ಪುಟ:Vimoochane.pdf/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ನನಗೆಲ್ಲಯ್ಯಾ ಗೊತ್ತು ಅವನ ಖಾಸಗಿ ಜೀವನ ? ಇದೆಲ್ಲಾ ಮಾಹಿತಿ ತರೋರು ನಮ್ಮ ಗೂಢಾಚಾರರು."

ಸ್ವಲ್ಪ ನೊಂದ ಧ್ವನಿಯಲ್ಲಿ, " ಈ ಹ್ಯಾಂಡ್ ಬಿಲ್ಲಿಗೆ ಅರ್ಥವಿಲ್ಲ ಕಣೋ," ಎಂದೆ.

" ಯಾಕೆ? ನಾಣೀ ವಿಷಯ ಬಂದಿದೆ ಅಂತ ದುಃಖವೋ ? "

"ಹಾಗಲ್ಲ ಕಂಠಿ. ಯಾರೇ ಆಗಲಿ ಈ ರೀತೀನೂ ಬರೀ ಬಹುದೆ ? "

"ಇದೆಲ್ಲಾ ಯುದ್ಧ ಕಣೋ . ಆವರೇ ಹೇಳೋ ಹಾಗೆ ವರ್ಗ ಸಮರ . ಈ ಸಮರದಲ್ಲಿ ಉಪಯೋಗಿಸ್ದೇ ಇರೋ ಅಸ್ಥ್ರವೇ ಇಲ್ಲ."

"ನಾಳೆ ದಿವಸ ಅವರೂ ಹಾಗೇ ಬರೆದರೆ ? ನಿನ್ನ ವ್ಯೆಯಕ್ತಿಕ ಜೀವನಾನ ಬಯಲಿಗೆಳೆದರೆ ?"

"ಹುಂ. ನೊಡ್ಕೊಳ್ಳೋನಣ ಆಗ ."

ನಾನು ಮೌನ ತಳೆದೆ. ಸ್ವಲ್ಪ ಹೊತ್ತಿನಲ್ಲಿ ಶ್ರಿಕಂಠನೇ ಹೇಳಿದ :

"ಚಂದ್ರೂ, ಒಂದ್ವಿಷಯ ಹೇಳ್ತಿನೀ. ಒರಟಾಗಿಯೇ ಹೇಳ್ತೀನಿ. ಈ ಗಲಾಟೆ ಮುಗಿಯೋ ವರೆಗೂ ನೀನು ತಲೆಹರಟೆ ಮಾಡ್ಬಾರ್ದು ."

ವ್ಯಕ್ತಿತ್ವವನ್ನೂ ಕಳೆದುಕೊಂಡು,ಎಲ್ಲವನ್ನೂ ಕಳೆದುಕೊಂಡು, ತೇಜೋಹೀನ ಮಾನವ ನಾನೂ. ಬರಿಯ ನೆರಳು. ಕಾಲಗತಿಗೆ ಅನು ಸಾರವಗಿ ಅದು ಕಿರಿದಾಗಬೆಕು,ಹಿರಿದಾಗಬೇಕು. ನನಗೆ ಅದರ ಮೇಲೆ ಪ್ರಭುತ್ವವಿಲ್ಲ. ನನ್ನ ಸ್ವಂತದ್ವೆನ್ನುವಂಥಾದ್ದು ಏನೂ ಇರಲ್ಲಿಲ.

ಆ ಪತ್ರಿಕದ್ಯೊಗಿಯೂ ಅಷ್ಟೆ. ಅವನ ಸ್ವನ್ಯತದ್ವೆನ್ನುವಂ ಥಾದ್ದು ಎನಿತ್ತು?

ಆ ದಿನ ಅವನು ಬಂದಾಗ ಮಾತು ತೆಗೆದೆ:

"ಕರಪತ್ರವನ್ನು ಸೊಗಸಾಗಿ ಬರೀತೀರಿ ಚೆಲುವಯ್ಯ ಎ.೧."

"ನಿಮಗೆ ಮೆಚ್ಚಿಗೆಯಾಯ್ತು ? ಥ್ಯಾಂಕ್ಸ್."

ಆತನಿಗೊಂದು ಸಿಗರೇಟು ಕೊಟ್ಟೆ.

"ಆ ಹಾ !ಎಂಥಾ ಶೈಲಿ ನಿಮ್ಮದು!"