ಪುಟ:Vimoochane.pdf/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ತೆಳು ದೇಹವೂ ಹೊಗಳಿಕೆಗೆ ಬಲಿಯಾಗಿ ಊದಿಕೊಳ್ಳು ತಿದ್ಡಂತೆ ಕಂಡಿತು. ಅವನ ಗಂಟಲಿನಿಂದ ಮಾತು ಹೊರಡುವುದಕ್ಕೆ ಮುಂಚೆ ನಾನೇ ಮುಂದುವರಿಸಿದೆ.

"ಎಲ್ಲ ಪತ್ರಿಕೋದ್ಯೋಗಿಗಳೂ ಹೀಗೆಯೇ ಇದಾರಾ ಚೆಲುವಯ್ಯ?"

"ಉಂಟೆ ಎಲ್ಲಾದರೂ ? ಇಂಥ ಶೈಲಿ ಬೇರೆ ಯರಿಗಿದೆ?"

"ಶೈಲಿಯಲ್ಲ, ನೀತಿ. ಏನಾದರೂ ಬರ್ಕೊಡೀಂತಂದ್ರೆ ನಿಮ್ಮ ಹಾಗೆ ಎಲ್ಲಾರೂ ಸಹಾಯವಾಗ್ತಾರಾ ?"

"ಇಲ್ಲ ಮಿಸ್ಟರ್ ಇವರೆ. ಅದು ಸಾಧ್ಯವಿಲ್ಲ... ನಮ್ಮಲ್ಲೂ ತಲೆಹರಟೆಯವರಿದ್ದಾರೆ. ತತ್ವ-ವ್ಯಕ್ತಿತ್ವ ಅಂತ ಬುರುಡೆ ಬಿಡೋರು...."

"ಐ ಸೀ"

"ನೀವು ' ವಿಶಾಲ ಭೂಮಿ' ಓದ್ತೀರಿ ತಾನೆ? ಅದರಲ್ಲಿ ' ಕೈ ಕೆಸರು ಬಾಯಿ ಮೊಸರು' ಕಾಲಂ ಬರೆಯೋನು ನಾನೇ."

"ಸಮಂಜಸವಾದ ಶಿರೋನಾಮೆ!"

ಆತನನ್ನು ಇನ್ನೂ ಒಂದಷ್ಟು ಕುಣಿಸಬೇಕೆಂದುಕೊಂಡೆ.

"ಚೆಲುವಯ್ಯ, ಆ ಯೂನಿಯನ್ ನವರು ಬಂದು ಪಾದ ಹಿಡ್ಕೊಂಡು ಬಡ್ಕೊಂಡರೂಂತಿಟ್ಕೊಳ್ಳಿ. ಫ಼ೀಸ್ನ ಪಾದ ಕಾಣ್ಕೆಯಾಗಿ ಅವರೂ ಒಪ್ಪಿಸಿದರೆ, ಕನಿಕರ ಪಟ್ಕೊಂಡು ನೀವೊಂದು ಕರ ಪತ್ರ ಅವರಿಗಾಗಿ ಬರ್ಕೊಡಲ್ವೆ?

"ನೀವು ತಾತ್ವಿಕವಾಗಿ ಕೇಳೋದಾದರೆ,--ಯಾಕಾಗ್ಬಾರ್ದು? ಆದರೆ, ಈ ಸಂದರ್ಭದಲ್ಲಿ ನಾನು ಆ ಕೆಲಸ ಮಾಡೋಕಾಗಲ್ಲ. ವಾದಿ- ಪ್ರತಿವಾದಿಗಳಿಬ್ಬರಿಂದಾನೂ ದುಡ್ದು ಕೀಳೋದು ಧರ್ಮ ವಲ್ಲ."

ಧರ್ಮ ಮತ್ತು ಚೆಲುವಯ್ಯ; ನ್ಯಾಯ ಮತ್ತು ಚೆಲುವಯ್ಯ!

ಆತ ತನ್ನ ಕೈಚೀಲದಿಂದ ಬೇರೆ ಎರಡು ಕರಪತ್ರಗಳನ್ನು ಹೊರ ತೆಗೆದ.