ಪುಟ:Vimoochane.pdf/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊಂಡಾಗ, ಆಗಿನ ಅವರ ಚಿತ್ರಗಳೇ ಕಣ್ಣೆದುರು ಕಟ್ಟುತಿದ್ದುವು. ಉಲ್ಲಾಸ ಜೀವಿಗಳಾದ ಆ ಎಳೆಯರ ಬದಲು, ಹದಿನೈದು ವರ್ಷಗಳ ಅನಂತರದ ವಯಸ್ಕ್ರರಾಗಿ ಅವರನ್ನು ಚಿತ್ರಿಸಿಕೊಳ್ಳುವುದು ನನ್ನಿಂದ

ಸಾದ್ಯವಿರಲಿಲ್ಲ.

ಆದರೆ ದಿನಗಳುರುಳುತಿದ್ದುವು. ಹಣೆಯ ಮುಂಭಾಗದಲ್ಲಿ

ಕೂದಲು ಸರಿಧಿ ಕಂಡೂ ಕಾಣದಂತೆ ಹಿಂದಕ್ಕೆ ಸರಿಯುತಿತ್ತು. ನೆತ್ತಿಯ ನಡುವಿನಲ್ಲೆ ತನ್ನ ಇರುವಿಕೆಯನ್ನು ಸಂಭ್ರಮದಿಂದ ಸಾರಿ ಹೇಳಿದ ನಾಲ್ಕಾರು ಬಿಳಿ ಕೂದಲು.

....ಕಾಲುಗಳು ಎತ್ತಲೋ ನನ್ನುನ್ನು ಒಯ್ದಿದ್ದುವು. ಮಸಕು

ಮಸಕಾಗಿ ಯಾವುದೋ ನೆನಪಾಗತೊಡಗಿತು ನನಗೆ. ಎಲ್ಲಿಗೆ ಬಂದಿದ್ದೆ ನಾನು? ಎಲ್ಲಿಗೆ?...ಆ ಕಾಲು ದಾರಿ, ಓಣೆ, ಮೂಲೇ ಮನೆ.. ಹುಡುಗನಾಗಿದ್ದಾಗ ಅಲ್ಲಿಗೊಮ್ಮೆ ನಾನು ಬಂದಿದ್ದೆನಲ್ಲವೆ? ಅದು ನಾರಾಯಣ ಮನೆ-ನಾಣಿಯ ಮನೆ! ಆದರೆ ಅದು ಎಷ್ಟೊಂದು ವರ್ಷಗಳ ಹಿಂದಿನ ಮಾತು! ಈಗ ಆತ ಅಲ್ಲಿದಾನೋ ಇಲ್ಲವೋ...

ಶ್ರೀಕಂಠ, ನಾಣಿಯನ್ನು ಕುರಿತು ಆಡಿದ ಕಹಿಮಾತುಗಳು ನೆನ

ಪಾದುವು...ಆಂಫ ವಿದ್ಯಾವಂತ ಬಡಪಾಯಿಗಳಿಂದಲೇ ಅಪಾಯ...

ಅವನನ್ನು ನೋಡಿ ಮಾತನಾಡಬೇಕೆಂಬ ಆಸೆ ಉತ್ಪನ್

ನ ವಾಯಿತು. ಆ ಜಾಗಿಲ ಮುಂದೆ ನಿಂತು ಕರೆವೆ.

"ನಾರಾಯಣ ! ನಾರಾಯಣ!"

ಸ್ವಲ್ಪ ತೆರೆಯಿತು ಮುಚ್ಚಿದ್ದ ಬಾಗಿಲು. ಸೊರಗಿದ ಹೆಣ್ಣು

ಮುಖವೊಂದು ಹೊರಗಿಣಿಕಿ ಹೇಳಿತು:

"ಅವರಿನ್ನೂ ಬಂದಿಲ್ಲ....ಇನ್ನೇನು ಬರೋ ಹೊತ್ತು..."

ನಾನು ಹಿಂತಿರುಗಿದೆ. ಆದರೆ ಸ್ವರ ನನ್ನನ್ನು ಹಿಂಬಾಲಿಸಿ ಕೇಳಿತು.

"ಯಾರು ಬಂದಿದ್ದರೊಂತ ಹೇಳ್ಲಿ.

"ಪರವಾಗಿಲ್ಲಮ್ಮ.....ನಾನೇ. ಆಮೇಲೆ ಬರ್ತಿನಿ."

.

.....ನಾರಾಯಣನ ತಾಯಿ ಕಾಣಿಸಿರಲಿಲ್ಲ.....ಈಕೆ ಸೊಸೆ