತೇಲಿ ಬೊಂಬಾಯ್ಗೆ ಹೋದಿಯೇನೋಂತಿದ್ದೆ."

"ಇಲ್ಲ ರಾಜಾ, ನಿನ್ನ ಬಿಟ್ಬುಟ್ಟು ಹೋಗ್ತೀನಾ?".

"ನನ್ನ ಬಿಟ್ಬುಟ್ಟು ನೀನು ಯಾವತ್ತೂ ಹೋಗಲ್ಲ ಅಲ್ವಾ?" "ಹೋಗಲ್ಲ ರಾಜಾ...." ಹುಡುಗ ತಾಯಿಯ ಕಡೆ ತಿರುಗಿ ಹೇಳಿದ:

"ಅಮ್ಮಾ, ಮಾಮಾ ಒಳ್ಳೆಯವನು ಕಣೇ....ಅಮ್ಮಾ...".

"ಅದೇನು ಮರುಳುಮಾಡಿದೀರೋ ಮಗೂನ," ಎಂದಳು .

ಶಾರದೆ ನಗುತ್ತ,"ಹೋಗಪ್ಪ ರಾಜು,ಕಾಫಿ ತಗೋಂಬಾಂತ ಹೇಳು ಆಚಾರ್ರಿಗೆ"

ಮಗು ಹೋಗುತ್ತಲೇ ಶಾರದೆ ಎಂದಳು:.

"ಚಂದ್ರಶೇಖರ್,ನೀವು ಯಾಕೆ ಮದುವೆ ಆಗ್ಬಾರ್ದು? .