ಪುಟ:Vimoochane.pdf/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇರಬಹುದು ಹಾಗಾದರೆ-ನಾಣಿಯ ಹೆಂಡತಿ.

ನಾನು ಆ ಓಣಿಯಿ೦ದ ತಿರುಗಿಕೊಳ್ಳತಿದ್ದಾಗಲೇ ನಾರಾಯಣ

ಎದುರು ಬ೦ದ.

"ನಾಣಿ!"

"ಓ! ಬಾರಯ್ಯ ಚಂದ್ರು.........."

ಆವನ ಕಣ್ಣುಗಳು ಕುತೂಹಲದಿ೦ದ ನನ್ನನ್ನು ನೋಡುತಿದ್ದವು

ತುಟಗಳ ಮೇಲೆ ಮುಗುಳು ನಗು ಮೂಡಿತು

ನಾನು ಅವನನ್ನು ಹೆಂಬಾಲಿಸಿದೆ.

"ನಾಣಿ.....ಆ ದಿವಸ ನೀನು ಹೇಳದೆ; ತಾಯಿ ಮಾಡಿದು

ಪ್ಪಿಟ್ಟು ತಿನ್ನೊಕೆ ಬಾ ಅಂದಿದ್ದೆ."

"ಓ! ನಿನ್ನ ಸ್ಮರಣಶಕ್ತಿ ಅದ್ಭುತವಾದ್ದು ಚಂದ್ರು. ಅದಕ್ಕೇ

ಕ್ಲಾಸಲ್ಲಿ ಫಸ್ಟ್ ಬರ್ತಿದ್ದೆ. ಆದರೆ-"

ಮನೆ ಸೇರಿದೆವು. "ಕಮಲಾ" ಎಂದು ಕರೆದ ನಾಣಿ.

ಬಾಗಿಲು ತೆರೆಯಿತು.ಆಕೆ ಅವಸರ ಅವಸರವಾಗಿ ದೀಪ ಹಚ್ಚಿದಳು ಗೋಡೆಗೆ ತಗಲಿಸುವ ಲ್ಯ್ಂಪು ಹೊರಬಂತು.

"ಬಾ ಚಂದ್ರು-ಕೂತ್ಕೊ........ಕುರ್ಚಿ ಇದೆ ಕೂತ್ಕೊ"

ಅಲಿ ಒಂದೇ ಕುರ್ಚಿ ಇತ್ತ-ಬಡಕಲಾದೊಂದು ಮೇಜು.

ನಾನು ಹಾಸಿದ್ದ ಮಾಸಿದ್ದ ಚಾಪೆಯ ಮೇಲೆ ಕುಳಿತೆ.

"ಕಮಲಾ....ಈತ ಚಂದ್ರಶೇಖರಾಂತ-ಬಾಲ್ಯದ ಸಹಪಾಠಿ."

"ನಮಸ್ಥೆ"ಎಂದಳು ಆಕೆ.

"ಇವರು ಯಾರೂಂತ ಗೊತ್ತಾಯ್ತೇನಪಾ?"

ಊಹಿಸ್ಕೊಂಡಿದೀನಿ."

"ಸರಿ.......ಕಮಲಾ, ಒಂದಿಷ್ಟು ಉಪಿಟ್ಟು ಕಾಫಿ ಮಾ

ಡ್ತೀಯಾ?"

ಉತ್ತರ ನೇರವಾಗಿ ಬರಲಿಲ್ಲ .ಆಕೆ ಕರೆದಳು :

"ಇಲ್ಭನಿ..."

"ಪರವಾಗಿಲ್ಲ ಕಮ್ಲು-ಚಂದ್ರು ಎದುರಲ್ಲಿ ಹೇಳ್ಭಹುದು.

"