ಪುಟ:Vimoochane.pdf/೩೧೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಕುಣೆಯುತ್ತಿದ್ದುವು. ಎಂಥದೊಂದು ಕೆಲಸವನ್ನು ನನಗ ವಹಿಸಿ ಕೂಡಲು ಶ್ರೀಕಂಠ ಯೋಚಿಸಿದ ನಾನು ಆ ಕೆಲಸವನ್ನು ಮಾಡ ಭೇಕೆಂಬ ಉದ್ದೇಶ ನಿಜವಾಗಿಯೂ ಆತನಿಗೆ ಇತ್ತೊ-- ಅಥವಾ ನನ್ನನ್ನು ಪರೀಕ್ಷಿಸಲೆಂದು ಹಾಗೆ ಮಾಡಿದ್ದನೊ. ಯಾವೊದೋ ಒಂದು ಘಳಿಗೆಯಲ್ಲಿ, ಅ ಕೇಲಸವನ್ನು ಮಾಡುವುದಾಗಿಯೂ ನಾನು ಒಪ್ಪಿದ್ದೆನಲ್ಲ!

ಅಂತೂ ನನ್ನ ಕೈ ಹೊಲಸಾಗಬೇಕಾಗೀದ್ದ ಫ್ರಮೇಯವೊಂದು

ತಪ್ಪಿ ಹೋಯಿತು.

ನಾಣಿ ನಾಣಿಗೆ ಏನಾದರೂ ಆಪಾಯವಾಗಲಾರದಲ್ಲವೆ?

ಒಂದು ವೇಳೆ ಶ್ರಿಕಂಠನ ಯೋಜನೆ ಕಾರ್ಯಗತವಾದುದೇ

ಆದರೆ--?

ಮನುಷ್ಯನಾದ ನಾನು, ಮುಂದಾಗಿ ಹೋಗಿ ನಾರಾಯನಣನಿಗೆ

ಗಂಡಾಂತರದ ಸೂಚನೆಕೊಡುವುದು ನ್ಯಾಯವಾಗಿತ್ತು. ಅದು ನನ್ನ ಕರ್ತವ್ಯವೂ ಆಗಿತ್ತೇನೊ?

ಆದರೆ, ಶ್ರೀಕಾಂಠ ಸಹವಾಸದಲ್ಲಿ ಇಷ್ಟು ವರ್ಷಗಳಿದ್ದ ಮೇಲೆ

ಹಾಗೆ ಮಾಡುವುದರಿಂದ, ಅತನೆಗೆ ನಾನು ಅನ್ಯಾಯ ಮಾಡಿದಂತೆ ಗೊತಿತ್ತಲ್ಲವೆ?

ಹಾಗಾದರೆ ಯಾವುದು ನ್ಯಾಯ? ಯಾವುದು ಅನ್ಯಾಯ?

ಏನಾದರೂ ಸರಿಯೆ ನಾರಾಯಣನಿಗೆ ಮಾತ್ರ ಏನು ಆಗ

ದಿರಲೆಂಬುದೇ ನನ್ನ ಹಾರೈಕೆಯಾಗಿತ್ತು.

ನಾರಾಯನಣ ಮತ್ತು ಕಮಲಾ ಒಂದು ರಥದ ಎರಡು ಗಾಲಿ

ಗಳು. ಒಂದು ಗಲಿ ಕಳಚಿದರೆ ಇನ್ನೊಂದು ಅಸಹಾಯವಾಗುವ ಸ್ಥಿತಿ... ಹಾಗಗಬಾರದು....ನಾರಾಯಣನಿಗೇನೂ ಆಗಬಾರದು.

ಅದು ನನ ಜೀವನದ ಇನ್ನೊಂದು ಕೈ ಗೂಡದ ಬಯಕೆ

ಯಾಯಿತೆಂದು ಬೆಳಗು ಮುಂಜಾನೆ ತಿಳಿಯಿತು.

ಕಾಫಿಗೆಂದು ಹೋಟಿಲಿಗೆ ಹೋದವನು, ಗಿರಾಕಿಗಳು ಹಲ