ಪುಟ:Vimoochane.pdf/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಾಗಿತ್ತು. ಶ್ರೀಕ೦ಠ ನಕ್ಕ .

"ಭೇಷ್ ಆದೀಗ ಗ೦ಡಸ್ತನ ಸರಿಯಾದ ಸ್ನೇಹದ ಕಾಣಿಕೆ

.....ನೀನು ಶಾರದೇನ ಅತ್ತಿಗೆ ಆಂತ ದೂರವಿಟ್ಟಿರೋದಕ್ಕಿ೦ತಲೂ ಆದು ದೊಡ್ಡದು."

"ಸುಮ್ನಿರು ಕಂಠಿ .ಎ೦ಥ ಮಾತು!"

ಆತ ಸುಮ್ಮನಾದ.ಆ ಮೌನದ ನಿಮಿಷಗಳಲ್ಲಿ ಅವನು ಏನನ್ನೋ

ಯೋಚಿಸುತ್ತಿದ್ದಂತೆ ತೋರಿತು. ಮೌನವನ್ನು ಮುರಿದು ಅವನೆ೦ದ:

" ನಿನ್ನ ಪರೀಕ್ಷೀಸೋಣಾಂತ ಹೇಳ್ದೆ-ಅಷ್ಟೆ . ಮರೆತ್ಬಿಡು

ಅದನ್ನ."

ಅದು ನಿಜವಾಗಿತ್ತೆ? ನಾನು ಆ ಕೆಲಸವನ್ನು ಮಾಡಲಾರೆನೆಂಬ

ಸಂದೇಹದ ಕೀಟ ಅವನನ್ನು ಕೊರೆಯುತ್ತಿರಲಿಲ್ಲವೆ?

ಆ ವಿಷಯ ಹೆಚ್ಚು ಯೋಚಿಸಿ ತಲೆಕೆಡಿಸಿಕೋಳ್ಳಲು ನಾನು

ಇಷ್ಟಪಡಲಿಲ್ಲ.

ನಿನ್ನಿಷ್ಟ ಎಂದು ಸುಮ್ಮನಾದೆ.

ನಾನು ಸುಮ್ಮನಾದ್ರು ಶ್ರಿಕಂಠ ಸುಮ್ಮನಿರಲಿಲ್ಲ.

" ಎಲ್ಲಾದರು ಹೋಗೋಣವೇನೋ ಸಾಯಂಕಾಲ?"

ಎಂದು ಆತ ಕೇಳಿದ.

ನನಗೆ ಯಾವುದು ಇಷ್ಟವಿರಲಿಲ್ಲ.ಹೃದಯವನ್ನು ಯಾರೋ

ಹರಿತವಿಲ್ಲದ ಕತ್ತಿಯಿಂದ ನೋಯಿಸಿ ನೋಯಿಸಿ ಕೊಯ್ಡ ಹಾಗಾಗು ತ್ತಿತ್ತು.

ಮೈಕೈ ನೋವು ಕಂಠಿ. ಹೊಟ್ಟೀಲಿ ಏನೋ ಆಗ್ತಾ ಇದೆ.

ನಾನು ಎಲ್ಲಿಗೂ ಬರೋದಿಲ್ಲ.

ಅಸಮಾಧಾನಗೊಳ್ಳುತ್ತ ಆತ ನನನ್ನು ನೋಡಿದ.

"ದುಃಖವಾಗುತ್ತಾ ಕಂಠಿ ? ನಿರೀಕ್ಷಿಸಿದಷ್ಟು ಪ್ರಯೋಜನ

ನನ್ನಿಂದ ನಿನಗೆ ಇಗ್ತಾ ಇಲ್ಲ ಅಲ್ಲವೆ?"

"ಯಾಕೆ ಹಾಗಂತೀಯ?"