ಪುಟ:Vimoochane.pdf/೩೦೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ನನ್ನ ಕಣ್ಣುಗಳು ಆ ದೀಪದ ಬೆಳಕಿನಲ್ಲಿ ಗೋಡೆಯ ಮೇಲೆಲ್ಲ

ಓಡಾಡಿದುವು.

"ಏನ್ನ ನೋಡ್ತೀಯಪ್ಪಾ? ದೇವರು ದಿಂಡರನ್ನೆಲ್ಲಾ ಊಟದ

ಮನೆಗೆ ವರ್ಗಾಯಿಸಿದೀನಿ. ನಮ್ಮ ಪೀಳಿಗೆಯವರ ದೈವ ಭಕ್ತಿ ವಿಷಯ ಗೊತ್ತೇ ಇದೆಯೆಲ್ಲ! ಕಮಲೂನೂ ಅಷ್ಟೆ. ದಿನವೂ ದೇವರಿಗಿಷ್ಟು ದೀಪ ಹಚ್ಚಿಡ್ತಾಳೆ. ಆಲ್ಲಿಗಾಯ್ತು........."

ಕಮಲಾ ನಮ್ಮತ್ತ ಇಣಿಕಿ ನೋಡಿ ಹೇಳಿದಳು:

"ಅವರು ಮನೆಯವರ್ನ ಕರ್ಕೊಂಡುಬರೋಕೆ ಹೇಳೀಂದ್ರೆ."

ಹುಸಿ ಮುನಿಸಿನ ಧ್ವನಿಯಲ್ಲಿ ನಾಣಿ ಉತ್ತರವಿತ್ತ:

"ನೀನೇ ಕೇಳು......ಒಬ್ಳಿಗೇ ಬೇಸರವಾಗಿದೇಂತ ಹೇಳು.

ನಿನ್ಗೆ ಸಹಾಯಾವಾಗ್ಲೀಂತಾದರೂ ಚಂದ್ರು ಮದುವೆ ಮಾಡ್ಕೋ ತಾನೆ."

ಆಕೆ ಹಿತವಾಗಿ ನಕ್ಕಳು........

ಆ ವಾತಾವರಣ ಆಹ್ಲಾದಕರವಾಗಿತ್ತು. ಜೀವನಕ್ಕೆ ಆ ಒಂದು

ಮುಖವೂ ಇದೆ ಅಲ್ಲವೆ?

......ನಾನು ಹೊರಡಲೆಂದು ಎದ್ದು ನಿಂತೆ.

"ಊಟಕ್ಕೇಳು ನಾಣಿ. ಆ ತಾಯೀನ ಕಾಯಿಸ್ಬೇಡ........"

"ಆಗಾಗ್ಗೆ ಬರ್ತಾ ಇರು ಚಂದ್ರು."

"ಹೂನಪ್ಪಾ........ನಾಣಿ,ಶ್ರೀಕಂಠನ್ನ ನೋಡೋಕೆ ಬರ್ತೀ

ಯೇನು?"

"ಖಂಡಿತವಾಗ್ಲೂ ಬರ್ತೀನಿ. ಇನ್ನೊಂದು ನಿಯೋಗ ಯಾವ

ತ್ತಾದರೂ ಬರೋದು ತಪ್ಪಿದ್ದಲ್ಲವಲ್ಲಾ!"

ಇನ್ನೊಂದು ನಿಯೋಗ.......!

ಆ ದಿನ ಇತರರೊಡನೆ ನಾರಾಯಣನನ್ನೂ ಲಾಕಪ್ಪಿನಲ್ಲಿರಿ

ಸಿದ್ದರು. ಆ ವಿಷಯ ಬಂದಾಗಲೆಲ್ಲ "ನಾನು ಲಾಕಪ್ನಲ್ಲಿದ್ದಾಗ" ಎಂದು ಅಭಿಮಾನದಿಂದಲೆ ನಾಣಿ ಮಾತನಾಡುತಿದ್ದ. ನಾನು ಕೂಡಾ ಹಾಗೆ ಹೇಳುವುದು ಸಾಧ್ಯವಿತ್ತೆ?ಲಾಕಪ್ಪಿನಲ್ಲೇನೋ ನಾನಿದ್ದೆ-