ಪುಟ:Vimoochane.pdf/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಅದಾದ್ಮೇಲೆ ಈ ಮನೇಲಿ ಎರಡು ಸಾವುಗಳಾದುವು. ಒಂದು

ತಾಯೀದು ಮುತ್ತೈದೆ ಸಾವು........ಆ ಮೇಲೆ ತಂದೇದು.

"ತಾಯಿ ತಂದೆಯರ ಸಾವಿನ ಬಗ್ಗ ಅಷ್ಟೊಂದು ಸರಳವಾಗಿ

ಮಾತನಾಡುತ್ತಿದ್ದ ಅವನ ರೀತಿ ನನ್ನನ್ನು ಚಕಿತಗೊಳಿಸಿತು.

"ನನಗೆ ಗೊತ್ತೇ ಇರಲಿಲ್ಲ, "ಎಂದೆ. ನನ್ನ ಸ್ವರ ಎಲ್ಲೋ

ಒಳಗಿಂದ, ನನಗ ಮಾತ್ರ ಕೇಳಿಸುವಹಾಗೆ,ಕೀಣವಾಗಿ ಹೊರಡುತಿತ್ತು.

"ಎನು ಮಹಾ........ಇರಲಿ ಬಿಡು---ತಂದೆಯ ಪಾಲಿಗಂತೊ

ಸಾವು ವಿಮೋಚ್ನಯೇ ಆಗಿತ್ತಪ್ಪ. ಆ ಗೂರಲು ರೋಗ ಆಷ್ಟೊಂದು ಹಿಂಸೆ ಕೊಡುತ್ತಿತ್ತು ಅವರಿಗೆ ಇನ್ನು ತಾಯಿ ವಿಷಯ....ಬದು ಕಿದ್ದಾಗಲೆಲ್ಲ ಬಡತನದ ಗೋಳು ಕಂಡೋಳು, ಮಗಳನ್ನೊ ಮೊಮ್ಮ ಗುವನ್ನೊ ಕಣ್ಣೆದುರಲ್ಲೇ ಕಳೆದು ಕೊಂಡೋಳು ಸಾಯೋ ಕಾಲಕ್ಕೆ ಹಾಯಾಗಿದ್ಲು.ತಾನು ಮುತ್ತ್ಯದೆಯೊಗಿಯೋ ಸಾಯ್ತಿಧೀನೀಂತ ಅವಳಿಗೆ ಎಷ್ಟೋಂದು ಸಮಾಧಾನವಾಗಿತ್ತು ಗೊತ್ತೆ?........"

"ಹಳೇ ಕಾಲ್ದೋರು ಹಾಗೇ ನಾಣಿ."

"ಅದು ಆ ತಲೆಮಾರಿನ ಕತೆ....ಇನ್ನು ಈ ತಲೆಮಾರಿನ್ಪು.

ತಂದೆ ಸತ್ತು ಈ ಸೆಪ್ಥಂಬರ್‌ಗೆ ಮೂರು ವರ್ಷ್ ಆಯ್ತು. ಅದಕ್ಕೆ ಸ್ವಲ್ಪ ತಿಂಗಳ ಮುಂಚೆ ನನ್ನ ಮದುವೆಯಾಯ್ತು."

"................"

"ವರದಕ್ಷಿಣೆ ಇಲ್ಲದೆ ಮದುವೆ....ಒಲಿದು ಬಂದ ಹೆಣ್ಣು....ಆ

ದಿನ ನಿಯೋಗ ಬಂದಾಗ ನನ್ನ ಪಕ್ದಲ್ಲೇ ಕೊನೆಲಿ ಒಬ್ಬ ನಿಂತಿದ್ದ.... ನೆನಪಿದೆಯೊ? ವಿಶ‍್ವನಾಥ ಅಂತ.ಅವನ್ತಂಗಿ ಕಮಲೂ. ಯೂನಿ ಯನ್ ಗಲಾಟೇಲಿ ಅವನ ಪರಿಚಯ ಆಯ್ತು ....ಆ ಮೇಲೇ ಕಮಲೂ ಪರಿಚಯ....ನಮ್ಜನವೇಂತಿತಟ್ಕೊ.ಹಾಗಾಗಿ ತಂದೆ ಸುಮ್ಮಗಿದ್ದ.... ಅದಕ್ಕಿಂತಲೂ ಮುಖ‍್ಯವಾಗಿ ಅವನ ಅರೈಕೆಗೆ ಸೊಸೆ ಬೇಕಾಗಿದ್ಲು."

"ಅಂತೂ ನೆಮ್ಮದಿಯಾಗಿದೀಯಾ ಆನ್ನು."

"ನೋಧ್ತಾ ಇದೀಯಲ್ಲ...."

ಮಾತಿನ ಒಂದು ಪುಟ ಮುಗಿದಿತ್ತು; ಇನ್ನು ಇನ್ನೊಂಧೂ ಪುಟ.