ಪುಟ:Vimoochane.pdf/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಗ್ತೀರೇನೋ ಹೀಗೆ ಕೇಳ್ದೇಂತಾ ?"

'ಯಾಕೆ ? ಮದುವೆ ಅದೋರು ಅನುಭವಿಸ್ತಿರೋ ಸುಖ

ನೋಡಿದ್ದು ಸಾಲ್ದೇನು?"

ಆಕೆಯ ಮುಖ ಸ್ವಲ್ಪ ಬಾಡಿತು.

...ದೊಡ್ಡ ಗಂಡಾಂತರದಿಂದ ಪಾರಾಗಿದ್ದೆ. ಆ ಬಳಿಕ ಶಾರದೆ

ನನ್ನೊಡನೆ ಮಾನವಳಾಗಿ ಮಾತನಾಡಿದಳು. ಕಾಫಿ ಬಂತು--- ಕುಡಿದೆವು. ತಾಯಿ, ಮಗನನ್ನು ಮುದ್ದಾಡಿದಳು. ಆದರೆ ನಾಗ ರಾಜನಿಗೆ ಅಂಥ ಮುದ್ದಾಟದ ಅಭ್ಯಾಸವಿರಲಿಲ್ಲ. ಆತ ತಾಯಿಯಿಂದ ತಪ್ಪಿಸಿಕೊಂಡು ನನ್ನೆಡೆಗೆ ಬಂದ.

"ಮೇಷ್ಟ್ರು ಬರ್ಲಿಲ್ವಾ ರಾಜು?"

"ಬರ್ತಾರೆ ಮಾಮ, ಆರು ಘಂಟೆಗೆ."

ಶಾರದೆಯತ್ತ ತಿರುಗಿ ಹೇಳಿದೆ:

"ರಾಜನ್ನ ಇನ್ನು ಸ್ಕೂಲ್ಗೆ ಸೇರಿಸ್ಬೇಕು ಅತ್ತಿಗೆ."

"ಹೌದು, ಸೇರಿಸ್ಬೇಕು....."

ಮತ್ತೆ ಸ್ವಲ್ಪ ಹೊತ್ತಿನಲ್ಲೆ ಹೊರಬಿದ್ದು, ಹಾದಿಯುದ್ದಕ್ಕೂ

ನಡೆದುಹೋದೆ, ನೆನಪುಗಳು ಬೆಂಗಾವಲಿಗೆ ನಿಂತುವು.

ಆ ದಿನ ಶಾರದೆಯನ್ನು ನಾನು "ಅತ್ತಿಗೆ" ಎಂದು ಸಂಬೋಧಿ

ಸಿದ್ದೆ. ಅದು, ಆ ಹೆಸರಿನ ಢಾಲು ಹಿಡಿದು ಆ ಹೆಣ್ಣನ್ನು ದೂರ ವಿಡಲು ನಾನುಮಾಡಿದ ಸಿದ್ಧತೆ....ಆದರೆ ಆಕೆ ಮೇಲೇರಿ ಬರಲಿಲ್ಲ. ಆ 'ಅತ್ತಿಗೆ' ಪದದಿಂದ ಮಾತ್ರ, ಕೊಂಕುತನ ಹೊರಟು ಹೋಯಿತು...ಇನ್ನು ನಾನು ಆಕೆಯನ್ನು ಅತ್ತಿಗೆಯೆಂದೇ ಕರೆಯ ಬೇಕು.

ಹದಿನೈದು ವರ್ಷಗಳಿಗೆ ಹಿಂದೆಯೊಂದು ಜೀವವನ್ನು ನಾನು

"ಅತ್ತಿಗೆ" ಎಂದು ಕರೆದ್ದಿದ್ದೆ. ಆಕೆ ಶೀಲ. ಶೀಲ-ಅಮೀರರ ಆ ಬಾಳ್ವೆಯಲ್ಲಿ ಎಷ್ಟೊಂದು ಅನುನಯವಿತ್ತು--ಅನ್ಯೋನ್ಯ ಅನುರಾಗ ವಿತ್ತು! ಇಷ್ಟು ವರ್ಷಗಳಾದ ಮೇಲೆಯೂ ಅವರನ್ನು ಸ್ಮರಿಸಿ