ಪುಟ:Vimoochane.pdf/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅದು ಕಲಹ ......ರೋದನಗಳ ಕುರಕ್ಷೇತ್ರವೇನೋ ಆಗಿರಲಿಲ್ಲ. ಅಲ್ಲಿ ಒಂದು ರೀತಿಯ ಮೌನ ನೆಲೆಸಿರುತಿತ್ತು. ಅತಿಥಿಗಳು ಮನೆಗೆ ಬಂದರೆ ಶಾರದೆ ಮಿಸೆಸ್ ಶ್ರೀಕಂಠಯ್ಯನಾಗುವಳು......ಉಳಿದ ಹೊತ್ತಿನಲ್ಲಿ ಆಕೆ ಏಕಾಂತ ಪ್ರಿಯೆ, ಮಿಸ್ ಶಾರದೆ....

ಈ ಗೊಂದಲದ ನಡುವೆ ಆ ಹುಡುಗನೋ? ಶಾಲೆಗೆ ಹೋಗ

ತೊಡಗಿದ್ದ ನಾಗರಾಜ, ತನ್ನ ಓರಗೆಯವರ ಸ್ನೇಹ ಸಂಪಾದನೆಯಿಂದ ತೃಪ್ತನಾಗುತಿದ್ದ. ಆತ ತನ್ನೊಡನೆ ಮನೆಗೆ ಕರೆದುಕೊಂಡು ಬರುತ್ತಿದ್ದ ಬಡ ಹುಡುಗನನೊಬ್ಬನಿದ್ದ--ಅವನ ಸಹಪಾಠಿ.ಮನೆಯ ಭವ್ಯತೆ ಯನ್ನು ಕಂಡಾಗ ಆ ಹುಡುಗನ ದೃಷ್ಟಿ ಬೆರಗುನೋಟ ಬೀರುತಿತ್ತು, ನಾಗರಾಜನ ಆಟದ ಸಾಮಾನುಗಳನ್ನು ನೋಡಿದಾಗ ಅವನ ಮುಖ ಅರಳುತಿತ್ತು: ತಿಂಡಿವಾಸನೆ ಬಂದಾಗ ಅವನ ನಾಲಿಗೆಯಲ್ಲಿ ನೀ ರೂರಿತ್ತು.

ಚಿತ್ರ ಸಂಗ್ರಾಹಾಲಯದೊಂದು ಕೃತಿಯನ್ನು ನೋಡುವಂತೆ

ನಾನು ಅವನನ್ನು ದಿಟ್ಟಸುತ್ತದ್ದೆ.

ಆ ಹುಡುಗ ಕತ್ತಲಾದಾಗ ಮನೆಗೆ ಹೊರಡುತಿದ್ದ.ನಾಗರಾಜ

ನನ್ನೂ ಆಲೋಕವನ್ನೂ ಬೀಳ್ಕೊಡಬೇಕಾದ ಪ್ರಮೇಯ ಬಂದಾಗ ಆ ಹುಡುಗನ ಕಂಠ ಗದ್ಗದಿತವಾಗುತಿತ್ತು.

ಅವನನ್ನು ಹತ್ತಿರಕ್ಕೆ ಕರೆದು,ಅವನು ಯಾರೆಂದು ಕೇಳುವ

ಆಸೆಯಾಗುತಿತ್ತು ನನಗೆ. ಆದರೆ ಮರುಕ್ಶಣವೆ ಏಕಾಂಗಿಯಾದ ನನ್ನ ದುರವಸ್ಥೆಯನ್ನು ಕಂಡು ಮನಸ್ಸು ನಗುತಿತ್ತು.

ಒಂದು ಸಂಜೆ ಶಾರದೆ ನಾಗರಾಜನಿಗೆ ಎಚ್ಚರಿಕೆ ಕೊಡುತಿದ್ದಳು.

"ಹುಷಾರಾಗಿರಬೇಕಪ್ಪ ರಾಜು. ನಿನ್ನ ಸ್ನೇಹಿತ-ಆ ಬಡ

ಮುಂಡೇದು-ಏನಾದರು ಕದ್ದು ಗಿದ್ದಾನು!"

ಕಂಟ ಬಿರಿಯುವ ಹಾಗೆ ನಾಗರಾಜ ಕೂಗಾಡಿದ:

"ನನ್ನ ಸ್ನೆಹಿತನ್ನ ಹಾಗಂತೀಯಾ! ನಾಚ್ಕೆ ಆಗ್ಬೇಕಮ್ಮ,

ನಿಂಗೆ

"ಏನಂದೆ?"