ಪುಟ:Vimoochane.pdf/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೋಯಿತು.ಆಂತಿಮ ತೀರ್ಮಾನವಾಗಬೇಕೆಂದು ಎಲ್ಲ ಮಿಲ್ಲುಗಳ ಕೆಲಸಗಾರರ ಸಭೆ ಜರಗಿಸಲು ಏರ್ಪಾಟಾಯಿತು.

ಮನೆಯಲ್ಲಿ ಶ್ರೀಕ೦ಠ ಸೂಕ್ಸ್ಶ್ಮವಾಗಿ ನನ್ನನ್ನೆ ನೋಡುತ್ತ

ಹೇಳಿದ:

"ಆ ದಿವಸ ನಿನ್ನ ವಿಚಾರವಾಗಿ ಐ.ಜಿ.ಪಿ. ಹೇಳಿದ್ದೆಲ್ಲಾ

ಸುಳ್ಳೇನೋ ಅ೦ತ ಅನುಮಾನವಾಗ್ತಿದೆ."

"ಏನು?"

"ಏನಾದರು ಸಾಹಸದ ಕೆಲಸ ಮಾಡೋದು ನಿನ್ನಿ೦ದ

ನಿಜವಾಗಿಯೂ ಸಾಧ್ಯವಾ?"

ನಾನು ನಗತೊಡಗಿದೆ.

"ಏನ್ಕ೦ಠಿ ? ನಾನೊಬ್ಬ ಹಾಲಿವುಡ್ ಗ್ಯಾ೦ಗ್ಸ್ಟ್ರರ್ ಅ೦ತ

ತಿಳಕೊ೦ಡಿದ್ದೀಯೇನು?

"ಹೇಳಲು ಒ೦ದು ಕ್ಷಣ ಆತ ಅನುಮಾನಿಸಿದ೦ತೆ ತೋರಿತು

.

"ಇವತ್ತು ಸಾಯ೦ಕಾಲ ರಾತ್ರಿಯೆಲ್ಲಾ ಅವರ ಸಭೆ ಜರಗುತ್ತೆ.

ಅದಾದ್ಮೇಲೆ ಮೂರು ನಾಲ್ಕು ಜನರು ಮನೆಗೆ ಹೋಗ್ಬಾರ್ದು-ಅಷ್ಟೆ."

"ಯಾರು ಯಾರು?"

"ಅವರು ಲೀಡರು ಮುನಿಸ್ವಾಮಪ್ಪ , ಡೊಡ್ಡ ಕೆಲಸ ಮಾಡ್ತಿ

ದೀನೀ೦ತ ಇವತ್ತು ಭಾಷಣ ಕುಟ್ಟೋಕೆ ಒಪ್ಕೊ೦ಡೀದ್ದಾನ೦ತೆ-ಆ ಬರೆಯೋವ್ನು- ಕೃಷ್ಣರಾಜ...ಆ ಮೇಲೆ ಒಬ್ಬಿಬ್ಬರು_"

ಆ ಮೇಲಿನ ಒಬ್ಬಿಬ್ಬರು: ನಾರಾಯಣನ ಹೆಸರು ಅವನ

ನಾಲಿಗೆಯ ತುದಿಯ ಮೇಲೆ ಇದ್ದಿರಬೇಕು.ಆದರೆ ಆತ ಹೇಳಲಿಲ್ಲ.

"ಏನ್ಮಾಡ್ಬೇಕೂ೦ತೀಯ ಇವರ್ನೆಲ್ಲ?"

"ಮುಗಿಸ್ಬಿಡೋದರಿ೦ದ ಹಿಡಿದು ಕೈಕಾಲು ಮುರಿದ್ದಾಕೋ

ವರಗೆ ಏನು ಬೇಕಾದರೂ !"

ಸಿಗರೇಟು ಹಚ್ಚಿ ಹೊಗೆಯ ಉಗುಳು ಹೊರಹಾಕುತ್ತಾ ಹೇಳಿದೆ.

" ಸರಿ..... ಅಷ್ಟು ಮಾಡ್ತೀನಿ."!

ಆ ಸ್ವರ ನನ್ನದು ಹೌದೋ ಅಲ್ಲವೋ ಎನ್ನುವ ಹಾಗೆ ವಿರೂಪ