ಪುಟ:Vimoochane.pdf/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಲ್ಲೇ ಇದ್ದ ಖಾಲಿ ಬಾಟಲಿಗಳನ್ನೂ ನೋಡಿ ಶ್ರೀಕಂಠ ಮುಗುಳ್ನಕ್ಕ.

"ಹ್ಯಾಗಿದೆ ಚಂದ್ರೂ ಹೊಟ್ಟೆ ನೋವು?”

"ಸ್ವಲ್ಪ ಮೇಲು ಕಂಠಿ"

"ಷೇವ್ ಮಾಡ್ಕೊಂಡು ಬಟ್ಟೆ ಹಾಕ್ಕೊ.....ಎಸ್ಮೀನಾದವರ್ನ ನೋಡೊಂಡು ಬರೋಣ."

ನಾನು ಮುಖಕೌರ ಮಾಡಿಕೊಳ್ಳುತಿದ್ದಂತೆ, ಕನ್ನಡಿಯಲ್ಲಿ ನನ್ನ ಮುಖವನ್ನು ಪರೀಕ್ಷಿಸಿದೆ. ಮಾಟವಾಗಿಯೇ ಇದ್ದ ಆ ಮುಖದ ಆ ವರಣದ ಹಿಂದೆ ಎಂಥೆಂಥ ಭಾವನೆಗಳಿದುವು! ಆದರೆ ಹೊರಗೆ ಏನಾ ದರೂ ತೋರುತಿತ್ತೆ ? ಮುಖವೇ ಮುಖವಾಡವಾಗಿತ್ತಲ್ಲವೆ ? ಆ ಮುಸುಕನ್ನೆತಿ ಒಳಕ್ಕೆ ಇಣಕಿನೋಡುವುದು ಶ್ರೀಕಂಠನಿಗೆ ಸಾಧ್ಯವಿತ್ತೆ?

ಕನ್ನಡಿಯಲ್ಲಿ ಬಾರಿ ಬಾರಿಗೂ ಮುಖ ನೋಡುತ್ತ ನೋಡುತ್ತ ನನಗೆ ನನ್ನ ಬಗೆಗೇ ಆತ್ಮ ವಿಶ್ವಾಸವೆನಿಸುತಿತ್ತು. ನಾನು ದಿನ ದಿನಕ್ಕೂ ದುರ್ಬಲನಾಗುತಿದ್ದೆನೆಂದು ಯೋಚಿಸುತಿದ್ದುದು ತಪ್ಪಾಗಿತ್ತ ಲ್ಲವೆ? ಹೃದಯವೇನೊ ದುರ್ಬಲವಾಗುತ್ತ ಸಾಗಿರಬಹುದು. ಕರುಳಿನ ಬಾಧೆಯಿಂದ ದೇಹವೂ ದುರ್ಬಲವಾಗಿರಬಹುದು. ಆದರೆ ಮುಖ ಚರ್ಯೆ ನನಗೆ ರಕ್ಷಾಕವಚವಾಗಿತ್ತಲ್ಲವೆ ?

ಹರಿತವಾದ ಬ್ಲೇಡು ದಿನದ ಗಡ್ಡವನ್ನು ಬಲಿತೆಗೆದು ಕೊಳ್ಳು ತಿತ್ತು, ಸಿಗರೇಟು ಸೇದುತ್ತ ಸುಖಾಸೀನನಾಗಿದ್ದ ಶ್ರೀಕಂಠ ಕೇಳಿದ.

"ಪೇಪರು ಓದಿದೆಯಾ ?"

"ಈಗ್ತಾನೇ ಓದ್ದೆ."

"ನಿಜ ಹೇಳ್ತೀಸೀ ಚಂದು .... ನೀನು ನಾಣಿಗಾಗಿ ಮರು ಗೋದ್ನ ನೋಡಿ, ನನಗೂ ಅವನ್ಮೇಲೆ ಒಂದು ರೀತಿ ಕನಿಕರ ಹುಟ್ಟಿದೆ. ಆದರೆ ಏನ್ಮಾಡೋಕೆ ಸಾಧ್ಯವಿತ್ತು ಹೇಳು ?"

ಕೇಳಬಾರದೆಂದಿದ್ದರೂ ಪ್ರಶ್ನೆ ನನ್ನ ಹಿಡಿತ ತಪ್ಪಿಸಿಕೊಂಡು ಹೊರಟಿತು :

"ಆಸ್ಪತ್ರೆಲಿದಾರೇನು ಅವರೆಲ್ಲ?"

"ಫೋನ್ ಮಾಡಿದ್ದೆ ನಿನ್ನೆ ರಾತ್ರೆನೆ. ನಾಣಿ ಮತ್ತು"